ಪುಟ:ಪ್ರಬಂಧಮಂಜರಿ.djvu/೧೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೨೨ ಪ್ರಬಂಧಮಂಜರಿ-ಎರಡನೆಯ ಭಾಗ ರುವನ್ನು, ಇಂದ್ರಿಯ ನಿಗ್ರಹಕ್ಕೆ ತೃಪ್ತಿಯು ಬಹಳ ಸಾಧಕವೆಂಬುದಾಗಿ ನಮ್ಮ ಶಾಸ್ತ್ರಗಳು ಹೇಳುವುವು. ತೃಪ್ತಿಯೆಂಬ ಗುಣವನ್ನು ವೃದ್ಧಿ ಪಡಿಸಿಕೊಳ್ಳಬಹುದು. ನಮಗಿಂತ ಉತ್ತಮ ಸ್ಥಿತಿಯಲ್ಲಿರುವವರೊಡನೆ ನಮ್ಮನ್ನು ಹೋಲಿಸಿಕೊಳ್ಳುವುದರಿಂದಲೂ, ನಮಗೆ ಬೇಕಾಗಿಯೂ ನಮ್ಮಲ್ಲಿಲ್ಲದೆಯೂ ಇರುವ ವಸ್ತುಗಳ ವಿಷಯವಾಗಿ ಯೋಚಿಸು ವುದರಿಂದಲೂ ನಮಗೆ ಅತೃಪ್ತಿಯುಂಟಾಗುವುದು ತೃಪ್ತರಾಗಿರುವುದಕ್ಕೆ ಬಯಸುವವರು ತಮ್ಮ ಸ್ಥಿತಿಯನ್ನು ತಮಗಿಂತ ಕೀಳಾಗಿರುವವರ ಸ್ಥಿತಿಯೊಡನೆ ಹೋಲಿಸಿಕೊಳ್ಳುವುದಕ್ಕೆ ಮನಸ್ಸು ಮಾಡಬೇಕು. ತಮಗಿಂತ ಉನ್ನ ತಪದವಿಯಲ್ಲಿರುವವರೊಡನೆ ತಮ್ಮನ್ನು ಹೋಲಿಸಿ ಕೊಂಡರೆ, ತಮ್ಮಲ್ಲಿರುವ ಕೊರತೆಗಳು ಸ್ಪಷ್ಟವಾಗಿ ಕಂಡುಬಂದು ಅತೃಪ್ತಿಗೆ ಕಾರಣವಾಗುವುದು. ಯಾವ ಒಳ್ಳೆಯ ವಸ್ತುವೂ ಇಲ್ಲದಿರುವಷ್ಟು ನಿರ್ಭಾಗ್ಯರಾಗಿರುವವರು ಅಪೂರ್ವ. ಒಬ್ಬನು ಅತಿದರಿದ್ರನಾದರೂ ಆರೋಗ್ಯ ಭಾಗ್ಯವುಳ್ಳವನಾಗಿಯೂ ಆಮಿತ್ರಸಹಾಯಸಂಪನ್ನ ನಾಗಿಯೂ ಇರಬಹುದು. ಮತ್ತೊಬ್ಬ ನು ನಿರ್ಜನವಾದ ಪ್ರದೇಶದಲ್ಲಿರಬೇಕಾಗಿ ಬಂದು, ಮಾತನಾಡಿಸುವುದಕ್ಕೆ ಯಾರೂ ದಿಕ್ಕಿಲ್ಲದಿರಬಹುದು; ಆದರೆ ಇಂಥವನಿಗೆ ಗ್ರಂಥಗಳನ್ನೊ - ದುವ ಅಭಿಲಾಷೆ ತುಂಬಾ ಇದ್ದು, ಪುಸ್ತಕಗಳ ಮೂಲಕ ಕಾಲಾಂತರದಲ್ಲಿದ್ದ ಅನೇಕ ವಿದ್ವಾಂಸರ ಸಹವಾಸವನ್ನನುಭವಿಸುವ ಶಕ್ತಿಯಿರಬಹುದು. ಇದೆಲ್ಲಾ ಹಾಗಿರಲಿ, ದುಃಖಕ್ಕೆಲ್ಲ ತೌರುಮನೆಯಾದ ಅನಾರೋಗವು ಪಾಪವಾಗಿದ್ದರೂ, ಜನರು ತಮಗೆ ಗೆಳೆಯರೂ ನಂಟರೂ ಕನಿಕರದಿಂದ ಮಾಡುವ ಉಪಕಾರವನ್ನು ನೆನೆದು ಮನಸ್ಸನ್ನು ಸಮಾಧಾನಕ್ಕೆ ತಂದುಕೊಳ್ಳಬಹುದು. ಹೀಗೆ ಇದ್ದುದರಲ್ಲಿ ಸಂತೋಷವನ್ನು ಂಟುಮಾಡಿಕೊಳ್ಳುವುದಕ್ಕೆ ಒಬ್ಬೊಬ್ಬರಿಗೊಂದೊಂದು ದಾರಿಯುಂಟು ನಾನು ಇರುವ ಸ್ಥಿತಿಗಿಂತಲೂ ಇನ್ನೂ ಕೆಟ್ಟ ಸ್ಥಿತಿಯಲ್ಲಿರಬಹುದಾಗಿದ್ವಿತು; ಹಾಗೆ ಇಡದೆ ದೇವರು ಇಷ್ಟಾದರೂ ಕೊಟ್ಟಿದ್ದಾನೆಯಲ್ಲ, ಇದೇ ಸಾಕು.” ಎಂದು ಪ್ರತಿಯೊಬ್ಬನೂ ಯೋಚಿಸಿಕೊಂಡರೆ ತೃಪ್ತಿ ಬಲುಮಟ್ಟಿಗೆ ದೊರೆಯುವುದು. ಈ ಲೋಕದಲ್ಲಿ ನಮ್ಮ ಸ್ಥಿತಿ ಎಂಥದಾಗಿದ್ದರೂ,