ಪುಟ:ಪ್ರಬಂಧಮಂಜರಿ.djvu/೧೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೭೬ ಪ್ರಬಂಧಮಂಜರಿ-ಎರಡನೆಯ ಭಾಗ (8) ಕಿತ್ತಳಮರ ಸೇಬಿನ ಮರದಷ್ಟಿದೆ ಹೂಗಳು ಚಿಕ್ಕವು, ಬಿಳುಪು, ಸುವಾಸನೆ; ಮರದ ಮೇಲೆ ಹೂವು, ಹೀಚು, ಹಣ್ಣು ಮೊದಲಾದುವನ್ನು ಏಕದಾ ನೋಡಬಹುದು ಮರದ ಬೆಳೆ ದೇಶಭೇದದಿಂದ ಬದಲಾಯಿಸುತ್ತದೆ. ಹಣ್ಣು ಹಸುರಾಗಿರುವಾಗಲೇ ಕೊಯ್ದು ಬುಟ್ಟಿಗಳಿಗೆ ತುಂಬಿ ರಫ್ತು ಮಾಡುವರು, (4) ಇಂಡಿಯಾದಲ್ಲಿ ಸಾತಘಡ ಮತ್ತು ಕೊಡಗು ಕಿತ್ತಳೆ, ಇವುಗಳಿಗೆ ಭೇದ ಇಂಗ್ಲೆಂಡಿನಲ್ಲಿ ವೆಸ್ಟಿಂಡಿಯಾ, ದ್ವೀಪಗಳ ಹಣ್ಣು ವಿಶೇಷ (6) ತಿನ್ನುವುದಕ್ಕೆ ಹಣ್ಣು ಹೇರಳವಾಗಿ ಉಪಯೋಗ ಗೊಜ್ಜು ಮಾಡಬಹುದು. ಬಿಸಿಲುಕಾಲದಲ್ಲಿ ಬಹಳ ತಂಪಾದ ತಿಂಡಿ ನಮ್ಮ ದೇಶದಲ್ಲಿ ಕಿತ್ತಳೆಹಣ್ಣಿನ ವ್ಯಾಪಾರದಿಂದ ಬೇಸಗೆಯಲ್ಲಿ ಕೆಲವು ವರ್ತಕರು ರೂಪಾಯಿ ಲಾಭ ಸಂಪಾದಿಸುವರು, ಕೆಲವು ಕಡೆ ಕಿತ್ತಳೆ, ಮರದ ಹೂವನ್ನು ಮದವಣಿಗಿತ್ತಿಗಳು ಮುಡಿಯುವರು. 8. ಗಡಿಯಾರ. (1) ಚರಿತ್ರೆ:- ಮೊಟ್ಟಮೊದಲು ನೀಟಾದ ವಸ್ತುಗಳ ನೆರಳಿನಿಂದ ಕಾಲವನ್ನು ಅಳೆಯುತಿದ್ದರು. ಇದರಿಂದ ಛಾಯಾಯಂತ್ರ ಕಂಡುಹಿಡಿಯಲ್ಪಟ್ಟಿತು. ಆಮೇಲೆ ಶಲಯಂತ್ರ. ನೀರಿಗೆ ಬದಲು ಸಣ್ಣ ಮರಳನ್ನು ಪ್ರಯೋಗಿಸಿ ಉಸುಬಿನ ಗಡಿಯಾರ ಬಂದಿತು. ಇಂಗ್ಲೆಂಡಿನಲ್ಲಿ ಆಿಡ್ ಎಂಬ ದೊರೆ ಮೋಂಬತ್ತಿಯಿಂದ ಕಾಲವನ್ನು ಅಳೆದನು, ಕ್ರಿ. ಶ. 13 ನೆಯ ಶತಮಾನದಲ್ಲಿ ದೊಡ್ಡ ಗಡಿಯಾರಗಳು ಚರ್ಚುಗಳಲ್ಲಿ ಪ್ರಚಾರಕ್ಕೆ ಬಂದುವು. ಇವು ಬಹಳ ಭಾರ, ಕೊನೆಗೆ ಹಲವು ಬದಲಾವಣೆಗಾಗಿ ಈಗಿನಂತ ಸ್ಥಳದಿಂದ ಸ್ಥಳಕ್ಕೆ ಒಯ್ಯಬಹುದಾದ ಗಡಿಯಾರ ಉಂಟಾಯಿತು. (2) ವರ್ಣನೆ-ಹೊರಗೆ-ಮುಖ, ಅದರಲ್ಲಿ ಸಂಖ್ಯೆಗಳು ಏಕೆ? ಎರಡು ಮುಳ್ಳು, ಇದರ ಕೆಲಸ ಮುಖದ ಕೆಳಭಾಗದಲ್ಲಿ ಎರಡು ರಂಧ್ರಗಳು ಏತಕ್ಕೆ? ನಿಲ್ಲದೆ ನಡೆಯುತ್ತಿರಲು ಗಡಿಯಾರವನ್ನು ಎಷ್ಟು ಸಾರಿ ನೋಡಿಕೊಳ್ಳಬೇಕು? ಒಳಗೆ ಮುಳ್ಳುಗಳನ್ನು ನಡೆಸುವ ಚಕ್ರಗಳು, ಗಡಿಯಾರ ಹೇಗೆ ಗಂಟೆಯನ್ನು ಹೊಡೆಯುವುದು? ಪ್ರಕಾಲಗಳಲ್ಲಿಯೇ ಅದು ಏಕ ಹೊಡೆಯುತ್ತದೆ? ಕೆಲವು ಗೋಪುರಗಳ ಮೇಲಿರುವ ಗಡಿಯಾರಗಳ ಸದ್ದು 20 ಮೈಲಿ ದೂರಕ್ಕೆ ಕೇಳಿಸುವುದು, (3) ನಿರ್ಮಾಣಸ್ಥಳ:- ಈಗಿನ ನಾಗರಿಕ ದೇಶಗಳಲ್ಲೆಲ್ಲಾ, ಯಾವ ದೇಶಗಳಲ್ಲಿ ವಿಶೇಷ? ಇಂಗ್ಲೆಂಡಿನಲ್ಲಿ ಯಾವ ಪಟ್ಟಣಗಳಲ್ಲಿ ? (4) ಉಪಯೋಗ-ಪೂರ್ವದ ಛಾಯಾಯಂತ್ರ, ಉಸುಬಿನ ಯಂತ್ರ, ಮೊಂಬತ್ತಿ ಇವುಗಳಿಗಿಂತ ಈಗಿನ ಗಡಿಯಾರ ಹೇಗೆ ಹೆಚ್ಚು ಉಪಯುಕ್ತ? ಜೇಬಿನಲ್ಲಿಟ್ಟುಕೊಳ್ಳುವಷ್ಟು ಸಣ್ಣ ಗಡಿಯಾರಗಳಿಂದ ಮತ್ತಷ್ಟು ಪ್ರಯೋಜನ ಗಡಿಯಾರ ಎದುರಿಗಿದ್ದರೆ ವೃಥಾ ಕಾಲಹರಣ ಮಾಡಲು ಮನಸ್ಸು ಬಾರದೆ ಕೆಲಸದಲ್ಲಿ ಆಸಕ್ತಿ ಹುಟ್ಟುವುದು, ಸಕಾಲದಲ್ಲಿ ಕೆಲಸಮಾಡುವ ಗುಣವೂ ಬರುವುದು.