ಪುಟ:ಪ್ರಜ್ಞಾ ಸ್ವಯಂವರಂ.djvu/೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಂಕ] ಪ್ರಜ್ಞಾಸ್ವಯಂವರಂ • ", " . .. . • • • • • • • • • • • • • • - 4 : V • ವಿವೇಕ-ದೇವಿ ! ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುವ ಪ್ರತಿಪಕ್ಷದ ವರ ಹಾವಳಿಯನ್ನು ಕೇಳಿ ಕೇಳಿ ಮನಸ್ಸು ತಲ್ಲಣಿಸುವುದು; ಮುಂದೋರ ದಿರುವುದು. ಈ ಸಮಯದಲ್ಲಿ ನಿನ್ನ ಸಮಯೋಚಿತವಾದ ಹಿತಸೂಚನೆಯೊಂದೇ ಶಕ್ತಿಯನ್ನುಂಟುಮಾಡಬೇಕು. ಸುಶೀಲೆ-ಆರ್ಯಪುತ್ರನೆ ! ಭಗವಂತನು ಭಕ್ತರ ಮನಸ್ಸನ್ನು ಪರೀ ಕ್ಷಿಸುವ ಉದ್ದೇಶದಿಂದಲೇ ಅವರಿಗೆ ಹಲವು ಪ್ರತಿಬಂಧಕಗಳನ್ನು ಒಟುಮಾಡಿ ನೋಡುವನು, ಸ್ಪಿರಮನಸ್ಸಿನಿಂದಲೂ ಸಾಹಸದಿಂದಲೂ ಭಗವಂತನಲ್ಲಿ ಅಹಂ ಚಲವಾದ ಭರವಸೆಯಿಂದಲೂ ನಾವು ಅಂತಹ ಪ್ರತಿಬಂಧಕವನ್ನು ಪರಿಹರಿಸಿ ಎಳ್ಳುವ ಪ್ರಯತ್ನ ಮಾಡಬೇಕು. ಆದುದರಿಂದ ಈ ವೇಳೆಯಲ್ಲಿ ಅಧೈರ್ಯ ಪಡದೆ ಪ್ರತಿ ಪಕ್ಷದವರ ವಿಗ್ರಹೋಪಾಯವನ್ನು ಆಲೋಚಿಸಬೇಕು, ವಿವೇಕ-ದೇವಿ ! ನೀನು ಹೇಳುವುದು ವಿಹಿತವೇಸರಿ, ಪ್ರಕೃತ ದಲ್ಲಿ ನಮ್ಮ ಪ್ರತಿಪಕ್ಷದವರಿಗೆ ಇರುವಷ್ಟು ಶಕ್ತಿ ನಮಗಿಲ್ಲವೆಂದು ಚಿಂತಿಸ ಬೇಕಾಗಿರುವುದು. ಸುಶೀಲೆ-ಆರ್ಯ ಪುತ್ರನೆ ! ಪ್ರತಿಪಕ್ಷದವರು ಕಾಲಬಲದಿಂದ ಪ್ರಬ ಅಕಾಗಿದ್ದರೂ ದೈವಬಲವುಳ್ಳ ನಮ್ಮವರನ್ನು ಅವರು ಅತಿಕ್ರಮಿಸಲಾರರು, ವಿಜಯಲಕ್ಷ್ಮಿ ನಮ್ಮವರನ್ನೇ ವರಿಸುವಳೆಂಬುದು ನಿಜವಾದ ಮಾತು ! ವಿವೇಕ-ದೇವಿ ! ತಪಸ್ವಿನಿಯಾದ ನಿನ್ನ ವಾಕ್ಯವು ಅನೈತವಾಗದೆಂದು ನಂಬುವೆನು. ಇನ್ನು ನಮ್ಮ ಶಾಂತಾದಿ ಸಚಿವರನ್ನು ನೇಮಿಸಿ, ವಿಷ್ಣುಭಕ್ಷ ನನ್ನು ಕರೆಯಿಸುವ ಪ್ರಯತ್ನ ಮಾಡುವ-ನಡೆ, (ಇಬ್ಬರೂ ಹೊರಡುವರು.) ಇಲ್ಲಿಗೆ ಪ್ರಥಮಾಂಕವು ಮುಗಿದುದು,