ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ೨] ಯಶಃಪ್ರಾಪ್ತಿಯು ಅನುಕರಣದಿಂದ ಸರ್ವಧಾ ಪ್ರಾಪ್ತವಾಗುವದಿಲ್ಲ: * ಎಷ್ಟೋಜನರು ಲೋ ಟಿಳಕರಂತೆ ಪೋಕ್ತವಾದ ಭಾಷಣಮಾಡ ಲೆಳಿಸಿಯ, ಮ. ರಾ. ರ), ಹರಿ ನಾರಾಯಣ ಅಸಟೆ ಇವರಂತಕಾದಂಬ ರಿಗಳನ್ನು ಬರೆಯಲೆಳಿಸಿಯೂ,ಪ್ರೋ. ರಾಮಮೂರ್ತಿ ಇಲ್ಲವೆಸ್ಯಾಂಡೋ ಇವರಂತೆ ಅಂಗಸಾಧನಮಾಡಲಿಳಿಸಿಯ, ಮಿ. ಆಲ್ಕರಿಮಗನ ಇಲ್ಲವೆ ಬಾಲಗಂಧರ್ವ ಇವರಂತೆ ಗಾನಾಲಾಪಮಾಡಲೆಳಿಸಿಯ, ಪ್ರಸಿದ್ದ ಹರಿದಾಸರ ಇಲ್ಲವೆ ಪೌರಾಣಿಕರ ಅದರಂತೆ ಸಾಧು ಸಜ್ಜನರ ಇಲ್ಲವೆ ಸನ್ಯಾಸಿಗಳ ಅನುಕರಣಮಾಡಲೆಳಿಸಿ ಪ್ರಖ್ಯಾತರಾಗಬೇ ಕೆನ್ನುವರು. ಆದರೆ ಮಂದಿಯ ಅನುಕರಣವು (ನಕಲು) ಚೆನ್ನಾಗಿ ಸಾಧಿಸದ್ದರಿಂದ ಆ ಹತಭಾಗಿಗಳು ಹಿಂದಿನ ಮನೆ ಭಿಕ್ಷವೂ ಹೂ ಯಿತು, ಮುಂದಿನ ಮನೆಯ ಕೊರಾನ್ನವೂ ತಪ್ಪಿತು. ” ಎಂಬಂತೆ ನಿರಾಶರಾಗುವರು; ಅಲ್ಲದೆ ಅನುಕರಣಮಾಡುವವನು ತನ್ನ ನೈಸರ್ಗಿಕ ವಿಶಿಷ್ಟ ಗುಣವನ್ನು ಕೂಡ ಶಾಶ್ವತವಾಗಿ ಕಳಕೊಳ್ಳಬೇಕಾಗುತ್ತದೆ. ಅನುಕರಣವು (ನಕಲು) ನೈಸರ್ಗಿಕ ವೃತ್ತಿಗಿಂತ ಭಿನ್ನವಾಗುವದು. ಹ್ಯಾಗೆಂದರೆ, ಅನ್ನವನ್ನು ಪುನಃ ಬೇಯಿಸಿದರೆ, ಆದರೆ ರುಚಿಯು ಅಕ್ಕಿ ಅನ್ನಗಳಿಗಿಂತ ತೀರಭಿನ್ನವಾಗುವದಲ್ಲದೆ, ಪಚನಶಕ್ತಿಗೆ ಕೂಡ ಅದು ಹೆಚ್ಚು ಜಡವಾಗುವದು. ಇದರಂತೆ ನೈಸರ್ಗಿಕ ವೃತ್ತಿಯವನ ಆಚಾರ ವಿಚಾರಗಳು ಜನರಿಗೆ ರುಚಿಸುವಂತೆ, ಆನುಕರಣ ಮಾಡುವವನ ಆಚಾರ ವಿಚಾರಗಳು ರುಚಿಸುವದಿಲ್ಲ. ಇಷ್ಟೇ ಅಲ್ಲ ಜನರು ಆ ಅನುಕರಣೆಯನ್ನು ಹೆಚ್ಚಾಗಿ ದ್ವೇಷಿಸಹತ್ತುವರು. ಸ್ವಾತಂತ್ರ ಪ್ರೀತಿಯನ್ನು ಜಾಗೃತಗೊಳಿಸದ್ದರಿಂದಲೂ, ಸ್ವಂತ ದಲ್ಲಿ ದೃಢನಿಶ್ಚಯವಿರದ್ದರಿಂದಲೂ ಅನುಕರಣದಂಥ ಹೇಯವ್ಯ ಯನ್ನು ಮನುಷ್ಕನು ಸ್ವೀಕರಿಸಬೇಕಾಗುತ್ತದೆ. ಅನುಕರಣಮಾ ಡುವವರ ಸಂಖ್ಯೆಯು ಹೆಚ್ಚು ಇದ್ದಂತೆ, ಅನುಕರಣೀಯ ಪುರುಷರ ಸಂಖ್ಯೆಯು ಹೆಚ್ಚು ಇರುವದಿಲ್ಲ. ಆ ಜನರು ಬಹುಸ್ವಲ್ಪಮಂದಿಗ ಳಿರುವರು, ಖರೇ ಅನುಕರಣೀಯ ಮನುಷ್ಯನು ವಿಶಿಷ್ಟ ಕೃತಿ