ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- ವೃತ್ತರನ್ನಾ ಗಮಾಡಲಿಕ್ಕೆ ಯಾರೂ ಶಕ್ತರಾಗಲಿಕ್ಕಿಲ್ಲ. ಒಮ್ಮೊಮ್ಮೆ ಒಂದೆರಡು ಪ್ರತಿಕೂಲ ಪ್ರಸಂಗಗಳಲ್ಲಿ ನಮ್ಮ ಸಾಧನವು ಸ್ವಲ್ಪ ಕು೦ರಿತವಾದಂತೆ ತೋರಿದರೂ ನಿಜವಾಗಿ ಅದು ಕುಂಠಿತವಾಗಿರು ವದಿಲ್ಲ. ಚಳಿಗಾಲದ ಮೂಡಣಗಾಳಿ೦ದ ಎಲೆಗಳುದುರಿ ಅವ್ರುವಕ್ಷವು ಬಾಡಿದಹಾಗೆ ತೋರಿದರೂ, ಮುಂದೆ ಬರುವ ವಸಂತಋತುವಿನಲ್ಲಿ ಗಿತು ಆದು ಮನೋಲ್ಲಾಸಕ್ಕೆ ಕಾರಣೀಭೂತವಾಗುವಂತೆ, ಆ ಸಂದಿ ಹೋದ ಪ್ರತಿಕೂಲ ಪ್ರಸಂಗಗಳ ಪ್ರಗತಿಗೆ ಕಾರಣವಾದದ್ದೆಂದು ಕಂಡುಒರುವದು. ಉನ್ನತಿಯು(ಪ್ರಗತಿಯು) ನಮ್ಮಲ್ಲಿ ದೃಢನಿಶ್ಚಯವಿದ್ದ ಮಾನ ದಿಂದ ಬೆಳೆಯುವದು, ಹೊರತು ಅದಕ್ಕಿಂತ ಮಿತಿಮೀರಿ ಆಗಲಾರದು. “ನಮ್ಮ ದೈವದಲ್ಲಿ ಸಾಯುವವರೆಗೆ ಶಿಪಾಯಿಯಾಗುವದೇ ಇರುವ ದೆ”ಂದು ನಂಬಿರುವ ಮನುಷ್ಯನು ಬಹುಶಃ ಶಿವಾಯಿತನಬಿಟ್ಟು ಜಮಾ ದಾರ ನಾಗಲಾರನು, ಕಾರಕೂನಿಕಿ ಒಂದು ಸಿಕ್ಕರೆ ಸಾಕು, ನಮಗೆ ಹೆಚ್ಚಿನ ಹುದ್ದೆ ಯಾತಕ್ಕೆ ಬೇಕೆಂದು ಭಾವಿಸಿರುವವನಿಗೆ ಕಾರಕೂ ನಿಕಿ ಸಿಗುವದೇ ದುರ್ಲಭವಾಗುವದು. ಯಾಕಂದರೆ ಈ ಜನರು ಕಲ್ಪನಾಸಷ್ಟಿಯಲ್ಲಿ ಸಹ ಹೆಚ್ಚಿನ ಪದವಿಗೇರುವಾಗ ತೋರಬ ಹುದಾದ ಪ್ರತಿಕೂಲಸಂಗತಿಗಳಿಗೇ ಅಂಜುತ್ತಿದ್ದುದರಿಂದ ಇವರು ನಿಜ ವಾದ ಪ್ರಗತಿಗೆ ಸ್ವಾಭಾವಿಕವಾಗಿ ಅಯೋಗ್ಯರಾಗುವರು, ಆತ್ಮಶ್ರದ್ದೆ, ದೃಢನಿಶ್ಚಯಗಳಿದ್ದ ಹೊರತು ಪ್ರತಿಕೂಲಪ್ರಸಂಗಗಳಿಗೆ ಎದೆಗೆ ಡುವ ಧೈರ್ಯವುಂಟಾಗುವದಿಲ್ಲ. ಈ ಗುಣಗಳು ಇರದ್ದರಿಂದಲೇ ಶಿಫಾಯಿಯು ಕಡೆತನಕ ಶಿಪಾಯಿಯಾಗಿಯ, ಕಾರಕೂನನು ಸಾಯುವವರೆಗೆ ಕಾರಕೂನನೇಆಗಿಯೂ ಇರಬೇಕಾಗುತ್ತದೆ. ಆಕಾಶದಲ್ಲಿ ತೂರಿದ ಚಂಡು ಮರಳಿ ನೆಲಕ್ಕೆ ಬೀಳುವದು * ಹ್ಯಾಗೆ ಸಂಭವವೋ, ನೀರಲ್ಲಿ ಚಲ್ಲಿದ ಕಲ್ಲು ಮಣುಗುವದು ಹ್ಯಾಗೆ ಸಂಭವವೋ ಹಾಗೆಯೇ ದೃಢನಿಶ್ಚಯದಿಂದ ಮಾಡಿದ ಪ್ರಯತ್ನದಿಂದ ಪ್ರಗತಿಯಾಗುವದು ಸಂಭವವಾಗಿರುತ್ತದೆ. ಇದರಲ್ಲಿ ಅಭ್ಯಂತರ