ಪುಟ:ಪ್ರಬಂಧಮಂಜರಿ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಪ್ರಬಂಧಮಂಜರಿ-ಎರಡನೆಯ ಭಾಗ ಬಹುದು. ಸ್ವಲ್ಪ ಯೋಚಿಸಿದರೆ ಆರೋಗ್ಯವು ಎಲ್ಲರಿಗೂ ಸುಲಭವೆನ್ನುವುದು ಗೊತ್ತಾಗುವುದು. ಆರೋಗ್ಯಶಾಸ್ತ್ರದಲ್ಲಿ ಹೇಳಿರುವಂತೆ, ಆರೋಗ್ಯಕ್ಕೆ ಸಾಧಕಗಳು ಯಾವುವೆಂದರೆ:- ನಿರ್ಮಲವಾದ ಗಾಳಿಯೂ ಬೇಕಾದಷ್ಟು ಬೆಳಕೂ ಇರುವ ಮನೆಯಲ್ಲಿರುವುದು, ಶುದ್ಧವಾದ ನೀರನ್ನು ಕುಡಿವುದು, ಒಳ್ಳೆಯ ಆಹಾರವನ್ನು ಸಕಾಲದಲ್ಲಿ ಮಿತವಾಗಿ ತಿನ್ನುವುದು, ಕೊಳೆಯಿಲ್ಲದ ಒಟ್ಟೆಗಳನ್ನು ಧರಿಸುವುದು, ಅಂಗಸಾಧನೆ ಮತ್ತು ವಿಶ್ರಾಂತಿ, ಊಟ . ಮೊದಲಾದುವುಗಳಲ್ಲಿ ಕ್ರಮವನ್ನನುಸರಿಸಬೇಕು; ಮನ ಬಂದಂತಿರಬಾರದು. ಹಸಿದಲ್ಲದೆ ಉಣಬಾರದು, ಮಿತಿಮೀರಿ ತಿನ್ನ ಕೂಡದು; ಹಾಗೆ ಮಾಡಿದರೆ ಅಜೀರ್ಣವಾಗಿ ಇತರ ರೋಗಗಳು ಹುಟ್ಟುವುವು. ಮುಖ್ಯವಾಗಿ ಆರೋಗ್ಯಶಾಸ್ತಾನುಸಾರದಿಂದ ನಡೆವುದನ್ನು ಅಭ್ಯಾಸಮಾಡಿದರೆ ಎಲ್ಲರಿಗೂ ಆರೋಗ್ಯ ಭಾಗ್ಯವು ಸಿದ್ಧಿಸುವುದರಲ್ಲಿ ಸಂಶಯವಿಲ್ಲ. 55. ಸ್ಥಿರ ಪ್ರಯತ್ನ. ಯಾವ ಕೆಲಸವನ್ನಾದರೂ ಬಿಡದೆ ಮಾಡಿದರೆ ಆ ಕಾರ್ಯವು ಸಿದ್ದಿ. ಸುವುದು, ಉದ್ಯೋಗಿನಂಪುರುಷಸಿಂಹಮುಪೈ ತಿಲಕ್ಷ್ಮಿ 8 ಎಂಬಭರ್ತೃಹ ರಿಯ ವಾಕ್ಯಕ್ಕೂ ಇದೇ ತಾತ್ಸರ್ಯವು. ಇದೇ ತಾತ್ಪರ್ಯದ ವಚನಗಳು ಎಲ್ಲಾ ದೇಶಗಳ ಗ್ರಂಥಗಳಲ್ಲಿಯೂ ಉಂಟು. ಎಂತಹ ಕಠಿನವಾದ ಕೆಲಸವೇ ಆಗಲಿ, ಅದನ್ನು ಸಾಧಿಸಬೇಕೆಂಬ ಕುತೂಹಲವುಳ್ಳವರು ತಾಳ್ಮೆಯಿಂದ ಮನಸ್ಸರ್ಯದಿಂದಲೂ ತಪ್ಪದೆ ಅದನ್ನು ಮಾಡಬೇಕು. « ಸ್ಥಿರಪ್ರಯತ್ನ ಮಾಡಿದರೂ ಕೆಲವೆಡೆ ಕಾರ ಸಿದ್ಧಿಯಾಗುವುದಿಲ್ಲವಲ್ಲ, ಎಂದು ಕೆಲವರು ಹೇಳಬಹುದು. ಪ್ರಯತ್ನ ಕೈ ತಕ್ಕ ಫಲಪ್ರಾಪ್ತಿಯಾಗದಿರುವ ಕೆಲವು ಸಂದರ್ಭಗಳೂ ಉಂಟು. ಅಂತಹ ಸಂದರ್ಭಗಳಲ್ಲಿ ಕೆಲಸಮಾಡು ವವರ ಸ್ವಭಾವದ ಕೊರತೆಗಳೇ ಕಾರಣ, ತಕ್ಕ ಪ್ರಯತ್ನ ವನ್ನು ಸ್ಥಿರವಾಗಿ ಮಾಡಿದರೂ ಸರಿಯಾದ ರೀತಿಯಲ್ಲಿ ಮಾಡದಿರಬಹುದು, ಮಾಡಿದ ಸನಾ ಹ ಸಾಲದೆಹೋಗಬಹುದು, ಅಥವಾ ವಿವೇಕಲೋಪದಿಂದ ಕೆಲಸ ಕೆಡುವುದುಂಟು. ವರ್ಷಾಂತರ ಪ್ರಯತ್ನದಿಂದ ಕೈಗೂಡಬಹುದಾದ ಕೆಲಸವನ್ನು ಮಾಡತೊಡಗಿ, ಒಂದೆರಡು ವರ್ಷಗಳು ಶ್ರಮಪಟ್ಟು ಸಿದ್ದಿ ಸಲಿಲ್ಲವಲ್ಲ ಎನ್ನುವುದು ಸರಿಯೆ?ಇದಲ್ಲದೆ ಮನುಷ್ಯರೆಲ್ಲರಿಗೂ ಒಂದೇ ಸಮವಾದ ಸಾಮರ್ಥ್ಯ