ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•à೫ಹೊಂದಲಿಲ್ಲ. ಹಿರಿಯರು ಲಗ್ನ ಮಾಡಿದರು. ಆಗಿನಿಂದ ಅವರ ಸಾಧುತ್ವದ ಪ್ರಗತಿಗೆ ಆರಂಭವಾಯಿತು: ಮನೆತನದ ಕೆಲಸದಲ್ಲಿ ಬೀಳದೆ, ಇವರು ಸದಾ ದೇವರ ಪೂಜೆ-ಪುನಸಾರ , ಮೊದ ಲಾದವುಗಳಲ್ಲಿ ಹೊತ್ತುಗಳೆಯತೊಡಗಿದರು. ಇದರಿಂದ ಮನೆಯವ ರಿಗೂ ಇವರಿಗೂ ಸರಿಬೀಳಲಿಲ್ಲ. ಆತ್ಮರು ನಿಂದೆಯನ್ನು ಮಾಡತೊಡಗಿದರು. ನೆರೆಹೊರೆಯವರೂ, ಮಿತ್ರರೂ ಇವರ ಭಾವಿ ಕತನವನ್ನು ಕುರಿತು ಚೇಷ್ಮೆಯನ್ನೂ, ಉಪಹಾಸವನ್ನೂ ಮಾಡಹತ್ತಿ ದರು. ಆದರೂ ಪ್ರಗತಿಯ ಕಡೆಗೇ ಲಕ್ಷವಿದ್ದ ಆ ಸಾಧುಶ್ರೇಷ್ಠನು ಯಾರನ್ನೂ ವಿರೋಧಿಸಹೋಗಲಿಲ್ಲ. ಇಷ್ಟೇ ಅಲ್ಲ. ಅವರ ಕ್ರಿಯೆಗೆ ಕಾಯಾ- ವಾಚಾಮನಸಾ ತಡೆಹಾಕಲು ಯತ್ನಿಸದೆ ನೆಟ್ಟಗೆ ತನ್ನ ಧೈಯದ ಕಡೆಗೇ ಸಾಗಿದ್ದನು. ಸಾಧುಗಳ ಈ ಕೃತಿಯಿಂದ ವಿವೇಕಿಗಳಾದ ಪ್ರತಿಸ್ಪರ್ಧಿಗಳು ಹಿಂಜರಿದರು. ದುರಭಿಮಾನಿಗಳು ಮಾತ್ರ ರೊಚ್ಚಿಗೆದ್ದರು. ಅವರು ಹ್ಯಾಗಾದರೂ ಮಾಡಿ ಅವನನ್ನು ಅಂಣತಮ್ಮಂದಿರಿಂದ ವಿಂಗಡಿಸಿದರೆ, ಇವನ ಈ ಡೋಂಗೀ ಸಾಧು ತ್ವವು ಇಲ್ಲದಂತಾಗಿ ಹತ್ತು ಜನರಂತೆ ಮನೆಮಾರು ಸಾಗಿಸಿಕೊಳ್ಳುವ ನೆಂದು ಭಾವಿಸಿ ಗುರುಗಳನ್ನು ಬೇರೆ ಇರಲು ಹಚ್ಚಿದರು. ಬೇರೆ ಇರಹತ್ತಿದಾಗಿನಿಂದ ಕುಹಕರ ದೃಷ್ಟಿಯಂತೆ ಗುರುಗಳ ಸಾಧನವು ಕಡಿಮೆಯಾಗದೆ, ಅದು ಮತ್ತಷ್ಟು ಶೀಘ್ರವಾಗಿಯ, ಸ್ವಲ್ಪಮಟ್ಟಿಗೆ ಯಾಕಾಗಲೊಲ್ಲದು. ತ್ರಾಸರಹಿತವಾಗಿ ಸಾಗಹತ್ತಿತು. ಗುರು ಪತ್ನಿಯವರು ಅತ್ಯಂತ ಉಜ್ವಲವೃತ್ತಿಯು ಶೀಡಕಸ್ವಭಾವದವರಿ ದ್ದರು. ಅವರು ತಮ್ಮ ಪತಿವನಿಗೆ ತೊಂದರೆ ಕೊಡುವದಕ್ಕಾಗಿ, (ಹೀಗೆನ್ನುವದಕ್ಕಿಂತ ಅವನಲ್ಲಿ ಸಾಧುತ್ವವು ತೀವ್ರವಾಗಿ ಸ್ಥಿರಗೊಳ್ಳು ವದಕ್ಕೆಂದರೆ ಹೆಚ್ಚು ಸಮಂಜಸವಾಗಿ ತೋರುವದು.) ಬಹುಪರಿಯ 'ಕಷ್ಟಗಳನ್ನು ಕೊಟ್ಟರು. ಅವರು ತಮ್ಮ ಪತಿಯೆಂದು ಉಜರು ಇಡದೆ ಸಾಧುಗಳವರಿಂದ ಕುಟ್ಟವದು, ಬೀಸುವದು, ಮುಸುರಿತಿಕ್ಕು ವದು ಮೊದಲಾದ ನೀಚ ಕೆಲಸಗಳನ್ನು ಮಾಡಿಸಿದರು. ಮಂದಿಯ