ಪುಟ:ಪ್ರಬಂಧಮಂಜರಿ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧LL ಪ್ರಬಂಧಮಂಜರಿ-ಎರಡನೆಯ ಭಾಗ ಗಳೊಂದೂ ಆಗ ಕಾಣಬರುವುದಿಲ್ಲ.ಜೂಜಾಡುವುದು, ಹೊಗೆಬತ್ತಿ ಸೇದುವುದು, ಮದ್ಯಪಾನ, ನಸ್ಯಹಾಕುವುದು, ಇವು ಮೊದಲಾದುವು ಮೊದಲು ಅಸಹ್ಯವಾಗಿರು ವುವು, ಕೆಟ್ಟ ಜತೆಯಿಂದ ಇವು ಬಳಕೆಯಾದರೆ, ಪ್ರಾಯಶಃ ಅಭಿರುಚಿ ಹುಟ್ಟಿ ಇವುಗಳನ್ನು ಬದುಕಿರುವವರೆಗೂ ಬಿಡಲಾಗುವುದಿಲ್ಲ. ಹೀಗೆಯೇ ಸತ್ಕಾರ್ಯಗಳ ವಿಷಯದಲ್ಲಿ ಪದ್ಧತಿಯಿಂದ ಬಹಳ ಫಲವುಂಟು, ಯಾವುದಾದರೂ ಒಂದು ಶಿಲ್ಪವನ್ನು ಕಲಿವುದರಲ್ಲಿಯೇ ಆಗಲಿ, ಶಾಸ್ತ್ರ ವ್ಯಾಸಂಗದಲ್ಲಿಯೇ ಆಗಲಿ ಮೊದಲು ಕೆಲವು ಕಾಲ ತೊಂದರೆಯೂ ಜು ಗುಪ್ಪೆ. ಯೂ ಆಗಬಹುದು, ಆಗ ಮನಸ್ಸನ್ನು ನಿಗ್ರಹಿಸಿಕೊಂಡು, ಹಿಡಿದ ಕೆಲಸ ವನ್ನು ಬಿಡದೆ ಮುಂದುವರಿದರೆ, ವ್ಯಾಸಂಗದಲ್ಲಿ ಆಸಕ್ತಿಯೂ ಸಂತೋಷವೂ ಹುಟ್ಟಿ ಪಾಂಡಿತ್ಯವುಂಟಾಗುವುದು ಮೊದಲು ಕಷ್ಟ ಪಟ್ಟು ಸಾಧಿಸಬೇಕಾದ ಗಿದ್ದುದು ಕೊನೆಗೆ ಅಭ್ಯಾಸದಿಂದ ಮನಸ್ಸಿಗೆ ಆಟವಾಗಿ ಪರಿಣಮಿಸುವುದು, ಸಕಲ ಕೃತ್ಯಗಳೂ ಪದ್ಧತಿಯಿಂದ ರಮ್ಯವಾಗುವಕಾರಣ, ಎಲ್ಲರೂ ಕೆಟ್ಟುದನ್ನು ಬಿಟ್ಟು ಅತ್ಯುತ್ತಮವಾದುದನ್ನೇ ಅವಲಂಬಿಸಬೇಕು, ನಾಲ್ಕು ಜನರು ಒಪ್ಪತಕ್ಕುದಲ್ಲವೆಂದು ತೋರಿದ ಕೆಲಸವನ್ನು ಒಡನೆಯೇ ತ್ಯಜಿಸಿ ಶ್ಲಾನ್ಯವಾದುದನ್ನೇ ಮಾಡಹತ್ತಬೇಕು. ಮಾಡಬಾರದುದನ್ನು ಆರಂಬಿಸಿ ಸ್ವಲ್ಪ ಕಾಲದಲ್ಲಿಯೇ ಬಿಟ್ಟು ಬಿಡುವುದು ಸಾಧ್ಯವು, ಅಭ್ಯಾಸವಾದ ಮೇಲೆ ಅದನ್ನು ಯಾರಿಂದಲೂ ಬಿಡಲಾಗುವುದಿಲ್ಲ. ಅದರಿಂದ ಆಗಬಾರದುದು ಆಗಿಯೇ ಆಗುವುದು. ಸತ್ಕಾರ್ಯವನ್ನು ಮಾಡುವುದಕ್ಕೆ ದಾರಿಯು ಪ್ರಾರಂಭದಲ್ಲಿ ಕಲ್ಲುಮುಳ್ಳುಗಳಿಂದ ತುಂಬಿ ಬಲು ತೊಂದರೆ ಕೊಡಬಹುದು; ಮುಂದೆಮುಂದೆ ಹೋಗುತ್ತಾ ನಯವೂ ಸುಗಮವೂ ಆಗುವುದು, ಸ್ಥಿರ ಬುದ್ದಿ ಯಿಂದ ಕಷ್ಟಕ್ಕಂಜದೆ ಮುಂದುವರಿದು ನುಗ್ಗು ವವನಿಗೆ ಈ ಸಂಗತಿ ತಿಳಿಯಬರುವುದಲ್ಲದೆ ಕೆಲಸವೂ ಕೈಗೂಡುವುದು. ಪರಲೋಕದಲ್ಲಿ ಸದ್ಯ ತಿಯಾಗಬೇಕಾದರೆ, ಸದ್ಗುಣಗಳಿಂದೊಡಗೂಡಿದ ವಾಡಿಕೆಗಳನ್ನೆ ಎಲ್ಲರೂ ಅನುಸರಿಸಬೇಕು. ಪಾಪಕೃತ್ಯಗಳ ವಾಡಿಕೆಗೆಬಿದ್ದ. ವರು ಸ್ವರ್ಗವನ್ನೆ೦ದಿಗೂ ಪಡೆಯಲಾರರೆಂಬುದು ಎಲ್ಲರಮತವೂ ಆಗಿದೆ.ಸ್ವ. ರ್ಗಸುಖಪ್ರಾಪ್ತಿಗೆ ತಕ್ಕ ಜ್ಞಾನವೂ ಯೋಗ್ಯತೆಯೂ ಉಂಟಾಗುವಂತೆ ಸತ್ಯದಲ್ಲಿಯೂ ಧರ್ಮದಲ್ಲಿಯೂ ಎಲ್ಲರೂ ದೃಷ್ಟಿ ಯಿಟ್ಟು ನಡೆದುಕೊಳ್ಳಬೇಕು. ಕಾಮ, ಕ್ರೋಧ, ಮೋಹ ಮೊದಲಾದ ಶತ್ರುಗಳ ಪಾಶಕ್ಕೆ