ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

w ಭಾಷಾಂತರಿಸಿದ ಪುಸ್ತಕಕ್ಕಿಂತ ಸ್ವತಂತ್ರವಾಗಿ ಬರೆದ ಪುಸ್ತಕದ ಯೋಗ್ಯ ತೆಯು ಹೆಚ್ಚಿನದೆಂದು ಹೇಳಲಾಗುವದು, ಯಾಕಂದರೆ ಅನುಭವಜನ, ಹಾಗು ನಿರ್ಧಾರಯುಕ್ತವಾದ ಸಂಗತಿಗಳು ಅದರಲ್ಲಿ ವಿವರಿಸಲ್ಪಟ್ಟಿರುತ್ತವೆ. ಒಂದು ವ್ಯಕ್ತಿಯ ನಿರ್ಧಾರದ ಅಭಿಪ್ರಾಯಗಳ ವಾಚನದಿಂದಲೇ ವಾಚಕರಲ್ಲಿ ಏನಾದರೂ ಹೊಸ ಚೈತನ್ಯವು ಸಂಚರಿಸಿದರ ಸಂಚರಿಸಬೇಕು. ಈ ಬಗೆಯ ವಿಚಾರಕ್ಕೆ, ಹೊಸ ಚೈತನ್ಯಕ್ಕೆ ಪ್ರಸ್ತುತದ ಪುಸ್ತಕದಿಂದ ಬಹುಮಟ್ಟಿಗೆ ಸಹಾಯವಾಗುವದು, ಮನು ಹೃನಿಗೆ ದಾಸ್ಪವೃತ್ತಿಯು ಅಂದರೆ ಸರ್ವಸ್ವೀ ಒಬ್ಬರ ಆಧೀನದಲ್ಲಿರುವದು ಅತ್ಯಂತ ಹೇಯವಾಗಿರುವದು, ಆದ್ದರಿಂದ ಆ ವರಾಧೀನತೆಯನ್ನು ಕ್ರಮಕ್ರಮವಾಗಿಯಾ ದರೂ ಕಡಿಮೆ ಮಾಡಿಕೊಳ್ಳುತ್ತ ಹೋಗುವದು ಪ್ರಗತಿಯ ಲಕ್ಷಣವು, ಪ್ರಗತಿಯನ್ನು ಇಚ್ಚಿಸುವವರು ಇದರಲ್ಲಿ ವಿವೇಚಿಸಿದ ಎಲ್ಲ ಸಂಗತಿಗಳನ್ನು ಚರ್ಚಿಸಿ ಹೊಸ-ಹೊಸ ಸಂಗತಿಗಳನ್ನು ಕಂಡು ಹಿಡಿಯಲೆತ್ನಿಸಬೇಕು, ಅಂದರೆ ಲೇಖಕನ ಶ್ರಮಸಾಫಲ ವಾಗುವದು, ತಮ್ಮ ವಿಚಾರಗಳು ಬಹುಮಾನವಾಗಲಿಕ್ಕಿಲ್ಲ. ಸರ್ವಮಾನ್ಯವಾಗಲಿಕ್ಕಿಲ್ಲ, ಎಂಬ ಕಾಲ್ಪನಿಕ ಅಂಜಿಕೆಯಿಂದ ನಮ್ಮ ಕನ್ನಡಿಗರು ಸ್ವತಂತ್ರ ಪುಸ್ತಕಗಳನ್ನು ಬರೆಯುವ ಸಾಹಸಮಾಡುವದಿಲ್ಲ, ಆದರೆ ಒಂದು ವ್ಯಕ್ತಿಯ ಅನುಭವಕ್ಕೆ ಬಂದ ಸಂಗತಿಗಳು ಹಲವು ವ್ಯಕ್ತಿಗಳ ಅನುಭವಕ್ಕೆ ಬಂದೇತೀರಬೇಕಾಗುವದು ಸ್ವಾಭಾವಿ ಕವು ಇರಲಿ; ಒಟ್ಟಿನಮೇಲೆ ಹೇಳತಕ್ಕದ್ದೆಂದರೆ ಇಹಪರಗಳಲ್ಲಿ ನಖವನ್ನೂ, ಮಾನ ಕೀರ್ತಿಗಳನ್ನೂ ಹೊಂದಲಿಚ್ಚಿಸುವವನು ಇದ್ದ ಸ್ಪಿತಿಯಲ್ಲಿ ಕಾಲಕಳೆಯದ ತನ್ನ ಸ್ಥಿತಿಯ ಆಭ್ಯುದಯವಾಗುವಂತೆ ಆಚರಣೆಯನ್ನಿಡಬೇಕು. ಇದೇ ದಾಸವಿನೂ ಚನೆಯ ತರುಣೋಪಾಯವು !! ಆನಂದವನ, ತಾ|| ೫ ೬,೧೪, ಳ ರ್ಪಶ,