ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Mart ವೇನೂ ಇರುವದಿಲ್ಲ. ಸ್ವಾತಂತ್ರ ಪ್ರೀತಿ, ದೃಢನಿಶ್ಯ, ಆವೂ ರ್ವತೆ, ಮಹತ್ವಾಕಾಂಕ್ಷೆ, ಸ್ವಾವಲಂಬನ ಮೊದಲಾದ ಗುಣಗಳಲ್ಲಿ ಯಾದರೂ ಗುರುತ್ವಾಕರ್ಷಣಧರ್ಮದಂತೆ ಈ ಪ್ಪಿತಸಾಧನವನ್ನು ತಪ್ಪದೆ ದೊರಕಿಸಿಕೊಡುವ ಶಕ್ತಿಯಿರುತ್ತದೆ. ಈ ಮಾರ್ಗದಿಂದ ಪ್ರಗ ತಿಯು ಬೇಗನೆ ಆಗುವದಿಲೆಂದು ಭಾವಿಸಿ ಅತಂತ್ರವಿಚಾರದವನು ಷ್ಯನು ಬೇರೆ ದುರ್ಮಾರ್ಗದಿಂದ ತೀವ್ರ ಪ್ರಗತಿಹೊಂದಲು ಯತ್ನಿಸಿ ದರೆ, ಅವನ ಪ್ರಗತಿಯಾಗುವದೊತ್ತಟ್ಟಿಗೇ ಉಳಿದು ಗೌಳಿಗನು ಕೆಚ್ಚ ಲಕೆಯು ಎಮ್ಮೆಯ ಎಲ್ಲ ಹಾಲನ್ನು ಒಂದೇದಿವಸ ಕರೆಯಲಿಚ್ಚಿಸಿ, ಹತಭಾಗಿಯಾದಂತೆ, ಹತಾಶನಾಗುವನು. ಸಂಪತ್ತಿಯಾಗಲಿ, ಸೌಖ್ಯವಾಗಲಿ ತಾವಾಗಿ ನಮ್ಮನ್ನು ಹುಡುಕಿ ಕೊಂಡು ಬರುವದಿಲ್ಲ. ನಾವು ಅದನ್ನು ಎದುರುಗೊಳ್ಳಲು ಹೋದರೆ ಮಾತ್ರ ಅವು ನಮ್ಮೆಡೆಗೆ ಬರಹತ್ತುವವು. ಯಶ ಮಂದಿರದ ಬಾಗಿ ಲವು ಸದಾ ತೆರೆಯಲ್ಪಟ್ಟಿರುತ್ತದೆ. ಆದರೆ ಬಾಗಿಲವನ್ನು ಪ್ರವೇಶಿ ಸುವ ಮಾರ್ಗವನ್ನು ಕಂಡುಹಿಡಿಯುವುದು ಮಾತ್ರ ಎಲ್ಲರಿಂದಲೂ ಆಗುವದಿಲ್ಲ. ಇಷ್ಟೇ ಅಲ್ಲ. ಆ ದ್ವಾರವನ್ನು ಪ್ರವೇಶಿಸುವ ಪ್ರತಿಯೊ ನ ಮಾರ್ಗವು ಬೇರೆ ಬೇರೆಯಾಗಿರುವದರಿಂದ ತಂದೆಯಮಾರ್ಗವು ಮಗನಿಗೂ, ತಾಯಿಯಮಾರ್ಗವು ಮಗಳಿಗೂ, ಅರಸನಮಾರ್ಗವು ಪ್ರಜೆಗಳಿಗೂ, ಗುರುವಿನ ಮಾರ್ಗವು ಶಿಷ್ಯನಿಗೂ ಯಶಃಪ್ರಾಪ್ತಿಗೆ ಪ್ರಗತಿಗೆ ಸುಗಮವಾಗಲಿಕ್ಕಿಲ್ಲ; ಆದ್ದರಿಂದ ಪ್ರಗತಿಪರನು ಹಿಂದೆ ಹೇಳಿದಂತ ಲೋ, ಟಿಳಕರಂತೆ ವ್ಯಾಖ್ಯಾನಕೊಟ್ಟ, ಶ್ರೀಯುತ ಶಿವ ರಾಮಪಂತ ಪರಾಂಜಪೆಯವರಂತೆ ಲೇಖಬರೆದು, ಪ್ರೊ, ಕರ್ವೆಯವ ರಂತೆ ಸಾಹಸಪಟ್ಟ, ವೈ, ವೇಂಕಟ ರಂಗೋ ಕಟ್ಟಿಯವರಂತೆ ಭಾಷೆ ಯಏಳೆಯನ್ನು ಮಾಡಿ ಇಲ್ಲವೆ ಪ್ರಸಿದ್ದ ಕಳ್ಳನಾದ ಕಟ್ಟಿಚೆನ್ನನಂತೆ ಕಳುವುಮಾಡಿ ತಲೆಕೊಡಕ ವಾಲ್ಮೀಕನಂತೆ ತಲೆಹೊಡೆದು ಪ್ರಸಿದ್ದರೆ ಗಲು ಯತ್ನಿಸುವದು ದಡ್ಡತನವು, ಪ್ರಗತಿಗಾಮಿಯು ದೃಢನಿಶ