ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯದ ಬಲದಿಂದ ಪ್ರತಿಕೂಲಪ್ರಸಂಗಗಳ ಮುಂದೆ ಸೆಡ್ಡು ಹೊಡೆಯೋ ಡೆದು ನಿಲ್ಲಹತ್ತಿದಂತೆ ಆ ಪ್ರಸಂಗಗಳು ಹೋಗಿ ಇಲ್ಲವೇ ಅವೇ ಅನು ಕೂಲಗಳಾಗಿ ಪರಿಣಮಿಸಿ ಅವನ ಪ್ರಗತಿಗೆ ಕಾರಣವಾಗುವವು ೬ ನೆಯ ಖಂಡ-ಸಮಯಸಾಫಲ್ಯ. ಬೇಬಂದಶಾಹಿಯ ನಿಜಾಮರಾಜ್ಯದಲ್ಲಿ ಹಿಂದಕೊಮ್ಮೆ ಬಾದ ಶಹನ ಮೆಹರವಾನಿಗೆಯಿಂದ 'ಗೋಮಾಜಿ ಕಾಪಸೆ' ಎಂಬಾತನಿಗೆ ಮೂರು ಮುಕ್ಕಾಲುಗಳಿಗೆಯವರೆಗೆ ಬಾದಶಾಹಿ ಪದವಿಯು ದೊರಕಿ ತಂತೆ! ಆ ಸಮಯಾನುವರ್ತಿಯು ಮರು ಮುಕ್ಕಾಲುಗಳಿಗೆಯಲ್ಲಿ ಲಕ್ಷಾಂತರ ಜನರಿಗೆ ಇನಾಮಗಳ ಸನದುಗಳನ್ನು ಮಾಡಿಕೊಟ್ಟ ನೆಂದೂ, ಅವನು ಹಾಕಿಕೊಟ್ಟ ಇನಾಮುಗಳೇ ಈಗೂ ಕರ್ನಾಟಕ ದೊಳಗಿನ ಜನರಿಗೆ ವಿಶೇಷವಾಗಿ ಬ್ರಾಹ್ಮಣರಿಗೆ ನಡೆಯುತ್ತವೆಯಂದೂ ಕೇಳಿಕೆಯಲ್ಲಿದೆ. ಗೋಮಾಜಿ ಕಾಪಸೆಯು ಯಾರೇ ಇರಲಿ, ಎಂಧ ವಿಚಾರದವನೇ ಇರಲಿ, ಅವನ ಸಮಯ ಸಾನವು ಹೊಗಳತಕ್ಕ ದೇಸರಿ! ಎಷ್ಕತಲೆಗಟ್ಟಲೆ ಬಾದಶಾಹಿಯನ್ನು ಅನುಭವಿಸಿದ ನಿಜಾ ಮನು ಮಾಡದ ಕೆಲಸವನ್ನು ಕೇವಲ ಮೂರು ಮುಕ್ಕಾಲುಗಳಿಗೆ ಪಟ್ಟವೇರಿದ ಗೋಮಾಜಿಕಾಪಸೆಯು ಹ್ಯಾಗೆ ಸಾಧಿಸಿದನು ನೋಡಿರಿ! ಮನುಷ್ಯನಲ್ಲಿ ಸ್ವಾತಂತ್ರ ಪ್ರೀತಿ, ದಢನಿಶ್ಚಯ, ಮಹತ್ವಾಕಾಂಕ್ಷ, ಅಲೌಕಿಕತೆ, ಸದಸದ್ವಿವೇಕ ಬುದ್ದಿಗಳು ಜಾಗ್ರತವಿದ್ದವೆಂದರೆ ಆ ಮನುಷ್ಯನು ತಕ್ಕ ಸಮಯವನ್ನು ನಿರರ್ಧಕವಾಗಿ ವ್ಯಯಮಾ ಡುವದಿಲ್ಲ. ಸರ ಎಂ. ವಿಶ್ವೇಶ್ವರಯ್ಯನವರು ಮೈಸೂರ ದಿವಾಣ ಗಿರಿಯನ್ನು ೫-೬ ವರ್ಷ ಮಾಡಿದರು. ಈ ಅವಧಿಯಲ್ಲಿ ಮೈಸೂರಸಂ ಸ್ಥಾನದಲ್ಲಿ ಆದ ಸುಧಾರಣೆಗಳು ಅಪೂರ್ವವಾಗಿರುವವು. ಗ್ರಾಮಾಭಿ ವದ್ಧಿ ಖಾತೆ ರೇಖಾತೆ ಮೊದಲಾದ ಹೊಸಖಾತೆಗಳು ಉದಯಕ್ಕೆ ಬಂದು ಪ್ರಜೆಗಳಿಗೆ ಆರೋಗ್ಯ ಹಾಗು ಪ್ರಯಾಣಸೌಕರ್ಯವನ್ನುಂಟು