ಪುಟ:ಪ್ರಬಂಧಮಂಜರಿ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

iy ಪೀಠಿಕೆ, ಗಳನ್ನು ಪ್ರಯೋಗಿಸುವ ಸ್ಥಾನಗಳನ್ನು ತೋರಿಸಿದೆ. ವಿಷಯಭೇದದಿಂದ ಪ್ರಬಂಧರಚನೆ ಮೂರು ಬಗೆಯೆಂದು ಇಂಗ್ಲಿಷ್ ಗ್ರಂಥಗಳು ಹೇಳುವುದನ್ನನುಸರಿಸಿ, ಇವುಗಳಿಗೆ ವೃತ್ತಾಂತಕಥನ,” ಆವತ್ತು ವರ್ಣನ” ಗುಣನಿರೂಪಣ” ಎಂಬ ಹೆಸರುಗಳನ್ನು ಕೊಟ್ಟು, ಆ ಪ್ರತಿಯೊಂದು ತರದ ಪ್ರಬಂಧರಚನೆಯ ಸ್ವರೂಪವನ್ನು ವರ್ಣಿಸಿ, ಅದರ ಕ್ರಮವನ್ನು ಉದಾಹರಣೆಗಳೊಡನೆ ಸಂಪೂರ್ಣವಾಗಿ ವಿವರಿಸಿದೆ. ಪರೀಕ್ಷೆಯಲ್ಲಿ ಪ್ರಬಂಧವನ್ನು ಬರೆವಾಗ ಅನುಸರಿಸಬೇಕಾದ ವಿಶೇಷವಿಧಿಗಳನ್ನು ಹೇಳಿ, ಮೊದಲನೆಯ ಭಾಗವನ್ನು ಮುಗಿಸಿದೆ. ಎರಡನೆಯ ಭಾಗದಲ್ಲಿ ಮಾದರಿಗಾಗಿ ನಾಲ್ವತ್ತು ವಿಷಯಗಳನ್ನು ಕುರಿತು ಪ್ರಬಂಧಗಳನ್ನು ಪೂರ್ಣವಾಗಿ ಬರೆದು ತೋರಿಸಿದೆ. ಪ್ರಬಂಧರಚನೆಗೆ ತಕ್ಕ ಇನ್ನೂ ಅರುವತ್ತು ವಿಷಯಗಳ ಹೆಸರುಗಳನ್ನು ಇವುಗಳಿಗೆ ಸೇರಿಸಿದೆ. ಕನ್ನಡದಲ್ಲಿ ಪ್ರಬಂಧರಚನೆಯ ವಿಷಯವಾಗಿ ಹೇಳಬೇಕಾದುದನ್ನೆಲ್ಲ ಈ ಗ್ರಂಥದಲ್ಲಿ ಸಮಗ್ರವಾಗಿ ಹೇಳಿದೆಯೆಂದು ನಾನು ನಂಬಿಕೊಂಡಿಲ್ಲ ; ಹಾಗೆ ಹೇಳುವುದು ಇದರ ಉದ್ದೇ ಶವೂ ಅಲ್ಲ. ಸದ್ಯಕ್ಕೆ ಹೊಸಗನ್ನಡದಲ್ಲಿ ಸಾಧಾರಣವಾದ ಪ್ರಬಂಧರಚನೆಯನ್ನು ಬರೆಯಲು ಬಾಲಕರಿಗೆ ಸ್ವಲ್ಪ ಮಟ್ಟಿಗೆ ಸಹಾಯ ಮಾಡಿಕೊಡುವುದೇ ಈ ಗ್ರಂಥದ ಮುಖ್ಯೋದ್ದೇಶವು, ಎಷ್ಟು ಮಟ್ಟಿಗಾದರೂ ಈ ಉದ್ದೇಶವು ನೆರವೇರುವುದಾದರೆ, ನನ್ನ ಶ್ರಮವು ಸಫಲವಾಯಿತೆಂದು ಎಣಿಸುವೆನು. ಈ ಗ್ರಂಥವನ್ನು ಆಮೂಲಾಗ್ರವಾಗಿ ನೋಡಿ ಪರಿಶೋಧಿಸಿದುದಕ್ಕಾಗಿ, ನನ್ನ ಅಣ್ಣಂದಿರು ಶ್ರೀ ಪಂಡಿತ ಶ್ರೀನಿವಾಸ ರಾಘ ವಾಚಾರ್ಯರವರಿಗೂ; ಈ ಗ್ರಂಥದ ತಿದ್ದು ಪಾಟಿನ ವಿಷಯ. ದಲ್ಲಿ ಕೆಲವು ಒಳ್ಳೆಯ ಸಂಗತಿಗಳನ್ನು ಸೂಚಿಸಿದುದಕ್ಕಾಗಿ, ಮೈಸೂರು ವಿದ್ಯಾಭ್ಯಾಸದ ಇಲಾ, ಖೆಯ ಟ್ರಾನ್ಸ್ ಲೇಟರು ಮ|| ರಾ|| ಎಸ್ ಜಿ. ನರಸಿಂಹಾಚಾರ್ಯರವರಿಗೂ ಬಹಳ ಕೃತಜ್ಞನಾಗಿದ್ದೇನೆ, ಈ ಪುಸ್ತಕವನ್ನು ಅಂದವಾಗಿ ತಪ್ಪಿಲ್ಲದೆ ಮುದ್ರಿಸಿಕೊಟ್ಟು ದಕ್ಕಾಗಿ, ಮಗ, ಭೂರು ಕೊಡಿಯಾಲ್‌ಬೈಲ್ ಮುದ್ರಾ ಯಂತ್ರದ ಅಧ್ಯಕ್ಷರಿಗೂ ಕೃತಜ್ಞನಾಗಿರುತ್ತೇನೆ, ಈ ಪುಸ್ತಕದಲ್ಲಿ ಸಾಧ್ಯವಾದ ಮಟ್ಟಿಗೆ ತಪ್ಪುಗಳಿಲ್ಲದಂತೆ ನೋಡಿಕೊಂಡಿದ್ದೇನೆ. ಈ ವರೆಗೂ ಗೋಚರವಾಗದಿರುವ ತಪ್ಪುಗಳನ್ನೂ, ಗ್ರಂಥದ ತಿದ್ದು ಪಾಟುಗಳನ್ನೂ ಯಾರಾದರೂ ದಯೆಯಿಟ್ಟು ತಿಳಿಸಿದರೆ, ಕೃತಜ್ಞತೆಯೊಡನೆ ಅಂಗೀಕರಿಸಲು ಸಿದ್ಧನಾಗಿದ್ದೇನೆ, ತುಂಕೂರು, ಸೆಪ್ಟೆಂಬರ್, 1904 ಎಸ್, ಟ, ರಾಘವಾಚಾರ್ಯ,