ಪುಟ:ಪ್ರಬಂಧಮಂಜರಿ.djvu/೧೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫೪ ಪ್ರಬಂಧಮಂಜರಿ ಎರಡನೆಯ ಭಾಗ ವವಾಗಿ ಮನಸ್ಸಿನಲ್ಲಿ ದುರಾಲೋಚನೆಗಳು ಹುಟ್ಟುವುವು, ವಿದ್ಯಾಭ್ಯಾಸ ದಿಂದುಂಟಾಗುವ ಸದ್ಯಾಸಂಗಕ್ಕಿಂತಲೂ ಉತ್ತಮವಾದುದಿನ್ಯಾವುದೂ ಇಲ್ಲ. ಈಚೆಗೆ ಹಿಂದೂದೇಶದಲ್ಲಿಯೂ ಸ್ತ್ರೀ ವಿದ್ಯಾಭ್ಯಾಸವು ಮೊದಲಾಗಿದೆ. ಈಗ ಸರ್ಕಾರದವರು ಹೆಂಗಸರಿಗೋಸ್ಕರ ಸ್ಕೂಲುಗಳನ್ನೂ ಕಾಲೇಜುಗಳ ನ್ನೂ ನಿರ್ಮಿಸಿ, ಗಂಡಸರಿಗೆ ಹೇಗೋ ಹಾಗೆಯೇ ಅವರಿಗೂ ವಿದ್ಯಾಭ್ಯಾ ಸವನ್ನು ಮಾಡಿಸುತ್ತಿದ್ದಾರೆ. ಹೀಗೆ ಚಿರಕಾಲ ಸ್ತ್ರೀವಿದ್ಯಾಭ್ಯಾಸವು ಇಲ್ಲಿ ನಿರ್ವಿಘ್ನ ವಾಗಿ ನಡೆದರೆ, ಪಾಶ್ಚಾತ್ಯರಲ್ಲಿ ಸ್ತ್ರೀವಿದ್ಯಾಭ್ಯಾಸದಿಂದಾಗಿರುವ ಉಪಯೋಗಗಳೇ ನಮ್ಮಲ್ಲಿಯೂ ಆಗುವುವು. 54, ಆರೋಗ್ಯ. ಶರೀರದ ಎಲ್ಲಾ ಅವಯವಗಳೂ ತಂತಮ್ಮ ಕೆಲಸಗಳನ್ನು ಸರಿಯಾಗಿ ಮಾ ದಿಕೊಂಡಿರುವ ಸ್ಥಿತಿಗೆ ಆರೋಗ್ಯವೆಂದು ಹೆಸರು. ಅಂಗಗಳು ತಮ್ಮ ಕೆಲ. ಸಗಳನ್ನು ಕ್ರಮವಾಗಿಮಾಡದೆಹೋದರೆರೋಗಗಳುಂಟಾಗುವುವು. ಆರೋ ಗ್ಯದಿಂದಾಗುವ ಸುಖವು ಅಪಾರವು. ಮಕ್ಕಳು ಆರೋಗ್ಯದಲ್ಲಿರುವ ವರೆಗೂ ಆನಂದದಿಂದ ನಗುತಲೂ ಆಡುತಲೂ ಕುಣಿಯುತಲೂ ಇರುತ್ತಾರೆ, ಅವರ ದೇಹಸ್ಥಿತಿ ಸ್ವಲ್ಪ ಕೆಟ್ಟರೂ ಸಾಕು. ಯಾವಾಗಲೂ ಅಳುತ್ತ, ಆಟದ ಮೇಲೆ ಇಚ್ಛೆಯಿಲ್ಲದೆ, ಅವರಿಗೆ ಬೇಕಾದುದರಲ್ಲಿ ಎಳ್ಳಷ್ಟು ಹೆಚ್ಚು ಕಡಮೆಯಾದರೂ ಹಾರಾಡುತ ಚಂಡಿಹಿಡಿದು ತಾವೂ ಕೇಶಪಡುವುದಲ್ಲದೆ ಎಲ್ಲರಿಗೂ ಬೇಸರ ಹುಟ್ಟಿಸುವರು. ಆರೋಗ್ಯವಿರುವ ತನಕ ದೊಡ್ಡವರು ಕೂಡ ನಗೆಮೊಗದೊಡನೆಚಟುವಟಿಕೆಯಿಂದಎಲ್ಲಾ ಕೆಲಸಗಳನ್ನೂ ಮಾಡತೊಡಗುವರು; ಮತ್ತು ಕೆಲಸಕೆಟ್ಟರೂಅ೦ಜದೆಮುಂದುವರಿದು ನುಗ್ಗುವರು, ಆರೋಗ್ಯವು ಕುಂದಿದೊಡನೆಯೇ ಇಂತಹ ಗುಣಗಳೆಲ್ಲಾ ಹಾಳಾಗಿ, ಅಲ್ಪ ಕಾರಣಗಳಿಂದಲೇ ಅವರ ಮನಸ್ಸಿಗೆ ವ್ಯಥೆಯೂ ಕಳವಳವೂ ಉಂಟಾಗುವುವು. ಮನುಷ್ಯನಿಗೆ ಎಷ್ಟು ಸಂಪತ್ತಿದ್ದರೇನು?ಆರೋಗ್ಯವೊಂದಿಲ್ಲದಿದ್ದರೆ, ಸುಖವೆಂಬುದೆಂದಿಗೂ ದೊರೆಯಲಾರದು. - ಬುದ್ಧಿಶಕ್ತಿಯ ಅಭಿವೃದ್ಧಿಗೆ ಆರೋಗ್ಯ ತುಂಬಾ ಸಹಕಾರಿ. ಬುದ್ದಿ. ಬಲವು ಚೆನ್ನಾಗಿರಬೇಕಾದರೆದೇಹದಾರ್ಡ್ಯವಿರಬೇಕು ಅನಾರೋಗ್ಯದಿಂದ ದೇಹವನವೆಯುತ್ತಿದ್ದರೆ, ಮಿದುಳಿನ ಶಕ್ತಿಯೂ ಕಡಮೆಯಾಗುತ್ತಬರುವುದು.