ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

سرم و مسم ನಂದರೆ, ಯಾವ ಕೆಲಸವು ಶ್ರಮವಿಲ್ಲದೆ ಕೈಗೂಡುವದೋ ಆ ಕೆಲಸ ದಲ್ಲಿ ಏನಾದರೂ ಗೌಣವಿರಲೇಬೇಕು. ಮತ್ತು ನಿರಾಯಾಸದಿಂದಾ ದ • ಕೆಲಸವು ಮಹತ್ವದೋ ಅಲ್ಲ, ಇಂಧ ನಾವಿರಾರು ಕೆಲಸ ಮಾಡಿದರೂ ಮನುಷ್ಯನ ಪ್ರಗತಿಯಾಗಲಾರದು. ಮೈಮೇಲೆ ರ್F ಗಾಯಗಳಾಗಿದ್ದರೂ ಸಂಗ್ರಾಮಸಿಂಹನು ಸಾಯುವವರೆಗೆ ಯುದ್ದ ಮಾಡಲಿಕ್ಕೆ ಹೇಗೆ ಬೇಸರಿಯುತ್ತಿದ್ದಿಲ್ಲವೋ, ಹಾಗೆ ಸಂಕಟಪರಂ ಪರೆಗಳಿಗೆ ಎದುರಾಗಿ ಶ್ರೇಯಸ್ಸನ್ನು ಪಡೆದಿರುವ ಮನುಷ್ಕನು ಕರಿ ಕಾರ್ಯಗಳನ್ನು ಮಾಡಲಿಕ್ಕೆ ಹಿಂದುಮುಂದು ನೋಡುವದಿಲ್ಲ. ಅಂಧವನಿಗೆ ಸಂಕಟಗಳಿಗೆ ಎದುರಾಗುವದಕ್ಕೂ ವಿಧವಿಧದ ಪ್ರಯ ತ್ನ ಮಾಡಿ ವಿಜಯಿಯಾಗುವದಕ್ಕೂ ಒಳ್ಳೆ ಹುರುಪು ಬರುವದು, ಈ ಹುರುಪ್ತ ಸಾಮಾನ್ಯ ಕೆಲಸಗಳಲ್ಲಿ ಬರುವದಿಲ್ಲದ್ದರಿಂದ ಅವನು ಸಾಮಾನ್ಯ ಕೆಲಸಗಳನ್ನು ಮಾಡಲುದ್ಯುಕ್ತನಾಗುವದಿಲ್ಲ. ಕೃತ್ರಿಮ ಉಪಹಾಸ-ಅಪಮಾನಗಳಂತೆ ಶರೀರವು ವ್ಯಂಗ ವಾಗಿ ಉಪಹಾಸವಾಗುವದರಿಂದಲೂ ಮನುಷ್ಯನಲ್ಲಿ ಒಂದು ತರದ ಕತ ವ್ಯಜಾಗ್ರತಿಯು ಬೆಳೆಯುವದು, ಎಷ್ಟೋ ಜನರು ಕುರುಡರು ಗಾಯನ ವಾದನಪಟುಗಳಾಗಿರುವರು. ಮೂಕರು ಉತ್ತಮ ಶಿಲ್ಪಿ ಗರೂ, ನೇಕಾರರೂ, ಬಡಿಗರೂ ಆಗಿರುವರು. ನಾದಮಾಧವನೆಂಬ ಸುಪ್ರಸಿದ್ದ ಮಹಾರಾಷ್ಟ್ರ ಕಾದಂಬರಿಕಾರನು ಹೆಳವನಿದನು. ಜನ್ಮತಃ ಕಾಲು- ಕೈಗಳಿಲ್ಲದ ಅಗಡಿಯ ರಾಮಭಟ್ಟ, ತಾಳಿಕೋಟಿ (ಒಡೆಯರು) ಎಂಬವರು ಮಹಾಬುದ್ಧಿಶಾಲಿಗಳಿದರು: ನಮ್ಮಲ್ಲಿಯ ಬಹು ಸ್ವಲ್ಪ ಜನರು ತಮ್ಮ ನಿಜವಾದ ಯೋಗ್ಯ ತಯನ್ನು ಕಂಡುಕೊಂಡವರೂ, ಪ್ರಗತಿಯ ಯೋಗ್ಯ ಮಾರ್ಗವನ್ನು ಹಿಡಿದವರೂ ಆಗಿರುತ್ತಾರೆ: ತಮ್ಮ ಸಾಮರ್ಥ್ಯಭಾಂಡಾರದ, ದೇಹ ಸಾರ್ಧ್ಯಕ್ಯದ ಮಾರ್ಗವನ್ನು ಗೊತ್ತುಹಚ್ಚಿಕೊಳ್ಳುವಷ್ಟರಲ್ಲಿಯೇ ಎಷ್ಟೋ ಜನರು ಇಹಲೋಕದಯಾತ್ರೆಯನ್ನು ಮುಗಿಸಿಕೊಳ್ಳುವರು, ವಿಶಿಷ್ಟ ಕಾರ್ಯಕ್ಕಾಗಿ ಒಂದೇಸವನೆ ದುಡಿಯುವದೇ ಪ್ರಗತಿಯ