ಪುಟ:ಪೈಗಂಬರ ಮಹಮ್ಮದನು.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

no ರೂಪ ಪೈಗಂಬರ ಮಹಮ್ಮದನು ಹದಿಮೂರನೆಯ ಅಧ್ಯಾಯ ಮಹಮ್ಮದನ ರೂಪವೂ ಗುಣಗಳೂ ಮಹಮ್ಮದನ ಜೀವನ ಚರಿತ್ರೆಯನ್ನು ಪರಿಸಮಾಪ್ತಿಗೊಳಿಸುವು ದಕ್ಕೆ ಮೊದಲು ಅವನ ರೂಪವನ್ನೂ ಗುಣಗಳನ್ನೂ ಸಂಕ್ಷೇಪವಾಗಿ ವಿಚಾರಮಾಡುವುದು ಆವಶ್ಯಕ. ಮಹಮ್ಮದನು ಸ್ಪುರದ್ರೂಪಿ ; ಅವನ ದೇಹವು ತಿಳಿಗೆಂಪಿನಿಂದ ಕೂಡಿದ ಬಿಳುಪು ಛಾಯೆಯಿಂದ ಕಂಗೊಳಿಸು ತಿದ್ದಿತು. ಅವನು ಅಷ್ಟು ಎತ್ತರವಾಗಿಯೂ ಇರಲಿಲ್ಲ, ಗಿಡ್ಡಾಗಿಯ ಇರಲಿಲ್ಲ; ಎತ್ತರಕ್ಕೆ ತಕ್ಕಷ್ಟು ದಪ್ಪವಾಗಿದ್ದು, ದೃಢಕಾಯ ನಾಗಿದ್ದನು. ಅವನ ಕೂದಲು ಅಚ್ಚ ಕಪ್ಪಾಗಿಯೂ, ಗುಂಗುರು ಗುಂಗುರಾಗಿಯೂ ಇದ್ದು ಕಿವಿಯ ಹಾಲೆಗಳ ವರೆಗೂ ಜೋಲಾಡುತ್ತ ಚಕ ಚಕಿಸುತ್ತಿದ್ದಿತು ; ಮುಖವು ತುಂಬಿಕೊಂಡು ಮನೋಹರವಾ ಗಿದ್ದಿತು; ನೋಡಿದವರೆಲ್ಲರೂ ಅದನ್ನು ಚಂದ್ರಮಂಡಲಕ್ಕೆ ಹೋಲಿಸು ತಿದ್ದರು. ಹಣೆಯು ವಿಶಾಲವಾಗಿದ್ದಿತು. ಕಣ್ಣುಗಳು ಅಗಲವಾಗಿದ್ದು ಅಲ್ಪ ಸ್ವಲ್ಪ ಕೆಂಪು ಛಾಯೆಯಿಂದ ಕೂಡಿದ್ದುವು. ಹಲ್ಲುಗಳು ಒತ್ತಾ ಗಿಯ ಶುಭವಾಗಿಯೂ ಇದ್ದುವು. ಎದೆಯು ಅಗಲವಾಗಿದ್ದು ಅವನ ವೀರತ್ವವನ್ನು ಸೂಚಿಸುವಂತಿದ್ದಿತು. ಹೆಗಲಿನ ಬಳಿಯಲ್ಲಿ ಗುಂಡಗಿರುವ ಕರಿಯ ಮತ್ತಿಯೊಂದಿದ್ದಿತು. ತೊಡೆಗಳೂ ತೋಳುಗಳೂ ತುಂಬಿ ಉಬ್ಬಿಕೊಂಡಿದ್ದು ವು. ಮಹಮ್ಮದನು ವೃದ್ಧಾಪ್ಯದಲ್ಲಿ ಕೂಡ ಬಲ ಶಾಲಿಯಾಗಿಯೂ ದೃಢಾಂಗನಾಗಿಯೂ ಇದ್ದನು. ಅವನ ಹಲವು ಸದ್ಗುಣಗಳನ್ನು ಈ ಮೊದಲೇ ಆ ಆ ಸಂದರ್ಭಗಳಲ್ಲಿ ಸೂಚಿಸಿರುವೆ ವಾದರೂ ಇನ್ನೂ ಕೆಲವು ಸಂಗತಿಗಳನ್ನು ವಿಚಾರ ಮಾಡುವುದು ಯುಕ್ತವಾಗಿದೆ. ಮಹಮ್ಮದನು ಉದಾರ ಚರಿತನಾದ ಧರ್ಮಾತ್ಮನು. ಅವನು ಪ್ರತಿ ದಿನವೂ ದೊರೆತ ಹಣವನ್ನು ಅಂದಿನ ರಾತ್ರಿಯೊಳಗಾಗಿ ಧರ್ಮ ಮಾರ್ಗದಲ್ಲಿ ವೆಚ್ಚ ಮಾಡುತ್ತಿದ್ದನು ; ರಾತ್ರಿಯಾದಮೇಲೂ ಹಣ