ಪುಟ:ಪಂಡಿತರಾಜ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ಯೂಷಣ. vvvvvv vvJ - - - - f + } - ಅದರ ಮಹತಿಯನ್ನು ಬೆಳೆಸಿದ ವೀರರಲ್ಲಿ ಇವನೊಬ್ಬನು. ಈ ಚಿಕ್ಕ ಪುಸ್ತಕವನ್ನು ಬರೆ ಯುವಾಗ್ಗೆ ಮುಖ್ಯವಾಗಿ ( ಕೈ. ವಾ. ವಿದ್ಯಾವಾಚಸ್ಪತಿ ಅಬ್ಬಾಶಾಸ್ತ್ರೀ ರಾಶಿವಡೆಕರ' ಈ ಮಹನೀಯರು ಸಂಸ್ಕೃತ ಚಂದ್ರಿಕೆಯಲ್ಲಿ ಜಗನ್ನಾಥ ಪಂಡಿತನ ವಿಷಯವಾಗಿ ಬರೆ ದಿಟ್ಟ ಲೇಖನಗಳೇ ಸಹಾಯಕಗಳಾಗಿವೆ. ಚಂದ್ರಿಕೆಯ ಸಂಚಿಕೆಗಳಿಂದಲೇ ಬಹು ಭಾಗವು ಉಪಹೃತವಾಗಿದೆ. ಉಳಿದೆಡೆಗೆ ನಿರ್ಣಯನಾಗರ ಮುದ್ರಾಲಯದ ಪಂಡಿತರು ಪಂಡಿತರಾಜನ ಆಯಾ ಗ್ರಂಥಗಳ ಆರಂಭದಲ್ಲಿ ಬರೆದಿರುವ ಪ್ರಸ್ತಾವನೆಗಳೂ, ಟಿಪ್ಪಣೆ ಗಳೂ ಸಹಾಯವನ್ನು ಮಾಡಿವೆ. ಪಂಡಿತರಾಜನ ಗ್ರಂಥಗಳಂತೂ ಈ ಚರಿತವನ್ನು ಬರೆ ಯಲಿಕ್ಕೆ ಸಹಾಯಮಾಡಿವೆ ಎಂಬ ಮಾತನ್ನು ಹೇಳುವ ಕಾರಣವೇ ಇಲ್ಲ. ಈ ಪುಸ್ತಕದ ವಾಚನದಿಂದ ಸಂಸ್ಕೃತಭಾಷಾಪ್ರಸಾರದ ಕಡೆಗೆ ಕೆಲಮಟ್ಟಿಗಾದರೂ ಜನರ ಲಕ್ಷವು ತೊಡಗಿದರೆ ಪ್ರಸ್ತುತಲೇಖಕನು ತನ್ನ ಶ್ರಮವು ಸಫಲವಾಯಿತೆಂದು ಎಣಿಸುತ್ತಾನೆ. ಕಡೆಗೆ ಪುಸ್ತಕವನ್ನು ಬರೆಯುವಾಗ್ಗೆ ಸಹಾಯವನ್ನು ಮಾಡಿದ ಗ್ರಂಥಕರ್ತರ ಉಪಕಾರವನ್ನು ಮನ್ನಿಸಿ, ಪುಸ್ತಕವನ್ನು ಬರೆಯಲಿಕ್ಕೆ ಉತ್ತೇಜನವನ್ನು ಕೊಟ್ಟು ಮುದ್ರ ಣದ ಭಾರವನ್ನು ಹೊತ್ತ ಕರ್ಣಾಟಕ ವಿದ್ಯಾವರ್ಧಕ ಸಂಘಕ್ಕೆ ಪ್ರಸ್ತುತ ಲೇಖಕನು ಋಣಿಯಾಗಿರುತ್ತಾನೆ. ಗಲಗಲಿ ವಿದ್ವದ್ವಿಧೇಯ, ಜುಲೈ ೧೯೧೭ ಕೇಶವಶರ್ಮಾ. ಗಲಗಲ }