ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೪೮ ರಜ್ಜುವಿನಛೇದನವಾದ ಹೊರತು ಜೀವದ ಮೇಲೆ ಉದಾರನಾಗಿ ಕಾದದೆ, ಮೋಹಪರವಶನಾಗಿ ಹಿಂದೆಗೆಯಹತ್ತುತ್ತಾನೆ. ಖರೇ ಶೌರ್ಯವೂ, ನಿಜವಾದ ಪ್ರಯತ್ನವೂ, ಯೋಗ್ಯ ಸಾಹಸವೂ ಆಶ್ರಯ ರಜ್ಜುವಿನಛೇದನವಾದ ಹೊರತು ಪ್ರಕಾಶಿತವಾಗುವದಿಲ್ಲ. ಆಶ್ರಯ ರಜುವಿನ ಮಹತ್ವವು ತಿಳಿಸಿದ್ದರಿಂದಲೇ ಸದಾಶಿವರಾವ ಪೇಶವೆಯು ಪಾನಿಪತದ ಕಡೆಯ ಕಾಳಗದಲ್ಲಿ ಸೋತು ಮರಾಟರ ನಾಶಕ್ಕೆ ಕಾರಣನಾದನು. - ಒಂದು ಮಹತ್ಕಾರ್ಯವನ್ನು ಆರಂಭಿಸಿದ ಬಳಿಕ ಅದರಲ್ಲಿ ಯಶಃಪ್ರಾಪ್ತಿಯಾಗದೆ, ಮೇಲಿಂದ ಮೇಲೆ ಸಂಕಟಗಳುದ್ಭವಿಸಹ ಆದರೆ ಅವನ್ನು ನೀಗಿಕೊಂಡು ಯೋಗ್ಯರೀತಿಯಿಂದ ಪ್ರಗತಿಹೊ೦ ದುವ ಮಾರ್ಗವು ನಮ್ಮಲ್ಲಿಯ ಬಹುಜನರಿಗೆ ಸಿಗುವದಿಲ್ಲ. ಕಠಿಣ ಪ್ರಸಂಗದೊಳಗಿಂದ ಸಹಜವಾಗಿ ಪಾರಾಗಲಿಕ್ಕೆ ಎಲ್ಲಿಯವರೆಗೆನಮಗೆ ಸಾಧ್ಯವಿರುತ್ತದೋ ಅಲ್ಲಿಯವರೆಗೆ ನಾವು ಅತಿಸಾಹಸದ ಪ್ರಯತ್ನ ಮಾಡಲಿಕ್ಕೆ ಸಹಸಾ ಮುಂದುವರಿಯುವದಿಲ್ಲ. ಇದಕ್ಕೆ ಒಂದು ಸಣ್ಣ ಉದಾಹರಣೆಯನ್ನು ಕೊಡುವಾ, ಬೆಕ್ಕನ್ನು ಪ್ರತಿಬಂಧಿಸ ಬೇಕೆಂದು ನಾವು ಪ್ರಯತ್ನ ಪಡಹತ್ತಿದರೆ, ಓಡಿಹೋಗಲಿಕ್ಕೆ ಬಾಗಿಲು ಕಿಟಕಿ, ಬೆಳಕಿಂಡಿಗಳು ಎಲ್ಲಿಯವರಗೆ ತೆರವಿರುವವೋ ಅಲ್ಲಿಯವರೆಗೆ ಆ ಬೆಕ್ಕು ನಮಗೆ ವಿರೋಧಮಾಡದೆ ಸಿಕ್ಕ ಮಾರ್ಗದಿಂದ ಬೇಗನೆ ಓಡಿಹೊಗುವದು. ಆದರೆ ಯಾವಗ ಓಡಿಹೋಗಲಿಕ್ಕೆ ಮಾರ್ಗವು ಸಿಗುವದಿಲ್ಲವೋ ಆವಾಗ ಆ ಕ್ಷುಲ್ಲಕ ಬೆಕ್ಕು ಕೂಡ ಹುಲಿಯಂತೆ ಉಗ್ರಸ್ವರೂಪತಾಳಿ ಗಟ್ಟಿ ಗಟ್ಟಿಯಾಗಿ ಒದರುತ್ತ ತನ್ನ ನಖಪಂಜರ ಳಿಂದ ಪ್ರತಿಬಂಧಮಾಡುವ ನಮ್ಮನ್ನು ಹೊಡೆಯ ಬಂದು ಪಾರಾಗಿ ಹೋಗುವದು, ಆಶ್ರಯರು ಛೇದನದಿಂದ ಜೀವದ ಹಂಗು ಇಲ್ಲ ಕಾರ್ಯಸಾಧಿಸುವದಕ್ಕೂ ಇಷ್ಟಮನೋರಧಕಾಗಿ ಹೃದಯ ಸರ್ವಸ್ವವನ್ನು ಅರ್ಪಿಸುವದಕ್ಕೂ ಸಾಧನವಾಗುವದು.