ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• ಓಟ ವಾದ ಅಭಿಮಾನವೆನಿಸುವದಿಲ್ಲ, ಈ ವೃಧಾಭಿಮಾನಕ್ಕಾಗಿ ದುರಾಶೆ ಪಡಬೇಕಾಗುತ್ತದೆ. ಆದ್ದರಿಂದ ಪ್ರಗತಿಗಾಮಿಯು ದುರಾಶಾ, ವ್ಯಾಮೋಹ, ಧಾಭಿಮಾನ, ದುರಭಿಮಾನ ಮೊದಲಾದ ಅವನತಿ. ಕಾರಕ ಗುಣಗಳನ್ನು ಸಂಗ್ರಹಿಸಬಾರದು. ೧೦ ನೆಯ ಖಂಡ-ಉಪಹಾಸಗಳ ಉಪಯುಕ್ತ. (ಜುರಿಯವರು ಹಾಗೇ ಅಭಿಪ್ರಾಯಪಟ್ಟಿದ್ದರೂ ನಾನು ಸಂಪೂರ್ಣ ನಿರ್ದೋಷಿಯಾಗಿರುವೆನೆಂದು ನನ್ನ ಮನೋದೇವತೆಯು ಈಗಲೂ ನನಗೆ ಹೇಳುತ್ತೈದೆ. ಸೃಷ್ಟಿಯ ಆಧಿಪತ್ಯದಲ್ಲಿ ಈ ಕೋರ್ಟಿಗಿಂತ ಹೆಚ್ಚು ಆಧಿಕಾರವುಳ್ಳ ಪರಮೇಶ್ವರನ ನ್ಯಾಯಾ ಸನವಿರುತ್ತದೆ. ನಾನು ಸ್ವತಂತ್ರನಾಗಿರುವದಕ್ಕಿಂತ ಕಷ್ಟನಷ್ಟಗ ಇಲ್ಲಿರುವದರಿಂದ ನನ್ನ ಅಂಗೀಕೃತ ರಾಷ್ಟ್ರಕಾರ್ಯವು ಭರಭರಾ ಟಿಗೆ ಬರಬೇಕೆಂತಲೇ ಈಶ್ವರೀಸಂಕೇತವಿರಬಹುದು !” ಎಂದು ಸನ್ ೧೯೦೮ಇಸ್ವಿಯ ರಾಜದ್ರೋಹದ ಖಟ್ಟೆಯಲ್ಲಿ ಜಸ್ಟಿಸದಾವರ ಇವರು ಆರುವರ್ಷಗಳ ಟಾಪುಶಿಕ್ಷೆಯನ್ನು ವಿಧಿಸಿದುಗ ಲೋಕಮಾನ್ಯ ಟಿಳಕ ರವರು ಕೋರ್ಟಿಗೆ ಉದ್ದೇಶಿಸಿ ಮಾತಾಡಿದರು. ಲೋಕಮಾನ್ಯರ ಈ ಭಾಷಣವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬಹುದಾಗಿದೆ. ಹಾಗು ಪ್ರಗತಿಪರನು ದಿನಾಲು ಪಾರಾಯಣಮಾಡಲಿಕ ಅದು ತಕ್ಕದ್ದಾಗಿದೆ ಉಪಹಾಸ, ಅಪಮಾನ, ವಿಟಂಬನೆ, ವಿಪರೀತ ಪರಿಸ್ಥಿತಿ, ಭಯಂ ಕರದಾರಿದ್ರ ಮೊದಲಾದ ದುಃಖದಾಯಕಸ್ಥಿತಿಯಿಂದಲೇ ಎಷ್ಟೋ ಜನರ ಪ್ರಗತಿಗಾಗಿ ಪ್ರಖ್ಯಾತರಾಗಿರುವರು. ಉಪಹಾಸ ಇಲ್ಲವೆ ಅಪಮಾನವಾದಹೊರತು ಎಷ್ಟೋಜನರಿಗೆ ಪ್ರಗತಿಮಾರ್ಗವು ಗೋಚರ ವಾಗುವದಿಲ್ಲ. ಅರ್ಜುನನಿಗೆ ಅಪಮಾನ-ಉಪಹಾಸಗಳು ಆದ ಹೊರತು ಕಾರ್ಯಸೂರ್ತಿಯೇ ಆಗುತ್ತಿಲ್ಲವೆಂದು ಭಾರತ ದಲ್ಲಿ ವರ್ಣಿಸಿದೆ; ಇದರಂತೆ ಅಪಮಾನವು ಕರ್ಣನಿಗೆ ಆದರೆ ಅವ