ಪುಟ:ಪದ್ಮರಾಜಪುರಾನ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ ವ ತ ರ ಣಿ ಕೆ . --- ( ಅಬಿಳಶಾಸ್ತ್ರಸಾರ ಎಂದು ವಿವರಿಸಲ್ಪಡುವ ಈ ಪದ್ಮರಾಜ ಪುರಾ ಣವು ಪದ್ಮಣಾಂಕ ಮಹಾಕವಿಯಿಂದ ರಚಿಸಲ್ಪಟ್ಟಿದೆ. ಇದರ ಕಥಾನಾಯ ಕರು ಕೆರೆಯ ಪದ್ಮಣಾಗ್ಯರೆಂಬ ಮಹಿಮರು * ಇವರು ಈಶಾಪರಾವತಾರ ರೆಂತಲೂ « ಶ್ರೀಶಿವಾದ್ರೆತಸಾಕಾರ ಸಿದ್ದಾಂತ ಪ್ರತಿಷ್ಟಾಪನಾಚಾರ ರೆಂತ ಲೂ ಹೊಗಳಲ್ಪಟ್ಟಿದ್ದಾರೆ. ಈ ಮಹಾತ್ಮರ ಚರಿತ್ರೆಯೇ ಈ ಗ್ರಂಥದಲ್ಲಿ ವಿಸ್ತಾರವಾಗಿ ಹೇಳಲ್ಪಟ್ಟಿದೆ. ಇದರ ಕವಿತಾಗಾಂಭೀರವೂ, ವಾಗೈಖರಿ ಯ ಅಸಾಧಾರಣವಾದುವುಗಳು. ಇದರಲ್ಲಿ ಭಕ್ತಿರಸವು ಪ್ರಧಾನವಾಗಿದ್ದ ...ರೂ ಅಲ್ಲಲ್ಲಿ ಸಮಯೋಚಿತವಾಗಿ ಇತರ ರಸಗಳೂ ಪ್ರಕಟಿತವಾಗಿವೆ. ಸರ್ವ ಕಾವ್ಯಲಕ್ಷಣಗಳೂ ಇರುವುದರಿಂದ, ಇದನ್ನು ಮಹಾಕಾವ್ಯವೆಂದೇ ಹೇಳಬೇ ಕು. ವರ್ಣಕ ಕವಿತ್ವವಾದಾಗ್ಯೂ ಪುರಾತನವಸ್ತುಕ ಕವಿತ್ವಗಳಿಗೆ ಸಮಾನ ವಾದ ಉತ್ಕೃಷ್ಟ ಶೈಲಿಯಿಂದ + ಬರೆಯಲ್ಪಟ್ಟಿದೆ. ವರ್ಣಕ ಕವಿತ್ವಗಳಲ್ಲಿ ಇದರಷ್ಟು ಉದ್ದಾಮ ಗ್ರಂಥವು ಇದುವರೆಗೆ ಯಾವುದೂ ಹೊರಪಟ್ಟಿಲ್ಲ. ಈಗ ಪ್ರಚಾರದಲ್ಲಿರುವ ವಾರ್ಧಿಕ ಷಟ್ಟದಿಯ ಗ್ರಂಥಗಳಲ್ಲಿ ಹಂಪೆಯ ವಿರೂ ಪಾಕ್ಷ ಪಂಡಿತಾರಾಧ್ಯರ ಚೆನ್ನ ಬಸವಪುರಾಣವೇ ಪುರಾತನವಾದುದು. ಅದ

  • ಇವರು ನರಸಿಂಹಬಲ್ಲಾಳಭೂಪತಿಯ ಮಂತ್ರಿಯಾಗಿ ಕಲವುಕಾಲವಿದ್ದರು. ಆಗ ಬೇಲೂರಲ್ಲಿ ಕೆರೆಯ ಕಟ್ಟಿಸುವುದಕ್ಕಾಗಿ ದೊರೆಯಿಂದ ಕೊಡಲ್ಪಟ್ಟ ಹನ್ನೆರಡುಸಾವಿರ ಹೊನ್ನು ಗಳನ್ನು ಶಿವರೂಪಿಯಾದ ವಿಟಜಂಗಮನಿಗೆ ಪದ್ಮರಸರು ಕೊಟ್ಟು ಬಿಟ್ಟರು. ಈ ವರ್ತಮಾನವು ಚಾಡಿಕಾರರಿಂದ ದೊರೆಗೆ ತಿಳಿದು ಮಂತ್ರಿಯನ್ನು ಕರೆಯಿಸಿ ಕೆರೆಯನ್ನು ನೋಡಬೇಕೆನ್ನಲು ಕರೆ ದುಕೊಂಡುಹೋಗಿ ತಮ್ಮ ಮಹಿಮಾಚಲದಿಂದ ಕರೆಯನ್ನು ನಿರ್ಮಾಣಮಾಡಿ ತೋರಿಸಿದರು. ಆ

ರಿಂದ ಅವರಿಗೆ ಕರೆಯಪದ್ಮರಸರೆಂದು ಹೆಸರುಂಟಾಯಿತು, + ಈ ವಿಷಯದಲ್ಲಿ ಮೊದಲನೆಸಂಧಿ ೩೦, ಮತ ೩೭ ರಿಂದ ೫೦ ರ ವರೆಗಿನ ಪದ್ಯ ಗಳನ್ನು ನೋಡಿ,