ಪುಟ:ಪ್ರಜ್ಞಾ ಸ್ವಯಂವರಂ.djvu/೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರ್ಫಾಂಕ್] ಪ್ರಜ್ಞಾ ಸ್ವಯಂವರ Ud

  • **** TV N Y Y * • • •

••• • • • • • • • • • • • • • • • • • • • • • ಪ್ರಜ್ಞೆ-ಜನನಿ ! ತಾಯ್ತಂದೆಯರ ಅಧೀನದಲ್ಲಿದ್ದು ಅವರ ಆಜ್ಞೆ ಯಂತೆ ಆಚರಿಸಬೇಕಾದುದೇ ಕುಲಸ್ತ್ರೀಯರ ಧರ್ಮವಲ್ಲವೆ? ನಿಮ್ಮ ಅಪ್ಪಣೆ ಯಿಲ್ಲದೆ ನಾನಾವಕಾರ್ಯವನ್ನೂ ಮಾಡಲಾರೆನು, - ಸುಶೀಲೆ.-ವತ್ಸೆ ! ನಿನ್ನ ಸಂಕಲ್ಪವು ಸ್ತುತ್ಯವೇಸರಿ ! ಪರಮೇಶನು ನಿನಗೆ ಪ್ರಸನ್ನ ನಾಗಿರುವನು, ನೀನಿನ್ನು ಸಂತೋಷಸ್ವಾಂತಳಾಗಿ ಅಂತಃಪುರ ವನ್ನು ಸೇರು. ನಾನು ನಿನ್ನ ತಂದೆಯವರಿಗೆ ಈ ವರ್ತಮಾನವನ್ನು ತಿಳಿಸಿ, ನಿನ್ನ ನಲ್ಲನನ್ನು ಕರೆಯಿಸುವೆನು, ಪ್ರಜ್ಞ-ಹಾಗಾದರೆ, ಜನನಿ ! ನಾನಿನ್ನು ಉತ್ಸಾಹದಿಂದ ಶಾಂತಿ ಯೊಡನೆ ಹೊರಡುವೆನು. (ಹೋಗುವಳು.) ಸುಶೀಲ-ಧೃತಿ ! ಮಹಾರಾಜರ ಸಮಯವನ್ನು ತಿಳಿದುಬಾ. ಧೃತಿ- ಆಗಬಹುದು. (ಹೋಗುವಳು.) ಸುಶೀಲೆ-(ಸಂತೋಷದಿಂದ) ಓ ದಯಾಸಾಗರ : ಸರ್ವೆಶ್ವರ ! ನಿನ್ನ ಕೃಪೆಯು ಅಮೋಘವಾದುದು, ಅಲಭ್ಯ ವಸ್ತುವನ್ನು ಸೌಲಭ್ಯ ವಾಗ ವಂತೆ ಮಾಡಿದ ನಿನ್ನ ಮಾಹಾತ್ಯೆಯನ್ನು ವರ್ಣಿಸಲಾರಿಗೆ ಅಳವು ? ಸುಕು ಮಾರಿಯ ಸಂತಾಪವನ್ನು ಶಮನಮಾಡಿದಂತೆಯೇ ಈ ವಿವಾಹವನ್ನು ಕೂಡ ನಿರ್ವಿಘ್ನವಾಗಿ ನೆರವೇರಿಸುವುದು ನಿನ್ನ ಇಚ್ಛೆಗೆ ಸೇರಿದುದೇಸರಿ, ಧೃತಿ- (ಹಿಂತಿರುಗಿ ಬಂದು) ದೇವಿ! ಮಹಾರಾಜರು ತಮ್ಮನ್ನೇ ಇದಿರು ನೋಡುತ್ತ ಅಂತಃಪುರದಲ್ಲಿರುವರು, - ಸುಶೀಲೆ- ಹಾಗಾದರೆ, ಸಮಯವು ಸರಿಯಾಗಿದೆ, ಬಾ (ಹೊರಡುವರು) (ವಿವೇಕನು ಒಬ್ಬನೇ ಕುಳಿತು ನಿರೀಕ್ಷಿಸುತ್ತಿರುವರು.)