ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ ಕಾಲವು ಒಂದೇಸವನೆಯಾಗಿರುವವರೆಗೆ ಬಹುಜನರು ಪ್ರಗತಿ ಪರಕೆಲಸಗಳಲ್ಲಿ ತೊಡಗಬಹುದು! ಆದರೆ ಸಾಮರ್ಧ್ಯಸಂಚಯ ವಿದ್ದ ಹೊರತು ಕರಿಣಪ್ರಸಂಗಗಳಲ್ಲಿ ಆಮ ದೊಡ್ಡ ಕೆಲಸಗಳು ಸುರಳೀತವಾಗಿ ಸಾಗಲಾರವು. ಸಮರ್ಧ್ಯಸಂಚಯವಿಲ್ಲದವರು ಆಪ ನ ಪ್ರಸಂಗಗಳಲ್ಲಿ ಹತಾಶರಾಗಿ ಹಿಡಿದ ಕಾರ್ಯ ಬಿಟ್ಟುಬಿಡುವರು. ಆದರೆ ಸಾಮರ್ಧ್ಯವಂತನು ಚಾತುರ್ಯದಿಂದ ನಡೆದು ಕಠಿಣಪ್ರಸಂಗ ಗಳಲ್ಲಿ ಪ್ರಗತಿಹೊಂದಲು ಯತ್ನಿಸುವನು. ದೊಡ್ಡ ದೊಡ್ಡ ಕೆಲಸಮಾಡುವ ಯೋಗ್ಯತೆಯುಳ್ಳ ಎಷ್ಟೋ ಜನರು ಇಡಿ ಆಯುಷ್ಯವನ್ನು ಸಾಧಾರಣವಾದ ಕಲಸಮಾಡುವದರ ಲಿಯೇ ಕಳೆಯುವರು, ಇದಕ್ಕೆ ಕಾರಣವೇನೆಂದರೆ, ತಮ್ಮಲ್ಲಿ ಹೆಚ್ಚು ಸಾಮರ್ಥ್ಯವಿದ್ದ ಬಗ್ಗೆ ಅವರಿಗೆ ಆತ್ಮವಿಶ್ವಾಸವಿರುವದಿಲ್ಲ. ಹಾಗು ನಿತ್ಯೋಪಯೋಗಕ್ಕೆ ಬೇಕಾಗುವ ಶಕ್ತಿಗಿಂತ ಹೆಚ್ಚು ಸಾಮ ರ್ಧ್ಯವನ್ನು ಸಂಗ್ರಹಿಸಲು ಅವರು ಎಂದೂ ಪ್ರಯತ್ನ ಮಾಡುವದಿಲ್ಲ. ಹೀಗೆ ನಾಮರ್ಧ್ಯ ಸಂಚಯಿಸಿದವರೂ, ಇದ್ದ ಸಾಮರ್ಥ್ಯವನ್ನೆಲ್ಲ ಉಪಯೋಗಿಸುವವರೂ ಆದ ಅವರು ಆಕಸ್ಮಿಕವಾದ ಯಾವದೊಂದು ವಿಪತ್ತಿಗೆ (ಅವು ಎಷ್ಟು ಕ್ಷುಲ್ಲಕಗಳಾಗಿದ್ದರೂ) ಗುರಿಯಾದರೆ ಸಂಪೂ ರ್ಣನಾಶಹೊಂದುವರು. ಭಯಂಕರ ಬಿರುಗಾಳಿಯಿಂದ ಇಲ್ಲವ ಮಳೆಯಿಂದ ಸಂಣ ಸಂಣ ಗಿಡಗಳೂ, ಮುರುಕಳಿಗಬಂದಿದ್ದ ಮನೆ ಗಳೂ ಹ್ಯಾಗೆ ಒಮ್ಮೆಲೆ ಬೀಳಹತ್ತುವವೋ ಹಾಗೆ ದುರ್ಬಲರು ಸಂಕ ಟಗಳು ಒರಬರುವದರೊಳಗಾಗಿ ನಾಶಹೊಂದಹತ್ತು ವರು, ಸಕ ಷ್ಟು ಧನಸಂಗ್ರೆಹವಿಲ್ಲದೆ ನಡಯಿಸಿದ ಉದ್ಯೋಗಗಳೂ, ಯೋಗ್ಯ ಅಭಾಸಮಾಡದ ಪರೀಕ್ಷೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳೂ ತಮ್ಮ ಪರಾಜಯದಿಂದ ಮೇಲನ ಸಂಗತಿಗೆ ಪುಷ್ಟಿ ಕೊಡುವರು. ಬ್ಯಾಂಕು ಗಳು ದಿವಾಳಿತೆಗೆಯಲಿಕ್ಕೆ ಇದೇ ಕಾರಣವಂದು ತಜ್ಞರ ಮತವದೆ. ಚುನ್ನಿಲಾಲಸರಯ್ಯಾ ಎಂಬ ಸುಪ್ರಸಿದ್ಧ ಬ್ಯಾಂಕರನು ಆತ್ಮಹತ್ಯ ಮಾಡಿಕೊಳ್ಳಲಿಕ್ಕೆ ಇದೇಕಾರಣವು, 'ತೋಪುಗಳಲ್ಲಿ ಇಲ್ಲವೆ