ಪುಟ:ಪ್ರಬಂಧಮಂಜರಿ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ೧೦೪ ಪ್ರಬಂಧಮಂಜರಿ-ಎರಡನೆಯ ಭಾಗ, ಒಂದು ದೇಶದ ಪತ್ರಿಕೆಯನ್ನು ಮತ್ತೊಂದು ದೇಶದಲ್ಲಿ ಓದುವುದರಿಂದ, ಎರಡು ದೇಶಗಳ ಆಡಳಿತಗಳನ್ನೂ ತಿಳಿಯಲು ಪರಸ್ಪರ ಅಭಿಲಾಷೆ ಹುಟ್ಟಿ ಸ್ನೇಹ ಹೆಚ್ಚುವುದು. ಈ ಕಾರಣಗಳಿಂದ ಪತ್ರಿಕೆಗಳನ್ನು ಸಾಮಾನ್ಯರು ಓದಬೇಕಾದುದಲ್ಲದೆ, ದೊರೆಗಳೂ ಅವರ ಮಂತ್ರಿಗಳೂ ಓದುವುದು ಅತ್ಯಾವಶ್ಯಕವು. ಅವರು ವೃತ್ತಾಂತ ಪತ್ರಿಕೆಗಳನ್ನೊದದಿದ್ದರೆ, ಜನ ರಂಜಕವಾದ ಏರ್ಪಾಡುಗಳನ್ನೂ ಬದಲಾವಣೆಗಳನ್ನೂ ಮಾಡಲು ಬುದ್ದಿ ಓಡದೆ ಪ್ರಜೆಗಳಿಗೆ ಕೇಡಾಗುವುದು. ವೃತ್ತಾಂತಪತ್ರಿಕೆಗಳು ಜನರಿಗೆಮಾಡುವ ಉಪಕಾರಗಳನ್ನೆಲ್ಲಾ ತಿಳಿಯಬೇಕಾದರೆ, ಯೂರೋಪ್ ಮತ್ತು ಅಮೆರಿಕ ದೇಶಗಳ ಚರಿತ್ರೆಗಳನ್ನೊದಬೇಕು. ಸುಮಾರು ಇನ್ನೂರು ವರ್ಷಗಳ ಕೆಳಗೆ ಇಂಗ್ಲೆಂಡಿನಲ್ಲಿ ಜನರ ನಡತೆ ಬಹಳ ಕೆಟ್ಟಿತ್ತು. ಇದನ್ನು ತಿದ್ದಬೇಕೆಂದು ಅಡಿಸನ್' ಎಂಬ ಒಬ್ಬ ಮಹಾ ಪಂಡಿತನು 'ಸ್ಪೆಕ್ಟೇಟರ್ ಎಂಬ ಪತ್ರಿಕೆಯನ್ನು ಹೊರಡಿಸಿ, ಪ್ರತಿ ಪ್ರಾತಃಕಾಲದಲ್ಲಿಯೂ ಒಂದೊಂದು ಪ್ರಬಂಧವನ್ನು ಜನರಿಗೆ ಜ್ಞಾನೋದಯವಾಗುವಂತೆ ಪ್ರಕಟಿಸುತ್ತಾ ಬಂದನು. ಇದರಿಂದ ಕೆಲವು ವರ್ಷಗಳಲ್ಲಿ ಜನರು ದುರ್ವಾಸಾರಗಳನ್ನು ಬಿಟ್ಟು ಸನ್ಮಾರ್ಗವನ್ನು ಹಿಡಿದರು, ಮೊದಲು ಇಂಗ್ಲೆಂಡಿನಲ್ಲಿ ವೃತ್ತಾಂತಪತ್ರಿಕೆಗಳು ರಾಜ್ಯ ತಂತ್ರವಿಚಾರಗಳನ್ನು ಚರ್ಚಿಸ ಕೂಡದೆಂಬ ನಿರ್ಬಂಧವಿತ್ತು; ಆದರೆ ಕ್ರಿ. ಶ. 1771 ರಲ್ಲಿ ಮಾಡಿದ ಕಾನೂನಿನಿಂದ ಇದು ಹೊದಿತು. ಅಂದಿನಿಂದ ಇಂಗ್ಲೆಂಡಿದಲ್ಲಿ ವೃತ್ತಾಂತಪತ್ರಿಕೆಗಳು ಲೋಕೋಪಕಾರಕ್ಕಾಗಿ ಸರ್ಕಾರದವರೊಡನೆ ಹೊಡೆದಾಡಿ ತಂ ಬಾ ಗೌರವವನ್ನೂ , ಜನರಂಜನೆಯನ್ನೂ ,ಕೀರ್ತಿಯನ್ನೂ ಪಡೆದು, ಸರ್ಕಾರದವರು ಕೂಡ ಪತ್ರಿಕೆಗಳ ಅಭಿಪ್ರಾಯಗಳನ್ನು ಗೌರವಿಸಿ, ಹಲವುವೇಳೆ ಅವುಗಳಂತೆ ಏರ್ಪಾಡುಗಳನ್ನು ಮಾಡುವಷ್ಟು ಪ್ರಾಮುಖ್ಯವನ್ನು ಹೊಂದಿವೆ. - ಹಿಂದೂದೇಶದಲ್ಲಿಯೂ ವೃತ್ತಾಂತಪತ್ರಿಕೆಗಳಿಲ್ಲದ ದೊಡ್ಡ ಪಟ್ಟಣಗಳೇ ಇಲ್ಲ ಇಂಗ್ಲಿಷಿನಲ್ಲಿಯೇ ಅಲ್ಲದೆ, ತಮಿಳು, ಕನ್ನಡ, ಮರಾಟಿ, ಗುಜರಾತಿ, ಬಂಗಾಳಿ ಮುಂತಾದೆಲ್ಲಾ ದೇಶಭಾಷೆಗಳಲ್ಲಿಯೂ ಪತ್ರಿಕೆಗಳನ್ನು ಪ್ರಕಟಿ. ಸುತ್ತಿದ್ದಾರೆ. ಹಿಂದೂ ದೇಶದಲ್ಲಿ ಮೊಟ್ಟ ಮೊದಲು ಹೊರಟ ಪತ್ರಿಕೆಯಲ್ಲಿ