ಪುಟ:ಪ್ರಬಂಧಮಂಜರಿ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಬಂಧ, ೨೫ ಗುವುವು-ಕಾಯಿಗಳು ಸ್ವಲ್ಪ ತ್ರಿಕೋಣಾಕಾರ ; ಕಾಯಿಯಲ್ಲಿ ಮೂರರಿಂದ ಐದು ತೂಳೆ, ಮರುಭಾಗಗಳಾಗಿದೆ ; ಪ್ರತಿ ಭಾಗದಲ್ಲಿ ಯ ಹತ್ತಿ ಮುಚ್ಚಿಕೊಂಡಿರುವ ಬೀಜ ; ಕಾಯಿ ಬಲಿಯುತ್ತ ಹತ್ತಿ ಅರಳಿಕೊಂಡು ಕಾಯಿಯ ಮುಸುಕನ್ನು ಸೀಳುವುದು; ಹತ್ತಿ ಸಾಧಾರಣವಾಗಿ ಬಿಳುಪು, ಕಲವು ಜಾತಿ ಹಳದಿ-ಜಾರ್ಜಿಯ ಬೊರ್ಬನ್, ಸೀ ಐಲೆಂಡುಗಳಲ್ಲಿ ಬೆಳೆದ ಹತ್ತಿ ಬಹಳ ಪ್ರಸಿದ್ದ ಮೈಸೂರು ಸಂಸ್ಥಾನದಲ್ಲಿ ಕರೀಹ, ಬೀಜದಹತ್ತಿ, ಜಡೆಹತ್ತಿ ಎಂದು ಮರುಭೇದ ; ಇವುಗಳ ಸ್ವರೂಪ-ಸುಗ್ಗಿಯ ಕಾಲದಲ್ಲಿ ಹತ್ತಿಯ ಹೊಲ ಹೇಗೆ ಕಾಣ:ವುದು? (3) ಮಳೆಗಾಲದ ಆದಿಯಲ್ಲಿ ನೆಲವನ್ನು ಉತ್ತು ಗೊಬ್ಬರ ಹಾಕಿ ಗುಂಟೆ ಹೊಡೆದು ಕಳೆ ಕೀಳುತ್ತಿದ್ದು ನಾಲ್ಕು ನಾಲ್ಕಡಿ ದೂರದಲ್ಲಿ ದಿಬ್ಬಗಳನ್ನು ಕಟ್ಟಬೇಕು. ಮೂರುತಿಂಗಳಾಚೆಗೆ ದಿಬ್ಬಗಳ ಮೇಲೆ ಹತ್ತಿಯನ್ನೂ, ಹತ್ತಿಯ ಸಾಲುಗಳ ನಡುವೆ ನವಣೆ ಜೋಳ ಇಂಥ ಯಾವುದಾದರೂ ಒಂದು ಧಾನ್ಯವನ್ನೂ ಬಿತ್ತುವುದು ವಾಡಿಕೆ. ಇದರಿಂದ ಹತ್ತಿಗೆ ಹಾನಿಯಿಲ್ಲ, ನಮಗೆ ಆದಾಯ-ಬಿತ್ತಿದ ಒಂದು ತಿಂಗಳಿಗೆ ಗುಂಟೆ ಹೊದೆವುದು-ನಾಲೈ ದು ತಿಂಗಇಲ್ಲಿ ಹತ್ತಿಯ ಮಧ್ಯದ ಧಾನ್ಯವನ್ನು ಕೊಯ್ಯಬಹುದು-ಹತ್ತಿಯಗಿಡ ಆರನೆಯ ತಿಂಗಳಲ್ಲಿ ಹೂಬಿಡಲಾರಂಭಿಸಿ ಒಂದು ವರ್ಷದವರೆಗೆ ಕಾಯಿ ಕೊಡುತ್ತಿರುವುದು (4) ಹತ್ತಿಯಿಂದ ದಾರ, ಹಗ್ಗ, ಬಟ್ಟೆ ಅಗುವುವು, ಬೀಜವು ದನಗಳಿಗೆ ಒಳ್ಳೆಯ ತಿಂಡಿ; ಇದರ ಎಣ್ಣೆಯಿಂದ ಸಾಬನುಮಾಡುವರು; ಎಣ್ಣೆಯನ್ನು ಅಡಿಗೆಗೂ ಉತ್ತರ ಹಿಂದೂದೇಶದಲ್ಲಿ ದೀಪವನ್ನು ಉರಿಸುವುದಕ್ಕೂ ಬಳಸುವರು-ಹತ್ತಿಯ ಹಿಂಡಿ ದನಗಳಿಗೆ ಆಹಾರ,ನೆಲಕ್ಕೆ ಗೊಬ್ಬರ, ಚಳಿ ಜ್ವರಕ್ಕೆ ಹತ್ತಿ ಬೀಜದ ಕಷಾಯ ಔಷಧ-ಸುಟ್ಟ ಗಾಯಕ್ಕೆ ಹತ್ತಿಯ ಪೋಲೀಸು ಕಟ್ಟುವರು-ಎಲೆಯ ರಸವು ಆಮಶಂಕೆಯನ್ನು ನಿಲ್ಲಿಸುವುದು-ಕರೀ ಹತ್ತಿಯಿಂದ ಬ್ರಾಹ್ಮಣರು ಯ. ಜ್ಯೋಪವೀತಗಳನ್ನೂ ದೇವರ ದೀಪಕ್ಕೆ ಬತ್ತಿಗಳನ್ನೂ ಮಾಡುವರು. ೩, ಖನಿಜ, 1. ದೊರೆವ ರೂಪಗಳು; 2. ದೊರೆವ ಸ್ಥಳ; 3. ಪಡೆವ ಕ್ರಮ; 4. ಗುಣ: 5 ಉಪಯೋಗ. ಉದಾ.ಚಿನ್ನ, (3) ಕಲವು ನದಿಗಳಲ್ಲೂ ನದೀ ಪ್ರವಾಹದಿಂದುಂಟಾದ ಒಂಡು ಭೂಮಿಯಲ್ಲೂ, ಚಿನ್ನದ ದೂಳೂ ಸಣ್ಣ ಸಣ್ಣ ಕಣಗಳೂ ಸ್ವಲ್ಪ ವಾಗಿ ಸಿಕ್ಕುತ್ತವೆ. ಕೆಲವು ಒಂಡು ಭೂಮಿಗಳಲ್ಲಿ ಚಿನ್ನದ ಗಟ್ಟಿ ಗಳೂ ಸಿಕ್ಕುವುದುಂಟು. ಮುಖ್ಯವಾಗಿ ಕೆಲವು ಬೆಣಚುಕಲ್ಲಿನ ಬಂಡೆಗಳಲ್ಲಿ ಚಿನ್ನವು ಪದರ ಪದರವಾಗಿ ದೊರೆಯುತ್ತದೆ. ಭೂಮಿಯಲ್ಲಿ ಸಿಕ್ಕುವ ಚಿನ್ನದೊಡನೆ ಬೆಳ್ಳಿ ತಾಮ್ರಗಳು ಬೆರೆತಿರುವುವು.