ಪುಟ:ಪೈಗಂಬರ ಮಹಮ್ಮದನು.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೮ ಪೈಗಂಬರ ಮಹಮ್ಮದನು ತಕ್ಕಂತೆ ಅದನ್ನು ಕೊಟ್ಟಂತೆಯೇ ಭಾವಿಸಿ, ನ್ಯಾಯ ಸ್ಥಾನದಲ್ಲಿ ಆ ದ್ರವ್ಯವನ್ನು ಅವಳಿಗೆ ಅವಶ್ಯವಾಗಿ ಕೊಡಿಸಬಹುದು. ಇಸ್ಲಾಂ ಮತವು. ಹುಟ್ಟುವುದಕ್ಕೆ ಮೊದಲು, ಪತಿಯು ತನ್ನ ಪತ್ನಿಯನ್ನು ವಿಕೀತಳಾದ ದಾಸಿಯಂತೆ ಭಾವಿಸಬಹುದಾಗಿದ್ದಿತು. ಆದರೆ, ಇಸ್ಲಾಂ ಮತದ ಮೇರೆಗೆ ಇದಕ್ಕೆ ಅವಕಾಶವು ತಪ್ಪಿತು. ಸ್ತ್ರೀಯರ ಸ್ವಾತಂತ್ರವು ಹೆಚ್ಚಿ, ಇಸ್ಲಾಂ ಧರ್ಮ ಶಾಸ್ತ್ರಗಳಲ್ಲಿ ಹೇಳಿರುವುದಕ್ಕಿಂತ ಹೆಚ್ಚಿನ ಅಧಿಕಾರವು ಯಾವುದನ್ನೂ ಗಂಡನು ಹೆಂಡಿತಿಯಮೇಲೆ ನಡೆಯಿಸ ಕೂಡದೆಂದು ನಿಬಂಧನೆಯಾಯಿತು. ಪತಿ ಪತ್ನಿಯರಲ್ಲಿ ಯಾರಾದರೂ ನ್ಯಾಯ ಸ್ಥಾನಕ್ಕೆ ಹೋಗಿ ದಾಂಪತ್ಯ ವಿಚ್ಛೇದ ಮಾಡಿಕೊಳ್ಳಬಹುದು , ಆದರೆ, ಹಾಗೆ ಮಾಡಲು ಸಾಕಾದಷ್ಟು ಕಾರಣವಿರಬೇಕು. ದಾಂಪತ್ಯ ಪರಿತ್ಯಾಗವು ನ್ಯಾಯ ಸಮ್ಮತವಾದರೂ ಭಗವಂತನಿಗೆ ಅದು ಇಷ್ಟ ವಿಲ್ಲದ ಕಾರಣ, ಅಷ್ಟೇನೂ ಧರ್ಮ ಸಮ್ಮತವಲ್ಲವೆಂಬುದೇ ಮಹ ಮ್ಮದನ ಅಭಿಪ್ರಾಯ. “ ದಾಸ್ಯ ನಿವೃತ್ತಿಗಿಂತ ಭಗವಂತನಿಗೆ ಹೆಚ್ಚು ಪ್ರಿಯಕರವಾದುದೂ, ದಾಂಪತ್ಯ ಪರಿತ್ಯಾಗಕ್ಕಿಂತ ಹೆಚ್ಚು ಅಪ್ರಿಯ ವಾದುದೂ ಮತ್ತಾವುದೂ ಇಲ್ಲ ಎಂದು ಮಹಮ್ಮದನು ಹೇಳಿದ್ದಾನೆ. ಮೊನ್ನೆ ಮೊನ್ನೆ ಅಮೆರಿಕಾ ದೇಶದಲ್ಲಿ ವಿಚಿತ್ರವಾದ ಒಂದು ಮೊಕದ್ದಮೆ ನಡೆಯಿತಂತೆ : ಒಂದು ದಿನ ರಾತ್ರಿ ನಾಟಕಾವಲೋಕನಕ್ಕೆ ಹೋಗಿದ್ದ ಇಬ್ಬರು ದಂಪತಿಗಳಲ್ಲಿ ಪತಿಯು ಹಗಲೆಲ್ಲ ಕಾರ್ಖಾನೆಯಲ್ಲಿ ದುಡಿದು ದಣಿದುಬಂದಿದ್ದುದರಿಂದ ಅವನಿಗೆ ಸ್ವಲ್ಪ ನಿದ್ದೆ ಹತ್ತಿತಂತೆ. ನಾಟಕ ಮಂದಿರದಲ್ಲಿ ಇವನು ಹೀಗೆ ನಿದ್ರಿಸುತ್ತಿದ್ದುದನ್ನು ಕಂಡು ಇತರರು ಘೋಳ್ಳೆಂದು ನಕ್ಕರಂತೆ. ಇದರಿಂದ ತನಗೆ ಕೇವಲ ಅಪಮಾನ ವಾದಂತೆ ಪತ್ನಿ ಯು ಭಾವಿಸಿ, ತನಗೆ ಅವನ ಪತ್ನಿಯಾಗಿರುವುದು ಇಷ್ಟ ವಿಲ್ಲವೆಂದೂ, ಆದಕಾರಣ ದಾಂಪತ್ಯ ನಿವೃತ್ತಿಗೆ ಅಪ್ಪಣೆಕೊಡ ಬೇಕೆಂದೂ, ಅವಳು ನ್ಯಾಯ ಸ್ಥಾನಕ್ಕೆ ಮನವೆಯನ್ನು ಬರೆದುಕೊಂಡ ಳಂತೆ, ಕೇವಲ ಕ್ಷುಲ್ಲಕ ಕಾರಣಗಳಿಗಾಗಿ ದಾಂಪತ್ಯ ವಿಚೈತ್ರಿಗೆ ಅನುಮತಿಯನ್ನು ಕೊಡುತ್ತ ಹೋದರೆ, ಸಮಾಜ ವ್ಯವಸ್ಥೆಯ ಕಟ್ಟು ಪಾಡೂ ವಿವಾಹದ ಪವಿತ್ರವಾದ ಉದ್ದೇಶವೂ ಉಳಿಯುವ ಬಗೆ ಹೇಗೆ ?