ಪುಟ:ಪೈಗಂಬರ ಮಹಮ್ಮದನು.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ವಾಗಿ ವರ್ತಿಸುತ್ತಿದ್ದರು ; ಉಳಿದವರು ಇದನ್ನು ಲಕ್ಷಿಸದೆ ಕೇವಲ ದುರಭಿಮಾನದಿಂದ ವಿಪರೀತ ವರ್ತನೆಯನ್ನು ಕೈಕೊಂಡರು. ಘಜನಿಯ ಮಹಮ್ಮದನೇ ಮುಂತಾದವರು ಇಸ್ಲಾಂ ಮತದ ಈ ಉದಾತ್ತ ತತ್ಯ ನನ್ನ ನುಸರಿಸಬಾರದಾಗಿದ್ದಿತೆ ? ಮತ ಪ್ರಸಾರಣೆಗಾಗಿ ಯುದ್ಧ ಮಾಡುವುದಕ್ಕೆ ಅವಕಾಶಕೊಟ್ಟಿದೆ ಎಂಬ ಅಪರಾಧವನ್ನು ಇಸ್ಲಾಂ ಮತದ ಮೇಲೆ ಹೇರುವುದು ನ್ಯಾಯ ವಲ್ಲ. ದುರಭಿಮಾನದಿಂದ ಕೂಡಿದ ಕೆಲವು ಮಂದಿ ಯುದ್ಯೋದ್ಯಮ ಘಾತುಕರು ನಡೆಯಿಸಿದ ಅ ತಾ ಚಾ ರ ಗಳಿಗಾಗಿ .ದಿಂದ ಮತ ಪ್ರಸಾರಣೆ ಮಾಡಲು ಇಸ್ಲಾಂ ಮತಕ್ಕೆ ಈ ವಿಧದ ಅಪವಾದವು ಬಂದಿದೆ. ಅನುಮತಿಯಿಲ, ಮಹಮ್ಮದೀಯರು ಇತರ ಮತ ಸಿದ್ದಾಂತಗಳನ್ನು ಅವಲಂಬಿಸಬೇಕಾದ ಆ ವ ಶೈಕತೆ ಯಿಲ್ಲದಿದ್ದರೂ, “ಅವರು ಅ೦ತಹ ಮತಗಳ ವಿಷಯವಾಗಿ ದೋಷಾರೋಪಣೆ ಮಾಡಕೂಡ ದೆಂದೂ, ಎಲ್ಲ ಮತ ಸ್ಥಾಪಕರ ವಿಷಯದಲ್ಲಿಯೂ ಅವರು ಗೌರವದಿಂದಿರ ಬೇಕೆಂದೂ, ಮಹಮ್ಮದನು ಬೋಧಿಸಿದ್ದನು. ಆದಕಾರಣ, ಅನ್ಯ ಮತೀ ಯರ ಮೇಲೆ ಯುದ್ದ ಮಾಡಿ ಅವರನ್ನು ಬಲಾತ್ಕಾರದಿಂದ ಇಸ್ಲಾಂ ಮತಕ್ಕೆ `ಸೇರಿಸಿಕೊಳ್ಳಲು ಮಹಮ್ಮದನು ಅನುಮತಿಯನ್ನು ಕೊಟ್ಟು ತಾನೂ ಅದೇ ರೀತಿಯಲ್ಲಿ ವರ್ತಿಸಿದನೆಂದು ಹೇಳುವುದೂ, ಕತ್ತಿಯನ್ನು ಝಳಪಿಸಿ ಪ್ರಾಣ ಭೀತಿಯನ್ನು ಹುಟ್ಟಿಸಿ ಜನರು ಇಸ್ಲಾಂ ಮತವನ್ನವಲಂಬಿಸು ವಂತೆ ಮಾಡಬಹುದೆಂದು ಖುರಾನಿನಲ್ಲಿ ಸೂಚನೆಯಿದೆಯೆಂದು ಹೇಳು ವುದೂ ಸುತರಾಂ ನ್ಯಾಯವಲ್ಲ. ಯಾರಾದರೂ ಧೂರ್ತರು ಹಾಗೆ ಮಾಡಿದ್ದರೆ, ಅದಕ್ಕೆ ಇಸ್ಲಾಂ ಮತವು ಹೊಣೆಯಲ್ಲ. ಯುದ್ಧ ಮಾಡಲು ಮಹಮ್ಮದನು ಅನುಮತಿಯನ್ನು ಕೊಟ್ಟಿ ದ್ದರೂ ಯಾವ ಸಂದರ್ಭಗಳಲ್ಲಿ ಯುದ್ಧ ಮಾಡಬಹುದೆಂದು ಹೇಳಿರುವ ನೆಂಬ ಅಂಶವನ್ನು ನಾವು ಗಮನಿಸಬೇಕು. ತಮ್ಮ ಯುದ್ಧಕ್ಕೆ ಮತ ಧರ್ಮಗಳಿಗೆ ಚ್ಯುತಿಯುಂಟಾಗುವಂತೆ ಇತರರು ಅನುಮತಿ ಕತ್ತಿಯನ್ನೆ ತಲು ಸಿದ್ದರಾದರೆ, ಆಗ ಧರ್ಮೋದ್ಧಾರ ಕ್ಕಾಗಿ ಅಗತ್ಯವಾಗಿ ಯುದ್ಧ ಮಾಡಬಹುದೆಂಬುದು