ಪುಟ:ಪ್ರಬಂಧಮಂಜರಿ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಹಳ ದಿನಕ್ಕೆ ತೀರ್ವ ನಿನ್ನನ್ನು ನಾನು ಬಿಟ್ಟು ಬಂತಾಗಿ ನಡೆದುಕೊಳ್ಳುವುದ ತಮ್ಮನಿಗೆ ಅಣ್ಣನ ಬುದ್ಧಿವಾದ ೧೮೬ 9, ಕಾಗದಗಳನ್ನು ಬರೆಯಲು ಕೆಟ್ಟ ಕಾಗದ, ಕೆಟ್ಟ ಮಸಿಗಳನ್ನು ಉಪಯೋಗಿಸಬಾರದು; ಅವುಗಳನ್ನು ಹೊಟ್ಟೆ ಸೊಟ್ಟಾಗಿ ಮಡಿಸಲೂ ಕೂಡದು. ಹೀಗೆ ಮಾಡುವುದು ಕಾಗದವನ್ನು ಓದಿಕೊಳ್ಳುವವರಿಗೆ ಬಹಳ ಅವಮಾನಕರ, ಕಾಗದಗಳನ್ನು ನೋಡಿ ಅಕ್ಷರಗಳಲ್ಲಿ ಬರೆಯಲಾಗದು; ಎಷ್ಟು ಸ್ಪುಟವಾಗಿ ಬರೆದರೆ ಅಷ್ಟು ಒಳ್ಳೆಯದು. ಲಲಿತವಾದ ಶೈಲಿಯಲ್ಲಿ ಸುಲಭವಾಗಿ ಅರ್ಥವಾಗುವಂತೆ ಮಾತನಾಡುವ ರೀತಿಯಲ್ಲಿ ಬರೆಯತಕ್ಕದ್ದು. 10, ಕಾಗದಗಳ ಕೆಲವು ಮಾದರಿಗಳನ್ನು ಬಾಲಕರ ತಿಳಿವಳಿಕೆಯ ಬಗ್ಗೆ ಈ ಕೆಳಗೆ ಕೊಟ್ಟಿದೆ. 1: ತಮ್ಮನಿಗೆ ಅಣ್ಣನ ಬುದ್ದಿ ವಾದ. ಚಿ| ರಾಮಕೃಷ್ಣನಿಗೆ ಶಾಮಣ್ಣನು ಮಾಡುವ ಆಶೀರ್ವಾದ, ಈ ವರೆಗೆ ಉಭಯ ಕುಶಲೋಪರಿ ಸಾಂಪ್ರತ. ಬಹಳ ದಿನಕ್ಕೆ ೨|ರವರಿಂದ ನಿನ್ನೆ ಒಂದು ಕಾಗದ ಬಂದಿತು, ಅದನ್ನು ಓದಿಕೂಂಡಾಗಿನಿಂದ ನನಗೆ ಬಲು ವ್ಯಸನವಾಗಿದೆ. ನಿನ್ನನ್ನು ನಾನು ಬಿಟ್ಟು ಬಂದು ಆರು ತಿಂಗಳು ತೀರ ಆಗಲಿಲ್ಲ: ಅಷ್ಟರಲ್ಲಿಯೇ ನೀನು ತಂದೆತಾಯಿಗಳಿಗೆ ಬಹಳ ಅವಿಧೇಯನಾಗಿ ನಡೆದುಕೊಳ್ಳುವುದಲ್ಲದೆ ಓದುವುದರಲ್ಲಿ ಆಸಕ್ತಿ ತಪ್ಪಿ ಪಾಠಶಾಲೆಗೆ ಹೋಗದೆ ಅಲೆದಾಡುತ್ತಿರುವಷ್ಟು ಬದಲಾಯಿಸಿದ್ದಿ ಯಂತ, ನಿನ್ನ ಚಾಳಿ ಹೀಗೆ ಕಡುವುದೆಂದು ನಾನು ಎಂದಿಗೂ ಎಣಿಸಿರಲಿಲ್ಲ, ನೀನು ಇಷ್ಟು ಕೆಟ್ಟು ಹೋಗಲು ಪ್ರಾಯಶಃ ಸಹವಾಸದೋಷವೇ ಕಾರಣವೆಂದು ತೋರುತ್ತದೆ. ಸಕ್ಕರೆಯು ಸ್ವಭಾವದಿಂದ ಸವಿಯಾಗಿದ್ದರೂ ಬೇವಿನ ಕಾಯೊಡನೆ ಬೆರೆತರೆ, ಅದರಂತ ಕಹಿಯಾಗುವುದಷ್ಯ, ಆದುದರಿಂದ ನಿನ್ನ ಶ್ರೇಯಸ್ಸಿಗೇ ಕುಂದನ್ನು ತರುವ ದುಷ್ಟ ಸಹವಾಸವನ್ನು ಕೂಡಲೆ ಬಿಡಬೇಕು. ಆ ಸಹವಾಸದಿಂದ ನಿನ್ನನ್ನು ಬಿಡುಗಡೆ ಮಾಡುವ ಬಗ್ಗೆ, ೨] ರವರಿಗೂ ನಿನ್ನ ಉಪಾಧ್ಯಾಯರಿಗೂ ಅಂಕೆಮಾಡಿಕೊಂಡಿದ್ದೇನೆ ತಾಯ್ತಂದೆಗಳು ನಮ್ಮ ಭಾಗಕ್ಕ ದೇವರು, ಅವರನ್ನು ಧಿಕ್ಕರಿಸಿದರೆ ಪಾಪಮಾಡಿದಂತಾಗುವುದು, ಅವರು ನಮ್ಮನ್ನು ಹೆತ್ತು ಚಿಕ್ಕವರನ್ನು ದೊಡ್ಡವರನ್ನು ಮಾಡಿ, ನಮ್ಮ ಏಳಿಗೆಗಾಗಿ ಪಡುವ ಕಷ್ಟವನ್ನು ಸ್ಮರಿಸಿಕೊಂಡರೆ, ನಾವು ಅವರಿಗೆ ಎಮ್ಮ ಕೃತಜ್ಞರಾಗಿದ್ದರೂ ತೀರದು, ಇಂಥವರ ಮಾತನ್ನು ನೀನು ಮಾರಿ ನಡೆವುದು ನಿನಗೆ ಧರ್ಮವೇನಿನ್ನನ್ನು ಮುಂದಕ್ಕೆ ತರಬೇಕೆಂಬ ಉದ್ದೇಶದಿಂದಲೇ ಅಲ್ಲವೆ ಅವರು ನಿನಗೆ ಚಿಕ್ಕಂದಿನಲ್ಲಿ ಓದುವಂತೆ ಹೇಳುತ್ತಾರೆ. ನೀನು ಪಾಠಶಾಲೆಗೆ ಹೋಗದೆ ಪೋಲಿಯಾಗಿ ಅಲೆದುಕೊಂಡಿದ್ದರೆ, ಬಾಲ್ಯವು ವ್ಯರ್ಥವಾಗಿ ಕಳೆದುಹೋಗುವುದು ದೊಡ್ಡವನಾದ ಮೇಲೆ ವಿದ್ಯೆ ಹತ್ತುವುದಿಲ್ಲ. ಗಿಡವಾಗಿ ಬಗ್ಗದಿರುವುದು ಮರವ ಬ್ಯಾಕೆ?”