ಪುಟ:ಪ್ರಬಂಧಮಂಜರಿ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ಪ್ರಬಂಧಮಂಜರಿ-ಎರಡನೆಯ ಭಾಗ. ಪೂರ್ವಕಾಲದಲ್ಲಿ ನಮ್ಮ ದೇಶದಲ್ಲಿ ಕಾಗದವೂ ಅಚ್ಚು ಹಾಕುವುದೂ ಇರಲಿಲ್ಲ. ಆಗ ನಮ್ಮವರು “ಮಹಾಭಾರತ' ಮೊದಲಾದ ದೊಡ್ಡ ದೊಡ್ಡ ಗ್ರಂಥಗಳು ನ್ನೆಲ್ಲ ವರ್ಷಾಂತರಗಳ ವರೆಗೆ ಓಲೆಗರಿಗಳ ಮೇಲೆ ಕಬ್ಬಿಣದ ಸಲಾಕಿಗಳಿಂದ ಬರೆಯುತ್ತಿದ್ದರು. ನಮ್ಮ ಪ್ರಾಚೀನರು ಹೀಗೆ ಸ್ಥಿರಪ್ರಯತ್ನದಿಂದ ಶ್ರಮ. ಪಟ್ಟು ಇಂತಹ ಗ್ರಂಥಗಳನ್ನು ಬರೆದಿಡದಿದ್ದರೆ ಇವುಗಳೆಲ್ಲಾ ಹಾಳಾಗಿ ಹೋಗುತ್ತಿದ್ದು ವು. ಈಗ ಆಂಗ್ಲೆಯರು ಎಲ್ಲಾ ವಿಷಯಗಳಲ್ಲಿಯೂ ಪ್ರಮುಖರಾಗಿರುವುದೂ ಅವರ ಅದ್ಭುತವಾದ ಸ್ಥಿರಪ್ರಯತ್ನದಿಂದಲೇ ಅಲ್ಲವೆ? ತಿರ ಸ್ವಂತುಗಳಲ್ಲಿಯೂ ಸ್ಥಿರಪ್ರಯತ್ನದಿಂದ ಕಾರ್ಯಸಿದ್ಧಿಯಾಗುತ್ತಿರುವುದು ಎಲ್ಲರಿಗೂ ತಿಳಿದಿರಬಹುದು. ಇದಕ್ಕೆ ಜೇನುಹುಳುಗಳೇ ದೃಷ್ಟಾಂತವು. ಇವು ಬಲುಚಿಕ್ಕ ಪ್ರಾಣಿಗಳಾದರೂ ಒಂದೊಂದುಸಲ ಒಂದೊಂದು ಹೂವಿಗೆಹೋಗಿ ಮಕರಂದವನ್ನು ತಂದು ಕೂಡಹಾಕಿ ಕೊನೆಗೆ ಎಷ್ಟು ದೊಡ್ಡ ಗೂಡನ್ನು ಕಟ್ಟುತ್ತವೆ! ಹೀಗೆ ಯಾವ ಕೆಲಸವನ್ನಾದರೂ ಬಿಡದೆ ತಾಳ್ಮೆಯಿಂದ ಮಾಡಿದರೆ, ಕೊನೆಗೆ ಅದು ಕೈಗೂಡುವುದೇ ಸಿದ್ದವು. 56. ಸ್ವಾಭಿಮಾನ, “ಸಾಭಿಮಾನ' ಅಥವಾ ಅಹಂಕಾರ ಎಂದರೆ ಯಾವವಿಷಯದಲ್ಲಿ. ಯೇ ಆಗಲಿನನ್ನ ಸಮಾನರು ಯಾರೂ ಇಲ್ಲ:ನಾನುಬಹಳದೊಡ್ಡವನು” ಎಂದು ತಿಳಿದುಕೊಳ್ಳುವುದು. ಪ್ರಪಂಚದಲ್ಲಿ ಈ ದುರಭಿಪ್ರಾಯದಿಂದ ಬಾಧಿಸಲ್ಪಡುವವರನೇಕರುಂಟು, ಇಂಥವರಿಗೆ ತಮ್ಮ ಯೋಗ್ಯತೆಯಿಷ್ಟೆಂದು ತಿಳಿಯದಿದ್ದ. ರೂ, ಇವರ ಸುತ್ತಮುತ್ತಲೂ ಇರುವವರಿಗೆ ಇವರಯೋಗ್ಯತೆಯಿಷ್ಟೆಂಬುದು ಅಲ್ಪ ಕಾಲದಲ್ಲಿಯೇ ಚೆನ್ನಾಗಿ ತಿಳಿಯಬರುತ್ತದೆ. ಸ್ವಾಭಿಮಾನಿಗಳುಸಮಯ ಬಂದಾಗಲೆಲ್ಲಾ ತಮ್ಮ ಯೋಗ್ಯತೆಯನ್ನು ಕುರಿತು ಬಡಾಯಿ ಕೊಚ್ಚಿ ಕೊಂಡು ಇತರರ ತಪ್ಪುಗಳನ್ನು ಪರಿಹಾಸಮಾಡುವರು;ಹೆರರು ಏನಾದರೂ ಬದಲು - ಹೇಳಿದರೆ ಅದನ್ನು ಧಿಕ್ಕರಿಸುವರು. ಇವರಿಗೆ ಆತ್ಮ ಸ್ತುತಿಯಿಂದಲೇ ತೃಪ್ತಿ. ಆತ್ಮ ಸ್ತುತಿಯನ್ನು ಪ್ರತಿಸಂದರ್ಭದಲ್ಲಿಯೂ ಮಾಡಿಕೊಳ್ಳದಿದ್ದರೆ ಅವರಿಗೆ ಮನಸ್ಸು ನಿಲ್ಲುವುದಿಲ್ಲ. ಆತ್ಮ ಸ್ತುತಿಯನ್ನು ಕೇಳಿದವರು ಏನೆಂದುಕೊಂಡಾರು ಎಂಬ ಭೀತಿಯೇ ಇವರಿಗಿಲ್ಲ. ಇವರ ಯೋಗ್ಯತೆಯನ್ನು ತಿಳಿದವರು ತಡೆಯಲಾರದೆ ಜುಗುಪ್ಪೆಪಟ್ಟು ಇವರಿಗೆ ವಿರುದ್ಧ ವಾದ ಒಂದು ಮಾತಾಡಿ