ಪುಟ:ಬತ್ತೀಸಪುತ್ತಳಿ ಕಥೆ.djvu/೧೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


$8 ಒ 9 ” ಬತ್ತೀಸಪುತ್ತಳಿ ಕಥೆ, ತಾನು ಸುಖವಾಗಿದ್ದನು-ಎಂದು ಮದನಮೋಹಿನಿಯು ನುಡಿಯಲಾಗಿ; ಭೋಜರಾಜನು ಆಶ್ಚ ರಚಿತನಾಗಿ, ತನ್ನ ಅರಮನೆಯ ಪೊಕ್ಕನು. ಇಂತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತೆಯಲ್ಲಿ - ಮದನಮೋಹಿನಿಯೆಂಬ ಪುತ್ತಳಿ ಪೇಳಿದ ಇಪ್ಪತ್ತೊಂದನೆಯ ಕಥೆ,

      • ೨೨ ನೆಯ ಕಥ.

- ಇಪ್ಪತ್ತೆರಡನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾ ರ್ಚನೆ ಮಾಡಿ ಭೋಜನ ತಾಂಬೂಲವ ತೀರಿಸಿಕೊಂಡು, ನವರತ್ನಾಭರಣ ಲಂಕೃತನಾಗಿ, ಎಂದಿನಂತೆ ಚಿತ್ರಶರ್ಮನ ಕೈಲಾಗಿನಿಂದ ಆ ಸಿಂಹಾಸನದ ಬಳಿಗೆ ಬಂದು, ಬಲಗಾಲ ನೀಡುವ ಸಮಯದಲ್ಲಿ ಇಪ್ಪತ್ತೆರಡನೆಯ ಸೋಪಾನದ ಪದ್ಮನಯನೆಂಬ ಪುತ್ತಳಿಯು-ಹೋಹೋ ! ನಿಲ್ಲು ನಿಲ್ಲು ನನ್ನೊಡೆಯ ವಿಕ್ರಮಾದಿತ್ಯರಾಯನಂತೆ ಸಾಹಸದಾಗ್ಯ ಗುಣಗಳುಳ್ಳ ಈ ನಿಂಹಾಸನವನೇಲು, ಇಲ್ಲವಾದರೆ ಕೆಲಸಾರು ಎಂದು ಧಿಕ್ಕರಿಸಲಾಗಿ; ಭೋಜರಾಜನು ಖಿನ್ನನಾಗಿ ಬೇಯಿಸಿ ಸಿಂಹಾಸನದಲ್ಲಿ ಕುಳಿತು, ಚಿತ್ರಕ ರ್ಮನಿಂದ ಹೇಳಿದ ಕಥೆ :- ಎಲೆ ಪುತಳಿಯೇ ! ಕೇಳು. ಧಾರಾಪುರದಲ್ಲಿ ನಮ್ಮ ರಾಯ ಸುಖ ರಾಜ್ಯವ ಗೆಯ್ಯುವಲ್ಲಿ ಒಂದು ದಿನ ಚತುರಂಗಬಲ ಸಹಿತ ರಾಜಬೀದಿಯಲ್ಲಿ ಸ್ವರಿಯು ಹೊಂಟು ಬರುವಲ್ಲಿ, ಗೊಲ್ಲ ಗೇರಿಯಿಂದ ಗೊಲ್ಲತಿಯರು ಹಾಲು ಮೊಸನ ಹರವಿಗಳ ಹೊತ್ತು ಬರಲಾಗಿ, ಅವರ ಕಂಡು 1ಎಣ್ಣೆಯ ಹರವಿಗಳಂದು 1 ಮೈಗಾವಲ ಜನರು ಅವರ ಬಡಿಯ ಹೋಗಲಾ ಗಿ, ಅವರು ಅಂಜಿಕೊಂಡು ಬೇಗ ಓಡಿಹೋಗುವಾಗ, ಒಬ್ಬೊಬ್ಬರು ತೊ ಡರಿಕೊಂಡು ಹೊತ್ತಿದ್ದ ಹರವಿಗಳ ಎತ್ತಿ ಹಾಕಿ, ಮೊಸಲು ಎಲ್ಲ ಚಲಿ ಹೋದಕಾರಣ ಅವರೆಲ್ಲಾ ದುಃಖಪಡುತ್ತಿರುವಲ್ಲಿ ಅವರಲ್ಲೊಬ್ಬಳು * ನಗುತ್ತಿರುವುದ ಕಂಡು, ಅವಳ ಕರೆಸಿ--ಎಲ್ಲಾ ಸ್ತ್ರೀಯರೂ ರೂದಿಸುವುದೇನು ? ನೀನೊಬ್ಬಳು ನಗುವುದೇನೆಂದು ರಾಯನು ಕೇಳ 0 0

  • mm

M ಬ ಬ ಫಾ-1 ಈ ಯಹರವಿಯ ಕಾಣಬಾರದು, ಅವಶಕುನವೆಂಬ ನೀತಿಯುಂಟಾಗಿ