ಪುಟ:ಪ್ರತಾಪರುದ್ರದೇವ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿ ಶ್ರೀ ಕೆ . ಗಳಿಗಿದು ತಿಳಿದಿದ್ದರೆ ಈ ಸಾಮತಿಯನ್ನವರು ಹೇಳುತ್ತಲೇ ಇರಲಿಲ್ಲ. ಒಂದುವೇಳೆ ಹೇಳಿದರೂ ತಕ್ಕ ಪ್ರತಿಷೇಧಗಳೊಡನೆ ಹೇಳುತ್ತಿದ್ದರೆನುವದ ರಲ್ಲಿ ಸಂದೇಹವಿಲ್ಲ. ಭಾಷಾಂತರಿಸಿದ ಕಾವ್ಯವು ನಿಸ್ಸಾರವಾಗಿರಲು ಭಾಷಾಂತರಿ ಸಲು ಪ್ರತಿಬಂಧಕಗಳಾದ ಕಾರಣಗಳಿದ್ದರೆಹೊರ್ತು ಅಲ್ಲದಿದ್ದರೆ ಆಗಕೂಡ ದಷ್ಟೆ. ಅಕಾರಣವಾಗಿ ನಿಸ್ಸಾರವಾಗಿದ್ದರೆ ಭಾಷಾಂತರಿಸಿದವನಲ್ಲಿ ತಕ್ಕ ಯೋಗ್ಯತೆಯಿಲ್ಲವೆಹೊರ್ತು ರಸವತ್ತಾಗಿ ಭಾಷಾಂತರಿಸಲು ತೊಂದರೆ ಎನೂ ಇರುವದಿಲ್ಲ. ಒಬ್ಬನಲ್ಲದಿದ್ದರೆ ಅವನಿಗಿಂತಲು ಬುದ್ಧಿವಂತನಾದ ಮತ್ತೊ ಬೃನು ಸರಿಯಾಗಿ ಭಾಷಾಂತರಿಸಿ ಆ ಸಾಮತಿಯನ್ನು ತಿರಸ್ಕರಿಸುವನು. ನಮ್ಮ ಕನ್ನಡದಲ್ಲಿರುವ ಮುಖ್ಯವಾದ ಗ್ರಂಥಗಳು ಸಂಸ್ಕೃತದಿಂದ ಕನ್ನಡಿ ಸಲ್ಪಟ್ಟಿರುವವು. ಅವುಗಳಲ್ಲಿ ಕೆಲವು ಮೂಲವಿದ್ದಂತೆ ಕ್ರಮವಾಗಿ ಭಾಸಾಂ ತರಿಸಲ್ಪಟ್ಟಿರುವವು. ಮತ್ತೆ ಕೆಲವು ಸಂಸ್ಕೃತ ಮೂಲಗ್ರಂಥವನ್ನು ಸಂಕ್ಷೇ ಪವಾಗಿ ತೆಗೆದುಕೊಂಡು ಕನ್ನಡಕ್ಕೆ ಭಾಷಾಂತರಿಸಲ್ಪಟ್ಟಿರುವವು. ಸಂಸ್ಕೃ ತಗ್ರಂಥಗಳನ್ನು ಕನ್ನಡಿಸುವಲ್ಲಿ ನಿಸ್ಸಾರವಾಗಲು ಪ್ರತಿಬಂಧಕಗಳು ಎಷ್ಟರಮಟ್ಟಿಗಿರುವವು? ಆ ಇಟ್ಯಾಲಿರ್ಯ ಸಾಮತಿಗೆ ಈ ಸಂದರ್ಭದಲ್ಲಿ ಎಣ್ಮರಮಟ್ಟಿಗೆ ಅವಕಾಶವಿರುವದು ? (೧) ಮೂಲ ಗ್ರಂಥವನ್ನು ಸಂಸ್ಕೃತದಲ್ಲಿ ಹೇಳಿದವರು, ಯಾವ ಜನರು ಯಾವ ದೇಶದಲ್ಲಿ ಯಾವ ಜನಗಳ ಮಧ್ಯದಲ್ಲಿ, ಯಾವ ಪದಾರ್ಥ, ಯಾವ ವಿಷಯಗಳನ್ನು ಕುರಿತು ಯಾವ ರೀತಿ ಯಾವ ಬೆಚ್ಚಗುಟ್ಟಗಳಲ್ಲಿ, ಯಾವ ನದಿಗಳ ತಟದಲ್ಲಿ ಯಾವ ವನಾಂತರಗಳಲ್ಲಿ ಯಾವ ಋತುಭೇದಗ ಇಲ್ಲಿ ಯಾವ ಆಕಾಶಮೋಡಗಳ ಕೆಳಗೆ ಕೂತು ಬರೆದರೋ, ಅವೆಲ್ಲವೂ ಕನ್ನಡಿ ಗರ ತಿಳುವಳಿಕೆಯಲ್ಲಿರತಕ್ಕವಾಗಿರುತ್ತವೆ. (೨) ಸಂಸ್ಕೃತದಲ್ಲಿರತಕ್ಕ ಪುರಾಣ, ಇತಿಹಾಸ, ನೀತಿ, ನ್ಯಾಯ, ಮತ, ಆಚಾರವ್ಯವಹಾರಗಳೂ ಕನ್ನಡಿಗರದಾಗೇ ಇರುತ್ತವೆ. (೩) ಸಂಸ್ಕೃತಗ್ರಂಥಗಳಲ್ಲಿ ಯಾವಯಾವದು ಕಾವ್ಯರಚನೆಯಾಗಿ ರುವದೊ ಕನ್ನಡದಲ್ಲೂ ಅವೇ ಕಾವ್ಯರಚನೆಯಾಗಿರುವವು.