ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

--೮೨ ೪ಾದ ಗುಣಗಳನ್ನು ಪಡೆಯುವ ಮಾರ್ಗವು ಕಪ್ಪಾಗುತ್ತದೆ. ಕೇವಲ ಯಜಮಾನನ ಅನುವರ್ತಿಯಾಗುವದರಿಂದ ಸೇವಕನ ಆತ್ಮವಿಶ್ವಾಸವು ಲೋಪವಾಗುತ್ತದೆ, ಕಾರ್ಯಾಸಕ್ತಿಯು ಕಡಿಮೆಯಾಗುತ್ತದೆ, ದುರಾಶೆಯು ಉತ್ಪನ್ನವಾಗುತ್ತದೆ, ಆಲಸ್ಯವು ಬೆಳೆಯುತ್ತದೆ, ಸದಭಿ ಮಾನವೂ, ದೈವೀಭಾವನೆಗಳೂ ರೂಪಾಂತರಿಸುತ್ತವೆ. ಹೀಗೆ ದಾಸ್ಯ ವತಿಯು ಒಂದಲ್ಲ, ಎರಡಲ್ಲ ಅನಂತದುರ್ಗುಣಗಳು ಸೇವಕನಲ್ಲಿ ಅಂಕುರಿಸಲು ಕಾಣೀಭೂತವಾಗುತ್ತದೆ, ನಾವು ಇಲ್ಲಿಯವರೆಗೆ ವಿವೇಚಿಸುತ್ತ ಬಂದ ವಿವರಣೆಗಳಮೇ ಲಿಂದ ವಾಚಕರು ಗೊಂದಲದಲ್ಲಿ ಬಿದ್ದು ಒಬ್ಬರ ಆಳಾದಹೊರ್ತು ನಮ್ಮ ಹೊಟ್ಟೆ ತುಂಬುವ ಹಾಗಿಲ್ಲದ್ದರಿಂದ ನಾವು ಮುಂದೇನುಮಾ ಡಬೇಕು' ಎಂಬ ಕಲ್ಪನೆಯನ್ನು ಮಾಡಬಹುದು; ಆದರೆ ಅವರಿಗೆ ನಮ್ಮ ಉತ್ತರವಿಷ್ಟೆ; ಒಬ್ಬರ ಆಧೀನನಾಗಿದ್ದ ಮನುಷ್ಯನು ತಾನು ಎಷ್ಟರಮಟ್ಟಿಗೆ ಒಬ್ಬರನ್ನು ಆಶ್ರಯಿಸಿರುವೆನು, ತನ್ನಲ್ಲಿ ಪೌರುಷಪ್ರಿಯತೆಯ, ಸ್ವಾತಂತ್ರಪ್ರಿಯತೆಯ ಎಷ್ಟರಮಟ್ಟಿಗೆ ರುವವು, ಎಂಬದನ್ನು ತೂಗಿ ನೋಡಿಕೊಳ್ಳಬೇಕು, ಮತ್ತು ತನ್ನ ವಿಚಾರಸ್ವಾತಂತ್ರ್ಯವನ್ನಾದರೂ ಕಾಯುಕೊಳ್ಳಲಿಕ್ಕೆ ಅರ್ಹನಾಗ ಬೇಕು. ಮನಸ್ಸಿನಿಂದ ಸ್ವಾತಂತ್ರಸುಖವನ್ನು ಅನುಭವಿಸುತ್ತ ರಟ್ಟೆಯನ್ನು ಮುರಿದು ( ದುಡಿದು ) ಹೊಟ್ಟೆ ತುಂಬಿಕೊಳ್ಳುವದು ದಾಸ್ಯವಲ್ಲ. ಒಬ್ಬನು ಮತ್ತೊಬ್ಬನನ್ನು ಆಶ್ರಯಿಸುವದರಲ್ಲಿ ಎರಡು ಪ್ರಕಾ ರಗಳುಂಟು. ಕೇವಲ ವ್ಯವಹಾರದ ಅಧವಾ ಗರಜಿನ, ಅಥವಾ ಕಾರ್ಯನಿಮಿತ್ಯದ ಮಟ್ಟಿಗೆ ಒಬ್ಬನು ಮತ್ತೊಬ್ಬನನ್ನು ಆಶ್ರಯಿಸಿ, ಉಳಿದ ಬಾಬುಗಳಲ್ಲಿ ಸ್ವತಂತ್ರನಾಗಿ ಇರತಕ್ಕವನು ಒಂದನೆಯ ವರ್ಗದವನು. ಕೇವಲ ಯಜಮಾನನ ಕೈಯೊಳಗಿನ ಕಲ್ಲಿನಂತೆ ಇದ್ದು, ತನ್ನ ನೈಸರ್ಗಿಕಪರುಷ ಸ್ವಾತಂತ್ರ್ಯವನ್ನು ಅವನಿಗೊಪ್ಪಿಸಿ ತನ್ನ ಅತ್ಯಂತ ಶ್ರೇಷ್ಠವಾದ ಆಯುಷ್ಯವನ್ನು ಅವನ (ಅಂದರೆ ಯಜ ಮಾನನ) ಸೇವೆಯಲ್ಲಿ ಕಾಲಕಳೆಯುವವನು ೨ನೇ ವರ್ಗದವನು;