ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈರ್ಗಿ - ಪಾತಿತ್ವವೂ, ಆತ್ಮಹಿತವೂ, ದೇಶಾಭಿಮಾನವೂ, ಪರೋಪಕಾರ ಬುದ್ದಿಯ. ನಿಸ್ಸಿಮವಾದ ಧೈರ್ಯವೂ, ಸೃವಾದಿತ್ಯವೂ ಇನ್ನೂ ಅನೇಕ ಸುಗುಣಗಳೂ ಲಭಿಸಿ, ಪ್ರಗತಿಗೆ ಕಾರಣೀಭೂತ ಗಳಾಗುವವು. ೩ನೆಯ ಖಂಡ-ರಾಧಿಯ ಪರಿತ್ಯಾಗ, ಲೋ, ಟಿಳಕರು ದೇಶಹಿತಕಾರ್ಯವನ್ನು ಸಾಧಿಸುವಾಗ ಹಿಂದೆ ಇಂಧಿಂಧವರು ಹೀಗೆಯೇ ಆಚರಿಸಿ ದೇಶಹಿತಸಾಧಿಸಿರುವರೆಂಬ ರೂಢಿ ಯನ್ನು ಅನುಕರಿಸಲಿಲ್ಲ ; ಶ್ರೀ ಶಿವಾಜಿ ಮಹಾರಾಜರು ಸ್ವರಾಜ್ಯ ಸ್ಥಾ ಪಿಸುವಾಗ ಪೂರ್ವಜರ ಅನುಕರಣ ಮಾಡಿ ರಾಜ್ಯಗಳಿಸಲಿಲ್ಲ ಅವರ “ಗನೀಕವಾ' ಯುದ್ದವು ಅಪೂರ್ವವಾಗಿತ್ತು, ಕೇಸರನು ಮೊದ ಲಿನ ಯುದ್ಧದ ಎಲ್ಲ ಪದ್ದತಿ-ರೋಧಿಗಳನ್ನು ತಿರಸ್ಕರಿಸಿ ಹೊಸ ಪದ್ಧತಿ ಯನ್ನೇ ಗೊತ್ತುಮಾಡಿಕೊಂಡನಲ್ಲವೆ? ಪ್ರಗತಿಗಾಮೇಚ್ಚುವು ರೂಢಿಗ ಳನು, ವಿಶೇಷವಾಗಿ ದುಷ್ಯರೂಧಿಗಳನ್ನು ಅನುಕರಣಮಾಡುವ ಗೊಡವಿಗೆ ಸರ್ವಧಾ ಹೋಗಬಾರದು. ಹಿಂದೆ ಆಗಿಹೋದ ಎಲ್ಲ ಮುಂದಾಳುಗಳು ರೂಢಿವಿನಾಶಕರೇ ಆಗಿದ್ದರೆನ್ನಬಹುದು. ಪ್ರತಿಯೊಂದು ಪ್ರಕೃತಿಯು ರೂಪ, ಲಾವಣ್ಯ, ಸ್ವಭಾವ ಮೊದಲಾದವುಗಳಲ್ಲಿ ಭಿನ್ನವಾಗಿರಲು, ಆ ಪ್ರಕತಿಯು ಭಿನ್ನ ಪ್ರಕೃತಿಯವರ ರೂಢಿಯನ್ನು ಅನುಕರಿಸುವದಾದರೂ ಹ್ಯಾಗೆ ಯೋಗ್ಯವೆನಿಸುವದು ಪ್ರಸಿದ್ದಿಗೆಬಾರದಮುಂದಾಳುವಾಗದಮನುಷ್ಯನು ಎಂಧ ಸಾಮರ್ಥ್ಯವಂತನಿದ್ದರೂ, ಬಹು ದೊಡ್ಡ ಶ್ರೀಮಂತನಿದ್ದರೂ ಕೇವಲ ಬುದ್ಧಿವಂತನಿದ್ದರೂ ಪ್ರಯೋಜನವಿಲ್ಲ. ಯಾಕಂದರೆ ಅವನು ರೂಢಿಗಳ ನಾಶಕ್ಕೆ ಬಹಳ ಹೆದರುತ್ತಿದ್ದದರಿಂದ ಅವನ ಸಾಮರ್ಧ್ಯವೂ ದುಡ್ಡ, ಬುದ್ಧಿಯ ಪ್ರಯೋಜನವಾಗುವದಿಲ್ಲ. ಅಪೂರ್ವತೆಯ ನಿರ್ಭಯತನವೂ ಯಶಸ್ವಿ ಪುರುಷನ ಮುಖ್ಯಲಕ್ಷಣಗಳಾಗಿವೆ. ಹಳೇ ದುಷ್ಟರೂಢಿಗಳು ಅವು ಎಷ್ಟೇ ಪ್ರಾಚೀನಗಳಾಗಿರಲಿ, ಅವುಗಳಬಗ್ಗೆ