ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

=> ಮೊದಲಾದವುಗಳ ನಿಯಮಗಳನ್ನು ಪಾರಮಾಡುವದಕ್ಕೂ ಬಹು ದಿನ ಸಗಳನ್ನು ಕಳೆಯಬೇಕಾಗುತ್ತದೆ. ಮೊದಲುಮಾಮಲತಿಯನ್ನು ಸಂಪಾ ದಿಸಬೇಕಾದರೆ ಬಾರನಿಶಿಕಾರಕೂನನ ಕಲಸವನ್ನು ಎಷ್ಟೋ ದಿವಸಗ ಳವರೆಗೆ ಮಾಡಬೇಕಾಗುತ್ತಿತ್ತು. ಹೀಗೆ ಆಯಾ ಕೆಲಸ ಕಲಿಯುವದಕ್ಕಾಗಿ ಕಳೆಯುವ ವೇಳೆಯ, ಪಡುವಶ್ರಮವೂ ವ್ಯರ್ಥವಾಗುವದಿಲ್ಲ. ಕಾಲಹರಣದ ಪರಿಶ್ರಮಮಾಡಿದಂತಾಗುವದಿಲ್ಲ. ಇವುಗಳಿಂದ ಕೆಲಸ ಕಲಿಯುವವನಲ್ಲಿ ಆಯಾ ವಿಷ ಯ ದ ಸಾಮರ್ಧ್ಯಸಂಚಯವು ಬೆಳೆಯುವದು. ಸಾಮರ್ಧ್ಯಸಂಚಯದಿಂದ ಅನಿತ್ಯವಾದ ವ್ಯವಹಾರಗಳ ಜ್ಞಾನ ವಾಗುವದು. ಹೀಗೆ ಅನಿತ್ಯ ವ್ಯವಹಾರಗಳ ಜ್ಞಾನವಾದ ಹೊರತು ಖರೇ ಪ್ರಗತಿಯಾಯಿತೆಂದು ಹೇಳಲಿಕ್ಕೆ ಬರುವದಿಲ್ಲ. ಪ್ರಗತಿಪರನಿಗೆ ಸಾಮರ್ಧ್ಯಸಂಚಯವೇ ಬಂಡವಾಳವ. ಇದೇ ಅವನ ತಾರಕ ತರುಣೋಪಾಯವು, ರೈತನು ಭೂಮಿಯನ್ನು ರೆಂಟಿಹೊಡೆದು ಹರಗಿ ತಯಾರುಮಾ ಡಿಟ್ಟುಕೊಂಡು ಬಿತ್ತುವದಕ್ಕಾಗಿ ಮಳೆಯ ಹಾದಿಯನ್ನು ನೋಡುತ್ತ ಕೂಡುವಂತೆ, ಪ್ರಗತಿಯ ಇಚ್ಛೆಯುಳ್ಳವನು ಸಾಮರ್ಧ್ಯಸಂಚಯ ಗೊಳಿಸಿಕೊಂಡು ದೃಢನಿಶ್ಚಯದಿಂದ ಕೆಲಸಮಾಡಿ ಯಶಃಪ್ರಾಪ್ತಿಯ ಹಾದಿಯ ಕಾಯಬೇಕು. ಯಾರಲ್ಲಿ ಯೋಗ್ಯ ಸಾಮರ್ಧ್ಯದ ಸಂಚ ಯವಾಗಿರುವದಿಲ್ಲವೋ ಅವರಿಗೆ ಯಶಃಪ್ರಾಪ್ತಿಯಾಗಲಾರದು. ೯ನೆಯ ಖಂಡ-ನಿರಾಶಾವಯ ಆಶಾ, ಆಶಾ ಆಶಾಃ ಪರಮಂ ದುಃಖಂ ನಿರಾಶಾಃ ಪರಮಂ ಸುಖಂ>> ಎಂಬ ವಾಕ್ಯವನ್ನು ಸತ್ಯವಾಗಿ ತೋರ್ಪಡಿಸಲಿಕ್ಕೆ ಪ್ರಗತಿಪರಮನು ಹೈನು ಪ್ರಯತ್ನಿಸಬೇಕು. ಈ ಶ್ಲೋಕವು ಅನ್ನಲಿಕ್ಕೆ ಅತ್ಯಂತ ಸುಲಭವಾಗಿರುವಂತ, ಆಚರಣೆಯಲ್ಲಿ ತರಲಿಕ್ಕೆ ಇದು ಅತ್ಯಂತ ಕಠಿ ಣವಾಗಿರುವದು ಮಹಾರಾಜನಿಗೂ ಆಶೆಬಿಲ ; ರಾಜನಿಗೂ