ಪುಟ:ಪ್ರಬಂಧಮಂಜರಿ.djvu/೧೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೧೬ ಪ್ರಬಂಧಮಂಜರಿ-ಎರಡನೆಯ ಭಾಗ, ಹಿಂದೆ ಫಿನಿಷಿಯಾ ದೇಶದವರು ಯೂರೋಪಿನಲ್ಲೆಲ್ಲ ವ್ಯಾಪಾರದಲ್ಲಿ ವಿಖ್ಯಾತರಾಗಿದ್ದರು. ಇವರು ಕಡಲಮೇಲೆ ವ್ಯಾಪಾರಮಾಡಹತ್ತಿ, ತಾವು ಹೊಕ್ಕದೇಶದ ನಾಗರಿಕತೆಯನ್ನನುಸರಿಸುತ್ತ ಏಳಿಗೆಗೆ ಬಂದರು. ಇವರಿಂದ ವ್ಯಾಪಾರವನ್ನು ಕಲಿತು ಪ್ರಾಚೀನಗ್ರೀಕರು ನಾಗರಿಕತೆಯನ್ನು ಹೊಂದಿದುದಲ್ಲದೆ, ಮೆಡಿಟರೇನಿಯನ್ ಸಮುದ್ರದ ಸುತ್ತಲೂ ಇದ್ದ ಸೀಮೆಗಳಲ್ಲಿ ತಮ್ಮ ನಾಗರಿಕತೆಯನ್ನು ಸ್ಥಾಪಿಸಿದರು. ಗುಡ್ ಹೋಪ್ ಭೂಶಿರವನ್ನು ಕಂಡುಹಿಡಿದ ಬಳಿಕ ಮೂಡಸೀಮೆಗಳಿಗೆ ದಾರಿ ಸರಾಗವಾಗಲು, ಪೋರ್ಟ್ಯುಗಲ್, ಹಾಲೆಂಡ್, ಇಂಗ್ಲೆಂಡ್ ದೇಶಗಳ ಜನರು ಮಡಸೀಮೆಗಳೊಡನೆ ವ್ಯಾಪಾರಮಾಡಿ ನಾಗರಿಕತೆಯಲ್ಲಿಯೂ ಅಭಿವೃದ್ಧಿಯನ್ನು ಪಡೆದರು. ಅಮೆರಿಕಾಖಂಡವು ಕಂಡು ಹಿಡಿಯಲ್ಪಟ್ಟು, ಶೀಘ್ರವಾಗಿಯೇ ಯೂರೋ - ಪಿನ ನಾಗರಿಕತೆಯನ್ನು ಸ್ಪರ್ಧಿಸುವಷ್ಟು ಏಳಿಗೆಗೆ ಬಂದುದೂ ಮುಖ್ಯವಾಗಿ ವ್ಯಾಪಾರದಿಂದಲೇ. ಈಚೆಗೆ ಪಾಶ್ಚಾತ್ಯರ ವಿದ್ಯೆಯೂ, ಅವರು ಕಂಡುಹಿಡಿದಿರುವ ಅದ್ಭುತವಸ್ತುಗಳೂ ಇಂಡಿಯ, ಜಪಾನ್ ದೇಶಗಳಿಗೆ ವ್ಯಾಪಾರ ಮೂಲಕ ಬಂದು ಇಲ್ಲಿನ ನಾಗರಿಕತೆಯನ್ನು ಹೆಚ್ಚಿಸಿವೆ. ಒಂದುದೇಶದಲ್ಲಿ ತಿಳಿದಿರುವಂಶಗಳು ಮತ್ತೊಂದುದೇ ಶಕ್ಕೆ ವ್ಯಾಪಾರಿಗಳ ಮೂಲಕ ತಿಳಿಯಬರುವುದರಿಂದ ಪ್ರಪಂಚದಲ್ಲಿ ಜ್ಞಾನಾಭಿವೃದ್ಧಿಯುಂ ಗುವದು ಇಂಗಿ ವರ್ತಕರು ಯೂರೋಪಿನಲ್ಲಿ ತಿಳಿದಿರುವ ವಿಷಯ - ಗಳನ್ನು ಇಂಡಿಯ, ಚೀನಾ, ಜಪಾನ್ ದೇಶಗಳಿಗೆ ತಿಳಿಸಿ, ಇಲ್ಲಿನ ಕಲಾಕೌಶಲ್ಯವೇ ಮುಂತಾದುವುಗಳನ್ನು ತಮ್ಮ ಸೀಮೆಗೆ ಕೊಂಡೊಯ್ದ ರು. ಇದ. ಬಂದ ಅನೇಕ ಪದಾರ್ಥಗಳನ್ನು ಹೊಸದಾಗಿ ಕಂಡು ಹಿಡಿವುದಕ್ಕೆ ಅವಕಾಶ ವಾಯಿತು. ಮದ್ದು, ಅಚ್ಚು ಹಾಕುವುದು, ಸೂಜಿಗಲ್ಲು ಈ ಮೂರೂ ಯರೋಪಿನಲ್ಲಿ ತಿಳಿವುದಕ್ಕೆ ಅನೇಕ ಶತಮಾನಗಳ ಹಿಂದೆಯೇ ಚೀನಾದೇಶದಲ್ಲಿ ಕಂಡುಹಿಡಿಯಲ್ಪಟ್ಟಿದ್ದುವೆಂದು ಹೇಳುವರು. ಚೀನಾ ಸೀಮೆಗೆ ಅನ್ಯ ದೇಶಗಳೊಡನೆ ಚಿರಕಾಲ ಸಂಬಂಧವೇ ಇಲ್ಲದಿದ್ದುದರಿಂದ, ಚೀಣರು ತಮಗೆ ಗೊತ್ತಿದ್ದುದನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಬೇಕಾಗಿ ಬಂದು ಅವನ್ನು ವಿಶೇಷ ಉಪಯೋಗಕ್ಕೆ ತರಲಾಗದೆ ಹೋದರಂತೆ. ಹೀಗೆ ಹೊಸ ಸಂಗತಿಗಳು