ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

w-E- ಪ್ರಗತಿಗಾಮಿಯಲ್ಲಿ ಆದರವಿರಲಾರದು. ಹಳೇದನ್ನು ತೀಡುತ್ತ ಕೂ ಇದೆ, ಅವನು ಅದರಲ್ಲಿಯ ಯೋಗ್ಯ ಗುಣವನ್ನಷ್ಟು ಸ್ವೀಕರಿಸು ವನು, ಪ್ರಗತಿಗಾಮಿಗಳು ಆತ್ಮವಿಶ್ವಾಸದಿಂದ ಪ್ರೇರಿತರಾಗಿ ಯೋಗ್ಯ ವಿಚಾರಿಗಳಾಗಿ ಧೈರ್ಯದಿಂದ ಯುಕ್ತರಾಗಿ ಶೋಧಕಬುದ್ದಿಯವ ರಗಿ ಸಮಾರೂಢಿಗಳನ್ನು ಮುರಿಯುವರು; ಹಾಗು ಹಿಂದೆ ಯಾರೂ ಎಂದೂ ತುಳಿಯದ ಮಾರ್ಗವನ್ನು ತುಳಿದು ಪ್ರಗತಿಹೊಂದುವರು. ಒಂದು ಸಂಗತಿಯು ಕೇವಲ ಹೊಸದೆಂದು ಅದನ್ನು ಮಾಡಲು ಹೆದರಬಾರದು. ಹಾಗು ನಮ್ಮ ತಂದೆಯೆ, ಅಜ್ಜ-ಮುತ್ತಜ್ಞರ ಆತ್ಮರ, ಮಿತ್ರರ ಇಲ್ಲವೆ ಸಮಾಜದ ದುಷ್ಟ ರೂಧಿಗಳನ್ನು ತಿಳೆ ದೂತಿಳಿದು ಅನುಕರಣಮಾಡಬಾರದು, ಇಂಧ ರೂಧಿಗಳ ಅನುಕರ ಣಮಾಡೋಣವು ಕೇವಲ ಹಾಸ್ಯಾಸ್ಪದವಾಗಿರುವದು. ಪ್ರತಿಯೊಬ್ಬ ಮನುಷ್ಯನು ಒಂದು ವಿಶಿಷ್ಟ ಕಾರ್ಯಕ್ಕಾಗಿ ಅವತರಿಸಿರುತ್ತಾನೆ. ಆದರೆ ಅವನು ರೂಢಿವಿನಾಶಕನಾಗದ್ದರಿಂದ ಇಪ್ಯಾರ್ಧವನ್ನು ಸಾಧಿ ಸಿಕೊಳ್ಳದೆ ಮರಣಹೊಂದುವನು. ಪ್ರಸಿದ್ಧಿಗೆ ಬರುವ ಮನುಷ್ಯನು ಅನುಕರಣಪ್ರಿಯನಾಗಿರದೆ, ಸ್ವತಂತ್ರವಿಚಾರ ಆಚಾರದವನಾಗಿರು ತಾನೆ. ಅವನು ಮಾಡುವ ಪ್ರತಿಯೊಂದು ಕೃತಿಯು, ಉದ್ಯೋಗ ಉಪದೇಶವ, ಯುಕ್ತಿಗಳು ಕೇವಲ ಆವರೆ ಸ್ವಂತದ ವಿಚಾರದ ವಾಗಿರುತ್ತವೆ. ಹೆರವರ ಸಹಾಯದ ಹೊರತು ಪ್ರಗತಿ ಹೊಂದಲಿಕ್ಕೆ ಯಾರು ಹೆದರುವರೋ ರೂಢಿಗಳನ್ನು ಒಡೆದು ಮುಂದಕ್ಕೆ ಬರಲು ಯಾರಿಗೆ ಧೈರ್ಯ ಸಾಲದೇ ಇಂಧವರು ಪ್ರಖ್ಯಾತರಾಗುವದಂತೂ ಒತ್ತಟ್ಟಿಗಿ ರಲಿ, ಇವರು ಜಗತ್ತಿನಲ್ಲಿ ಇರುವರೆಂಬದು ಕೂಡ ಮಂದಿಗೆ ಗೊತ್ತಾ ಗುವ ಸಂಭವವಿಲ್ಲ. ಅನುಕರಣದಂಧ ನಾಶಕಾರಕವಾದ ಪ್ರಗತಿಗೆ ಬಾಧೆತರುವಂಧ ಬೇರೊಂದು ಸಂಗತಿಯು ಸಿಗಲಾರದು. ಅನುಕರಣ ದಿಂದ ಸ್ವಂತದ ವಿಶಿಷ್ಯತ್ವವು ಇಲ್ಲದಂತಾಗುವದು; ಉತ್ಪಾದಕ ಶಕ್ತಿಯು ನಾಶವಾಗುವದು, ಕಲ್ಪಕಶಕ್ತಿಯು ಕುಂಠಿತವಾಗುವದು.