ಪುಟ:ಪ್ರಜ್ಞಾ ಸ್ವಯಂವರಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಸಸಿ ನಗ್ರಂಧಾವಳಿ [ತೃತೀ \ vs ತನ್ನ ಪತ್ನಿ ಯಾದ ಸರಸ್ವತಿಯನ್ನು ಕೆಳಗಿಳಿಸಿ, ತನ್ನ ತೊಡೆಯನ್ನು ತೊಳೆದು ಕೊಂಡು ನನ್ನನ್ನು ಇದಿರ್ಗೊಂಡು ಆದರಿಸಿ ತೊಡೆಮೇಲೆ ಕುಳ್ಳಿರಿಸಿಕೊಂಡನು. ಬ್ರಹ್ಮನೇ ನನಗಿಷ್ಟು ಸನ್ಮಾನಿಸಿದಮೇಲೆ ವಸಿಷನ ಮಾತೇನು ? ಕೊಧ- (ನಗು) ಮಿತ್ರನೆ ! ಬ್ರಹ್ಮನೆಂಬ ಹೆಸರನ್ನು ಕೇಳಿದ ಮಾತ್ರದಿಂದಲೇ ನೀನು ಹೇಳಿಕೊಳ್ಳುತ್ತಿರುವ ಈ ಅತಿಶಯೋಕ್ತಿಯಿಂದ ನಿನಗೆ ಡಂಭನೆಂಬ ಹೆಸರು ಅನ್ವರ್ಥವೇ ಆಯಿತು ! ಆಗಲಿ, ಈಗ ಮಾತ್ರ ಸೀನು ಈ ವೇಷದಿಂದ ವಸಿಷ್ಟನ ದೃಷ್ಟಿಗೆ ಗೋತೆರನಾದರೆ ನಾಮಾವಶಿಷ್ಯನೇ ಆಗುವೆ. ಡಂಭ (ಶಂಕೆಯಿಂದ) ಹೇಗೆ ? ಕೊಧಹೇಗೆಂದರೆ ನಿಷ್ಕಾಮಕರ್ಮಯೋಗದಲ್ಲಿರುವ ಆ ತಿ ಧನನು, ಜಗಜೇತನಾಗಿರುವ, ಯಾರಿಂದಲೂ ನಿವಾರಿಸಲಶಕ್ಯನಾಗಿರುವ ಕೊಧನಾದ ನನ್ನನ್ನೇ ಅಲಕ್ಷಿಸತಕ್ಕವನಲ್ಲವೆಂದು ಹೇಳಿದಮೇಲೆ ನಿನ್ನ ದಾವಗಣ ನೆಗೆ ಬರುವುದು ? - ಡಂಭ- (ಭಯಸಂಶಯದಿಂದ) ಹಾಗಾದರೆ ಉಪಾಯವೇನು ? ಕೊಧ--ಮಿತ್ರನೆ' ವಸಿಷ್ಠನ ಆಶ್ರಮವನ್ನು ಪ್ರವೇಶಿಸದೆ ವನಭಂಗ ಮಾಡುತ್ತಿದ್ದರೆ, ನಮ್ಮನ್ನು ನಿಗ್ರಹಿಸಲು ಬರುವ ವಿಷ್ಣು ಭಕ್ತನನ್ನು , ಶ್ರೀರಾಮ ನನ್ನು ವಂಚಿಸಿದ ಮಾರೀಚನಂತೆ ವಂಚಿಸಿ ಅರಣ್ಯವನ್ನು ಸೇರಿಸಬಹುದು. ಡಂಭ - (ಕ್ರೋಧನ ಬೆನ್ನ ತಟ್ಟುತ ಸಂತೋಷದಿಂದ) ಭಲೆ ! ಮಿತ್ರನೆ ! ಉತ್ತಮವಾದ ಉಪಾಯವೇ ಸರಿ. ನಿನ್ನ ಉಪಾಯಕ್ಕೆ ಮೆಚ್ಚಿ ದೆನು. ಇನ್ನು ನಾವು ನಮ್ಮ ಬೀಡಿಗೆ ಹೋಗಿ ವೀರರಂತೆ ಧನುರ್ಬಾಣಧರ ರಾಗಿ ಬರುವ, ಬಾ, (ಹೊರಡುವರು.) (ಸ್ಕಂಭ)