ಪುಟ:ಪ್ರಬಂಧಮಂಜರಿ.djvu/೧೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೮೪ ಪ್ರಬಂಧಮಂಜರಿ~ ಎರಡನೆಯ ಭಾಗ ದಯಾರಸದ ಶಕ್ತಿ ಅಪಾರವಾದುದು. ಮೈಗಳ್ಳನಾದ ಹುಡುಗನಿಗೆ ತಕ್ಕ ಸಮಯದಲ್ಲಿ ಆಡಿದ ಒಳ್ಳೆಯ ಮಾತಿನಿಂದ ಬುದ್ದಿ ಬಂದು, ಅವನು ಕಷ್ಟ ಪಟ್ಟೋದಿ ಪಂಡಿತನಾಗಿರುವುದುಂಟು. ದುಃಖದಲ್ಲಿ ಮುಳುಗಿರುವ ವರಿಗೆ ತೋರಿಸಿದ ದಯೆ ಅವರಲ್ಲಿ ಧೈರ್ಯವನ್ನು ಹುಟ್ಟಿಸಿ ಚೇತರಿಸಿಕೊಳ್ಳುವಂತೆ ಮಾಡಿದೆ. ಯಾವ ವಿಧವಾದ ಉಪಾಯಕ್ಕೂ ಸಗ್ಗದಿರುವವರು ದಯಾಪಾಶಕ್ಕೆ ಸಿಕ್ಕಿ ಸನ್ಮಾರ್ಗ ಹಿಡಿದಿರುವುದಕ್ಕೆ ಅನೇಕ ದೃಷ್ಟಾಂ. ತಗಳುಂಟು. ತಿರ್ಯಗ್ಧಂತುಗಳೂ ಒಳ್ಳೆಯ ಮಾತಿಗೆ ವಶವಾಗುತ್ತವೆ. ಒಳ್ಳೆಯ ಮಾತಾಡಿ ಬೆನ್ನು ತಟ್ಟಿದರೆ ಇವುಗಳಿಂದ ಎಷ್ಟು ಕೆಲಸವನ್ನು ಮಾಡಿಸಬಹುದೋ ಅಷ್ಟು ಕೆಲಸವನ್ನು ಕೋಲಿನಿಂದ ಹೊಡೆದು ಮಾಡಿಸಲಾಗುವುದಿಲ್ಲ. ಮನುಷ್ಯನಿಗಿರುವ ಸುಗುಣಗಳಲ್ಲಿ ದಯೆಯನ್ನು ಎಲ್ಲರೂ ಮರೆಯದೆ ಶಾಶ್ವತವಾಗಿ ಕೊಂಡಾಡುವರು. 22. ಸ್ವದೇಶಾಭಿಮಾನ, ತಾಯ್ತಂದೆಗಳು ತಮಗೂ ತಮ್ಮ ಮಕ್ಕಳಿಗೂ ಭೇದಮಾಡದೆ ಅವರಲ್ಲಿ ಅತ್ಯಂತ ಪ್ರೇಮದಿಂದ ಅವರಿಗಾಗಿ ಯಾವ ಕಷ್ಟವನ್ನಾದರೂ ಅನುಭವಿಸುವರು. ಮಕ್ಕಳು ಮುಂದಕ್ಕೆ ಬರಬೇಕೆಂದು ಮಾಡಬಹುದಾದುದನ್ನೆಲ್ಲಾ ಮನಃ ಪೂರ್ವಕವಾಗಿಮಾಡುವರು. ಇದರಿಂದ ಅವರನಕ್ಕಳು ಅಭಿವೃದ್ಧಿಗೆ ಬರುವರು. ಹಾಗೆಯೇ ಒಂದುದೇಶವು ಏಳಿಗೆಗೆಬರಬೇಕಾದರೆ, ಅದರಲ್ಲಿರುವ ಪ್ರತಿ ಮನುಷ್ಯನೂ ಸ್ವದೇಶವನ್ನು ತನ್ನ ಸಂಸಾರದಂತೆ ಭಾವಿಸಿಕೊಂಡು ಪ್ರೀತಿಸುತ್ತಾ ಅದರ ಶ್ರೇಯಸ್ಸಿಗಾಗಿ ಯಾವ ಕಷ್ಟವನ್ನಾದರೂ ಅನುಭವಿ. ಸುವುದಕ್ಕೆ ಹಿಂಜರಿಯದಿರಬೇಕು. ಸ್ವದೇಶದ ವಿಷಯದಲ್ಲಿ ಪ್ರತಿಯೊಬ್ಬನಿಗೂ ಇರಬೇಕಾದ ಇಂಥ ಪ್ರೀತಿಗೆ ಸ್ವದೇಶಾಭಿಮಾನವೆಂದು ಹೆಸರು. ಯಾವ ದೇಶದ ಪ್ರಜೆಗಳು ಸ್ವಾರ್ಥಪರರಾಗಿಯೂ ದೇಶಾಭಿಮಾನಹೀನ. ರಾಗಿಯೂ ಇರುವರೋ ಆ ದೇಶವೂ ಎಂದಿಗೂ ಏಳಿಗೆಗೆ ಬರಲಾರದು. ಸ್ವದೇಶಾಭಿಮಾನಕ್ಕೆ ಪ್ರಖ್ಯಾತಿಗೊಲಡ ಮಹಾ ಪುರುಷರು ಪ್ರತಿದೇಶದಲ್ಲಿಯೂ ಉಂಟು. ಪೂರ್ವ ಕಾಲದಲ್ಲಿ ಗ್ರೀಕರಲ್ಲಿಯೂ ರೋಮನ್ ಜನರಲ್ಲಿಯೂ ಇಂಥವರನೇಕರಿದ್ದರು. ಅದರಿಂದಲೇ ಅವರ ರಾಜ್ಯಗಳು ಬಹಳ