ಪುಟ:ಪೈಗಂಬರ ಮಹಮ್ಮದನು.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹನ್ನೊಂದನೆಯ ಅಧ್ಯಾಯ ಮಕ್ಕಾ ನಗರದ ಮುತ್ತಿಗೆ ಹುದೈಬಿಯಾವಿನ ಕರಾರಿನ ಮೇರೆಗೆ, ಮಾರನೆಯ ವರುಷದ. ವರೆಗೂ ಮಹಮ್ಮದನೂ ಅವನ ಕಡೆಯವರೂ ಮಕ್ಕಾ ಯಾತ್ರೆಗೆ ಹೋಗುವಂತಿರಲಿಲ್ಲ. ಯಾತ್ರೆ ಹೊರಡುವ ಸವ ಮಕ್ಕಾ ಯಾತ್ರೆ ಯವು ದೊರೆತೀತೇ ಎಂದು ಅವರೆಲ್ಲರೂ ತವಕಸಡು ತ್ರಿದ್ದರು. ಬೈಬರ್‌ ಮುತ್ತಿಗೆಯೇ ಮುಂತಾದ ಕಾರ್ಯ ಕಲಾಪಗಳು ಮುಗಿದ ಮೇಲೆ, ಕ್ರಿ. ಶ. ೬೨೯ನೆಯ ಮಾರ್ಚಿ ತಿಂಗಳಲ್ಲಿ, ಮಹಮ್ಮದನು ಎರಡು ಸಾವಿರ ಮಂದಿ ಮಹಮ್ಮದೀಯ ರೊಡನೆ ಮಕ್ಕಾ ನಗರಕ್ಕೆ ಹೋಗಿ ಒಪ್ಪಂದದ ಮೇರೆಗೆ ಮೂರು ದಿನ. ಗಳಲ್ಲಿ ಅಲ್ಲಿಯ ಕೆಲಸಗಳನ್ನು ಸಾಂಗವಾಗಿ ನೆರವೇರಿಸಿಕೊಂಡು. ಮೆದೀನಾ ನಗರಕ್ಕೆ ಹಿಂದಿರುಗಿದನು. ಮಹಮ್ಮದನಿಗೆ ಅವನ ಶಿಷ್ಯರು ತೋರಿಸುತ್ತಿದ್ದಷ್ಟು ಪ್ರೀತಿ ಗೌರವಗಳು ಖುಸ್ತು, ಕೈಜರ್‌ ಮುಂತಾದ ಪ್ರಭುಗಳಿಗೂ ಅವರ ಅಧೀನರಿಂದಲೂ ಪ್ರಜೆಗಳಿಂದಲೂ ದೊರೆಯು ಒಪ್ಪಂದವನ್ನು ಮಾರಿ ತ್ತಿರಲಿಲ್ಲ. ಮಹಮ್ಮದನು ಮಕ್ಕಾ ನಗರಕ್ಕೆ ಹೋi) ನಡೆದುದಕ್ಕೆ ಶಿಕ್ಷೆ ದ್ದಾಗ ಅವನ ಶತ್ತು) ವರ್ಗದವರು ಇದನ್ನು ತಮ್ಮ ಕಣ್ಣಾರೆ ನೋಡಿ ಅಸೂಯೆಯಿಂದ ಉರಿದುಬಿದ್ದು, ಒಪ್ಪಂದದ ಷರತ್ತುಗಳನ್ನೂ ಲಕ್ಷಿಸದೆ, ಮಹಮ್ಮದನ ಆಶ್ರಿತ ವರ್ಗಕ್ಕೆ ಸೇರಿದ ಖಜಾ ಬುಡಕಟ್ಟಿನ ಕೆಲವರನ್ನು ನಿಷ್ಕಾರಣವಾಗಿ ಕೊಂದರು. ಮಹಮ್ಮದನು ತನ್ನ ಆಶ್ರಿತರ ಪ್ರಾರ್ಥನೆಯಂತೆ, ಹಿಂದಣ ವಾಗ್ದಾನ ಕ್ಕನುಸಾರವಾಗಿ ಅವರ ಪಕ್ಷವನ್ನವಲಂಬಿಸಿ, ಕೊಲೆಗೀಡಾದವರ ಕಡೆ ಯವರಿಗೆ ಪರಿಹಾರ ದ್ರವ್ಯವನ್ನು ಕೊಡಬೇಕೆಂದೂ, ಇಲ್ಲದಿದ್ದರೆ ಕೊಲ್ಲ ಲ್ಪಟ್ಟವರ ಶತ್ರುಗಳ ಪಕ್ಷವನ್ನಾದರೂ ಬಿಟ್ಟುಬಿಡಬೇಕೆಂದೂ, ಈ ಕೊಲೆ ಗೆಲಸವನ್ನು ಅಕಾರಣವಾಗಿ ನಡೆಸಿದ್ದ ಕೊರೈಮ್ ಮನೆತನದವರಿಗೆ ತಿಳಿಸಿದನು. ಅವರು ಅದಕ್ಕೆ ಕಿವಿಗೊಡದೆ ಅಲಕ್ಷ್ಯ ಭಾವದಿಂದಿದ್ದು