ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೬೧ ಯಕವಾಗುವದು. ಆದರೆ ಅವರು ಆ ಕಲೆಯಲ್ಲಿ ಪ್ರವೀಣತೆಯನ್ನು ಪಡೆದು ಪ್ರಸಿದ್ಧಿಗೆ ಬರಲಿಕ್ಕೆ ಅವರಿಗೆ ಹತ್ತಿದ ಕಾಲ, ಪರಿಶ್ರಮಗ ಳನ್ನು ಕುರಿತು ಆಲೋಚಿಸಿದರೆ, ಅವರು ಬೇಡುವ ಪ್ರತಿಫಲವು ಯೋಗ್ಯವೆಂದು ತಿಳಿಯಬರುವದು. ಕಡಿಮೆ ಪ್ರತಿಫಲತಕ್ಕೊಂಡು ಕೆಲಸಮಾಡಲಿಕ್ಕೆ ಸಿದ್ಧರಿದ್ದ ಡಾಕ್ಯರ-ಬ್ಯಾರಿಸ್ಕೃರರಿಗೂ ಇವರಿಗೂ ಆಯಾ ಕಲೆಗಳ ಜ್ಞಾನದಲ್ಲಿ ಏನೂ ಹೆಚ್ಚು ಕಡಿಮೆಯಿರುವದಿಲ್ಲ: ಆದರೆ ಪ್ರಸಿದ್ದಿ ಪಡೆಯಲಿಕ್ಕೆ ಅವರು ತಪಗಟ್ಟಲೆ ತಮ್ಮ ಉದ್ಯೋಗ ವನ್ನು ಒಳ್ಳೆ ಪರಿಶ್ರಮದಿಂದ ಸಾಗಿಸಿರುವದರಿಂದ, ಅವರಲ್ಲಿ ಆ ಉದ್ಯೋಗದ ಅನುಭವವು ಹೆಚ್ಚಾಗಿರುತ್ತದೆ. ಅವರ ಅನುಭವವಿಶೇ ಷಕ್ಕಾಗಿಯೇ-ಸಾಮರ್ಧ್ಯಸಂಚಯ ಕ್ಕಾಗಿಯೇ ಅವರಿಗೆ ಹೆಚ್ಚು ಪ್ರತಿ ಫಲವು ದೊರೆಯುವದು. ನಾಮದುರ ರೊದ್ಯರವರು ಇಲ್ಲವೆ ರಾ. ಬ. ಅರಟಾಳರವರು ಬಿ. ಏ. ಇಲ್ಲವೆ ಎಂ. ಏ. ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವದಿಲ್ಲ. ಅವರು ಒರೇ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆ ಪಾಸಾಗಿದ್ದರೂ, ದೊಡ್ಡ ದೊಡ್ಡ ಹುದ್ದೆಯ ಅತ್ಯಂತ ಜವಾಬುದಾರಿಯ ಕೆಲಸಗಳಿಗೆ ಅರ್ಹ ರಾಗಿದ್ದರು. ಅದೇ ಈಗ ಪಾಸಾದ ಎಂ ಏ, ಇಲ್ಲವೆ ಬಿ. ಏ ಯವ ರಿಗೆ ನಾಮದಾರ ರೊದ್ಮರಂಧ ಜವಾಬುದಾರಿಯ ಕೆಲಸಗಳೂ, ಹುದ್ದೆಯೂ ಒಮ್ಮೆಲೆ ಸಿಗಲಾರವು. ಅವರು ಮೂವತ್ತು ವರ್ಷಗ ಓಲೆ ತಮ್ಮ ಕೆಲಸವನ್ನು ಏಕಪ್ರಕಾರವಾಗಿ ಮಾಡಿ ಪ್ರಗತಿಯನ್ನು ಹೊಂದಿದ್ದರಿಂದ, ಅವರಿಗೆ ಈಗಿನ ಮಹತ್ವವು ಪ್ರಾಪ್ತವಾಗಿದೆ. ಕಾವ್ಯಾದಿಗಳ ವ್ಯುತ್ಪತ್ತಿ ಮಾಡಿಕೊಳ್ಳುವಾಗ ಅಮರ ಕೋಶ, ಸ್ತೋತ್ರರತ್ನಾಕರ, ವ್ಯಾಕರಣಗಳಸೂತ್ರ ಮೊದಲಾದವು ಗಳನ್ನು ಪಾರಮಾಡುವದಕ್ಕೆ ಎಷ್ಟೋ ದಿವಸಗಳನ್ನು ಕಳೆಯಬೇಕಾ ಗುತ್ತದೆ. ಅಂಕಗಣಿತ-ಬೀಜಗಣಿತಗಳನ್ನು ಕಲಿಯಬೇಕಾದರೆ ಅಂಕಿ, ಮೊಗೈ, ಕಾಲು, ಅರ್ಧ ಮುಕ್ಕಾಲು ಇತ್ಯಾದಿಗಳನ್ನು ಕಲಿಯುವದಕ್ಕೂ, ವರ್ಗಮೂಲ, ಘನಮಲ, ಮಹತ್ವಮಾಪನ