ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

==೭೦ ಪರಾಜಯವಾದ ಬಳಿಕ ಅವಲಂಬಿಸುವ ಮಾರ್ಗದಿಂದಲೇ ಮನುಷ್ಯನ ಖರೇ ಪರೀಕ್ಷೆಯಾಗುವದು. ಪರಾಜಯದಿಂದ ಅವನು ಪ್ರೋತ್ಸಾಹನಹೊಂದುವನೋ ನಿರಾಶೆಹೊ೦ದುವನೋ ಎಂಬದನ್ನು ನೋಡಬೇಕು, ಪರಾಜಯಕ್ಕೆ ಹೆದರದಿದ್ದರೆ ಹೆಚ್ಚು ಪ್ರಗತಿಪಡೆಯು ವನು, ಪರಾಜಯಕ್ಕೆ ಹೆದರಿದರೆ ಕಾರ್ಯವಿನ್ಮುಖನಾಗಿ ಅಧೋಗತಿ ಹೊಂದುವನು. ಆರಂಭಶೂರಃ” ಎಂಬಂತ ಎಲ್ಲಿ ನೋಡಿದರೂ ಒಳ್ಳೆ ಈರ್ಷೆ ಯಿಂದ ಹೊಸ ಹೊಸ ಕೆಲಸ ಮಾಡುವವರೇ ಕಣ್ಣಿಗೆ ಬೀಳುತ್ತಾರೆ. ಮತ್ತು ಕ್ಷುಲ್ಲಕ ವಿಷ್ಣು ಬಂದಕೂಡಲೆ ಕಾರ್ಯವಿನ್ಮುಖರಾಗಿ ಪರಾ ಜಯಹೊಂದುತ್ತಾರೆ, ಸಾವಿರಗಟ್ಟಲೆ ಜನರಿಗೆ ತಮ್ಮ ದಾರಿದ್ರದ ನಿಜವಾದ ಕಾರಣವು ಗೊತ್ತಾಗಿರುವದಿಲ್ಲ. ಹಾಗು ಅದನ್ನು ತಿಳ ಕೊಂಡು ನಿವಾರಣಮಾಡಿಕೊಳ್ಳಲು ಯತ್ನಿಸುವದೂ ಇಲ್ಲ. ಪರಾ ಜಯವು ಪ್ರಾಪ್ತವಾದಾಗ ಎದೆಯೊಡೆದುಕೊಳ್ಳದೆ, ಮತ್ತೊಮ್ಮೆ ಅವಿಶ್ರಾಂತ ಪ್ರಯತ್ನ ಮಾಡಿ ಪ್ರಗತಿಹೊಂದಿದವರ ಎಷ್ಟೋ ಉದಾಹ ರಣೆಗಳು ಇತಿಹಾಸ ಪ್ರಸಿದ್ದವಿರುವವು. ತೈಮೂರನ್ನೂ, ಘೋರಿ ಮಹಮ್ಮದನೂ, ಶಿಕಂದರಬಾದಶಹನ, ಪ್ರತಾಪಸಿಂಹನೂ ಹೀಗೆ ಪ್ರಯತ್ನ ಮಾಡಿ ಯಶೋಭಾಗಿಗಳಾಗಿರುವರು. ಪುನಃ ಪುನಃ ಪ್ರಯತ್ನ ಮಾಡಿದ್ದರಿಂದಲೇ ಅಂಗೈಯರನೇಕರು ಹಲವು ದೇಶಗಳನ್ನು ಗೊತ್ತು ಹಚ್ಚಿದರು. ಪೇರಿಸನೆಂಬ ಶೋಧ ಕನು ಉತ್ತರಧ್ರುವವನ್ನು ಕಂಡು ಹಿಡಿಯುವದಕ್ಕೆ ಆರುಸಾರೆ ಪ್ರಯ ತಮಾಡಿ ಪರಾಜಯಹೊಂದಿದನು. ಪ್ರತಿಯೊಂದು ಸಾರೆ ಸಂಗಡಿಗ ರಾದ ನೂರಾರುಜನ ನಾವಿಕರನ್ನೂ, ಎಷ್ಟೋ ಸಾಧನಸಾಮಗ್ರಿಗ. ಳನ್ನೂ ಕಳಕೊಂಡನು, ಆದರೆ ಅವನ ದಢನಿಶ್ಚಯವು ಮಾತ್ರ ಸಡಿಲಾಗಲಿಲ್ಲ . ಅಂತಿಮಸಾಧ್ಯಕಾಗಿ ೨೫ ವರ್ಷ ಅವನು ಕಷ್ಟಪಡಬೇಕಾಯಿತು. ಈ ಅವಧಿಯಲ್ಲಿ ಒಮ್ಮೆ ಸಹ ಅವನು ನಿರಾಶನಾಗಲಿಲ್ಲ, ಅವನ ಧೀರ್ಘ ಪ್ರಯತ್ನದಿಂದಲೇ ಏಳನೇಸಾರೆ