ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫ ಗ್ರಹಿಸುತ್ತಿರಬೇಕು. ಹೀಗೆ ಮಾಡದೆ ವಾಚಿಣ್ಯವಾಚ್ಯ ಸಂಭಾಷ ಣಮಾಡುತ್ತ ನಿಪ್ಪಯೋಜಕಗಳಾದ ಸುದ್ದಿಗಳ ಚರ್ವಿತಚರ್ವಣ ಮಾಡು, ಬುದ್ಧಿಗೆ ಮಾಂದ್ಯತ್ವವನ್ನುಂಟುಮಾಡುವ ಪುಸ್ತಕಗ ಳನ್ನು ಓದುತ್ತ ನಮ್ಮ ಕಾಲವನ್ನು ಆಯುಷ್ಯವನ್ನು ಕಳೆಯತೊಡಗಿ ದರೆ ನಮಗೆ ಅದರಿಂದ ಸ್ವಲ್ಪವೂ ಪ್ರಯೋಜನವಾಗಲಿಕ್ಕಿಲ್ಲ. ಗತ ಆಯುಷ್ಯವನ್ನು ಅಶಿಕ್ಷಿತತನದಲ್ಲಿ ಕಳೆದು ಈಗ ಪ್ರೌಢ ದೆಸೆಯಲ್ಲಿ ಶಿಕ್ಷಣಹೊಂದುವ ಪ್ರಸಂಗ ಬಂದದರಿಂದಲೂ, ದುಷ್ಟವ್ಯ ವಹಾರಗಳನ್ನು ಬಿಡುವ ಮನಸ್ಸಾಗಿದ್ದರೂ ಅವನ್ನು ಬಿಡುವದಾ ದೀತೋ ಇಲ್ಲವೋ ಎಂಬ ಸಂಶಯದಿಂದಲೂ ಪೀಡಿತರಾಗಿ ಎಷ್ಟೋ ಜನರು ತಮ್ಮ ಮುಂದಣ ಆಯುಷ್ಯದ ನಾಫಲ್ಯವು ಹಾಗಾದೀತೆಂದು ಚಿಂತಿಸುತ್ತಾರೆ , ಇಂಧವರು ಇಷ್ಟಫಲವನ್ನು ಬೇಗನೆ ನಿಸ್ಸ ಶಯವಾಗಿ ಹೊಂದುವರು. ಯಾಕಂದರೆ-ಪಶ್ಚಾತ್ತಾಪದಿಂದ ಮನು ಪ್ರನಲ್ಲಿ ಒಂದು ತರದ ತೀಕ್ಷವಾದ ಕರ್ತವ್ಯಜಾಗ್ರತಿಯು ಉಂಟಾಗಿ ಅದು ಹಿಡಿದ ಕೆಲಸದಲ್ಲಿ ತಪ್ಪದೆ ಯಶಃಪ್ರಾಪ್ತಿಗೊಳಿಸುವದು, ಆದ ರಲ್ಲಿ ಪ್ರೌಢವಯಸ್ಸಿನಲ್ಲಿ ಪಶ್ಚಾತ್ತಾಪಪಡುವ ಮನುಷ್ಯನಿಗೆ ಯೋಗ್ಯಮಾರ್ಗವು ಕೂಡಲೆ ಕಾಣಹತ್ತುವದು: ಅಕ್ಷರಶತ್ರುವಾದ ಪ್ರೌಢಪಶ್ಚಾತಾಪಿಯಿಂದ ಅಕ್ಷರಗಳದ್ಯಾರಾ ಶಿಕ್ಷಣಹೊಂದುವದು ಅಸಾಧ್ಯವಾದರೂ ಅವನು ಶಿಲ್ಪ, ನೇಕಾರಿಕೆ, ಬಡಿಗತನ ಮೊದಲಾದ ಇತರ ಕಲೆಗಳ ಶಿಕ್ಷಣವನ್ನು ಬಹು ಬೇಗ ಸಂಪಾದಿಸಿ ಪ್ರಗತಿಹೊಂದ ಬಹುದು, ಮದ್ಯಪಾನದಂಧ ದುಶ್ಚಟದಿಂದ ನಿವೃತ್ತರಾಗಬಯಸಿದ ಎಷ್ಟೋ ಪ್ರೌಢಪಶ್ಚಾತ್ತಾಪಿಗಳು ಸ್ವಲ್ಪ ದಿವಸಗಳಲ್ಲಿಯೇ ಮದ್ಯ ಪೀಯಷಿಕರೂ, ಸಮಂಜಸವರ್ತಿಗಳೂ ಆದ ಉದಾಹರಣೆಗಳನ್ನು ಬಹುಜನರು ನೋಡಿರಬಹುದು. ಆದರೆ ಪಶ್ಚಾತ್ತಾಪವು ಮಾತ್ರ ನಿಜ 'ವಾಗಿ ಆಗಿರಬೇಕು. ಅಂದರೆ ಅವನಿಗೆ ಸಮಯಸಾಫಲ್ಯಮಾಡಿಕೊ ಳ್ಳುವ ಯೋಗವೂ ದೊರಕುವದು. ಪ್ರಗತಿಯ ಮುಖ್ಯ ರಹಸ್ಯವು ಸಮಯ ಸಾಫಲ್ಯದಲ್ಲಿಯೇ