ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ mm ದುರೆ, ಇವರ ಶೀಲವೇ ಪ್ರಗತಿಮಾರ್ಗದ ದ್ಯೋತಕವಾಗಿದೆ.

  • ಆದರೆ ಮಹಾನುಭಾವರ ಈ ಪ್ರಗತಿಮಾರ್ಗವು ದುರಭಿಮಾನಿ ಗಳೂ, ಲೇಶವೂ, ಮನುಷ್ಯತ್ವವಿಲ್ಲದ ದ್ವಿಪಾದಪಶುಗಳೂ ಆದ ನಮಗೆ ಹ್ಯಾಗೆ ಗೋಚರವಾಗಬೇಕು? ದೊಡ್ಡಸ್ತಿಕೆಬೇಕು, ಕಷ್ಟ, ಪಡಲಿಕ್ಕೆ ಬೇಡ ಎಂಬಂತೆ ನಾವು ಲೋಕದಲ್ಲಿಯ ಸರ್ವಾಗ್ರಗಣ್ಯ ತ್ವವನ್ನು ಬಯಸಿ, ಇಡಿ ಆಯುಷ್ಯವನ್ನು ದುಂದುಗಾರಿಕೆಯಲ್ಲಿಯೂ ಹೀನತರದ ಆಚಾರಗಳಯ ಕಳೆಯುವೆವು, ಇದರಿಂದ ನಮ್ಮ ಬಯಕೆಯು ಕೊನೆಗಾಣುವದೊತ್ತಗೇ ಉಳಿದು, ಹೊಟ್ಟೆಬಟ್ಟೆ ಗಾಗಿಯೂ, ರೋಗಾದಿಗಳ ನಿವಾರಣಕ್ಕಾಗಿಯೇ ಧನಾರ್ಜನಕ್ಕಾ ಗಿಯೂ ನಾವು ಯಾವಾಗಲೂ ಪರರ ದಾಸ್ಯತ್ವವನ್ನು ವಹಿಸಬೇಕಾ ಗುವದು. ಆದರೆ ಆ ದಾಸ್ಯತ್ವವನ್ನಾದರೂ ನಾವು ಸಮಾಧಾನದಿಂದ ವಹಿಸಿ ನಡೆದರೆ, ಆ ಸ್ಪಿತಿಯಲ್ಲಿಯೂ ನಮಗೆ ಕೆಲಮಟ್ಟಿಗೆ ಸುಖವೆ ನಿಸಬಹುದು. ಸ್ವಭಾವತಃ ದುಷ್ಟರೂ, ಕೀಳರೂ, ಹೇಡಿಗಳೂ, ಪರರ ಎನ್ನತ್ಯವನ್ನು ಕಂಡು ಅಸೂಯಪಡುವವರೂ ಆದ ನಮ್ಮಿಂದ ಆ ದಾಸವ್ರತಿಯನ್ನು ಸಹಿಸಲಾಗುವದಿಲ್ಲ. ಅದಕ್ಕಾಗಿ ನಾವು ಹಲವು ಹೇಯಪ್ರಕಾರದಿಂದ ಮಂದಿಯ ಗೋಣು ಮುರಿಯಲು ಪ್ರಯ ತ್ರಿಸಿ, ಹದಗೆ ಅದರಿಂದಲೂ ದಾಸ್ಯವಿಮೋಚಿತವಾಗದಿರಲು, ಮುಂದು ಗಾಣದಾಗುವೆವು. ಆದ್ದರಿಂದ ಮನುಷ್ಯನು ಕುಹಕತನದಿಂದ ಪ್ರಗ ತಿಯನ್ನು ಹೊಂದಲು ಸರ್ವಥಾ ಹವಣಿಸಬಾರದು. ಪ್ರಸಂಗವಶಾತ್ ಈ ದುಷ್ಮಮಾರ್ಗದಿಂದ ಪ್ರಗತಿಯಾದಂತೆ ತೋರಿದರೂ ಅದು ನಿಜ ವಾದ ಪ್ರಗತಿಯಾಗಿರದೆ, ತನ್ನನ್ನು ಮತ್ತಿಷ್ಟು ಆಧೋಗತಿಯನ್ನು ಹೊ೦ದಿಸುವ ಚಿಕ್ಕವಾಗಿದೆಯೆಂದು ಅರಿತುಕೊಳ್ಳಬೇಕು,

ಪ್ರಗತಿಯನ್ನು ಪಡೆದು ದಾಸ್ಯವಿಮೋಚಿತನಾಗುವ ಇಚ್ಛೆಯು ಮನುಷ್ಯನು ಪ್ರಗತಿಪಥಗಳಾದ ಕೆಳಗಿನ ಉಪಾಯಗಳನ್ನು ಕಂಡು ಪ್ರಯತ್ನಪೂರ್ವಕ ಅದರಂತೆ ನಡೆಯಲು ಬದ್ಧನಾಗಬೇಕು, ಇದ ರಿಂದ ಪ್ರಗತಿಯು ನಿಶ್ಚಯವಾಗಿ ಅಗುವದು.