ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*** ತುತ್ತದೆ. ಅತ್ಯಂತ ಕಠಿಣ ಹಾಗು ತೊಡಕಿನ ಪ್ರಸಂಗಗಳಿಗೆ ಮೇಲಿಂದ ಮೇಲೆ ಎದೆಗೊಡಬೇಕಾಗುವದರಿಂದಲೂ, ಮನುಷ್ಯನ ಬಹಿಃಪ್ರಾಣವಾದ ಹಣದ ಸಲುವಾಗಿ ಆಗಾಗ್ಗೆ ಕಷ್ಟ-ನಷ್ಟಗಳನ್ನು ಹೊಂದಬೇಕಾಗುವದರಿಂದಲೂ, ತೇಜಿ-ಮಂದತ್ವಗಳ ಆಘಾತಗಳಿಂದ ಮನಸ್ಸಿನಲ್ಲಿ ಉಂಟಾಗುವ ಧೈರ್ಯ-ದೌರ್ಬಲ್ಯಗಳಿಂದಲೂ ಆ ಮನು ಸ್ಮನ ಸ್ಥಿತಿಯು ಚದರಂಗದ ಆಟದಲ್ಲಿ ಸೋತ ಮನುಷ್ಯನಂತೆ ಆಗುವದು, ಈ ಹೊಸ ಉದ್ಯೋಗಸ್ಯನು ಸ್ವಪ್ನದಲ್ಲಿ ಕೂಡ ಅಜಾಗ ರೂಕನಾಗಿರಬಾರದು; ಕ್ಷುಲ್ಲಕ ತಪ್ಪು ಕೂಡ ಪ್ರಸಂಗವಶಾತ್ ಅವನ ನಾಶಕ್ಕೆ ಕಾರಣವಾಗುವದು. ಅವನು ಒಂದು ಕ್ಷಣವನ್ನು ಕೂಡ ಆಲಸ್ಯದಲ್ಲಿಯಾಗಲಿ, ನಿಷ್ಕಾಳಜಿಯಲ್ಲಾಗಲಿ ಕಳೆಯಕೂಡದು. ಯಾಕಂದರೆ, ಅವನ ಉದ್ಯೋಗದ ಉಚ್ಛೆಯ-ಅಪಜ್ಜೆಯಗಳು ಆಗಿನ ಅವನ ವರ್ತನ ಚಾತುರ್ಯವನ್ನು ಹೆಚ್ಚಾಗಿ ಅವಲಂಬಿಸಿರು ಇವೆ: ಈ ಕಾಲದಲ್ಲಿ ಅವನು, ಮಹಾಯುದ್ಧದ ಪ್ರಸಂಗದಲ್ಲಿ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಹಗಲು-ರಾತ್ರಿ ಒಂದೇಸವನೆ ತಮ್ಮ ಶಿಬಿರವನ್ನು ಕಾಯುವ ಕಾವಲುಗಾರರಂತೆ ಬಹಳ ಎತ್ಮರದಿಂದಿರ ಬೇಕಾಗುವದು.

  • ಎರಡನೆಯವರ ಸಲುವಾಗಿ ನೌಕರನಾಗಿ ದುಡಿಯಬೇಕಾಗಿ ದ್ದಾಗ ಮನುಷ್ಯನ ಮಹತ್ವಾಕಾಂಕ್ಷೆಯು ಬಹಳವಾದರೆ, ಅತಿದೊಡ್ಡ ಪಗಾರದೊರಕಿಸುವ ಬಹಳ ದೊಡ್ಡ ಹುದ್ದೆಯನ್ನು ಪಡೆಯುವವರೆಗೆ ಮಾತ್ರ ಇರುವದು. ಆದರೆ ತನ್ನ ಸ್ವಂತದ ಉದ್ಯೋಗದಲ್ಲಿ ತೊಡ ಗಿದ ಮನುಷ್ಯನಿಗೆ ಬೇರೆತರದ ಮಹತ್ವಾಕಾಂಕ್ಷೆಯ ಸ್ಪುರಣವಾಗು ತಿರುತ್ತದೆ. ಸ್ವಾತಂತ್ರ್ಯದ ಮಧುರ ಫಲಗಳ ಸೇವನದ ಅನುಭವವೇ ಲಭಿಸುತ್ತಿದ್ದರಿಂದ ಅವನು ಆ ಸ್ವಾತಂತ್ರರಕ್ಷಣಕ್ಕಾಗಿಯೇ ಅದನ್ನು ವೃದ್ಧಿಗೊಳಿಸುವದಕ್ಕಾಗಿಯ ಬೇಕಾದಷ್ಟು ಶ್ರಮವಹಿ ಸಲು ಸ್ವಸಂತೋಷದಿಂದ ಸಿದ್ಧನಾಗಿರುತ್ತಾನೆ. ಅಂಗೀಕೃತಉದ್ಯೋ ಗವನ್ನು ಮನಃಪೂರ್ವಕವಾಗಿ ಮಾಡುವಾಗ ಯಾವ ಹೊಸ ಹೊಸ