ಪುಟ:ಬತ್ತೀಸಪುತ್ತಳಿ ಕಥೆ.djvu/೧೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬತ್ತೀಸಪಳಿ ಕಥೆ. ೧೦೫ ೪ಾಗಿ-ಎಲೈ ರಾಯ ! ನಿನ್ನ ಭಕ್ತಿಗೆ ಮೆಚ್ಚೆದೆನು. ನಿನಗೆ ಬೇಕಾದ ವಲ ಗಳ ಕೇಳಿಕೊ, ಕೊಡುವೆನೆನ್ನಲಾಗಿ ; ರಾಯನಿಂತೆಂದನು :-ಎಲ್‌ ತಾಯೇ ! ನಿನ್ನ ಕುತು ಈ ಬ್ರಾಹ್ಮಣಮುನಿ ಬಹುಕಾಲದಿಂದ ತಪಸ್ಸು ಮಾಡಿದ್ದಾನೆ. ಈತನ ಇಷ್ಟಾರ್ಥವ ಸಲಿಸಬೇಕೆಂದು ರಾಯ ಕೇಳಿದ ನಿಮಿತ್ತ ಚತುರ್ವೇದ ಪುರುಷಾರ್ಥವ ಕೊಟ್ಟು, ನೀನಾವಿಪ್ರನಿಗೆ ಕೊಡು ಎಂದು ಹೇಳಿ ದೇವಿ ಮಾಯವಾಗಲು ; ಆಬಳಿಕ ರಾಯನಾಮುನಿಯ ಬಳಿಗೆ ಬಂದು-ದೇವಿ ನಿಮಗಿಷ್ಟಾರ್ಥನ ಪಾಲಿಸಿದ್ದಾಳೆ, ತೆಗೆದುಕೊಳ್ಳಿ ಎಂದು ಕೊಡಲಾಗಿ ; ಆಮುನಿ ತೆಗೆದುಕೊಂಡು ರಾಯನ ಕೊಂಡಾಡಿ ತನ್ನ ಮಡಿ ಚೀಲದಲ್ಲಿದ್ದ ವಿಭೂತಿಯ ರಾಯನಿಗೆ ಕೊಟ್ಟು, ಇದ ಅಂಗಕ್ಕೆ ಲೇಪಿಸಿ ದರೆ ಕಾಯಸಿದ್ಧಿಯಾಗುವುದೆಂದು ಹೇಳಲಾಗಿ ; ರಾಯ ಆವಿಭೂತಿಯ ತೆಗೆ ದುಕೊಂಡು ಅಲ್ಲಿಂದ ಬರುವ ಮಾರ್ಗದಲ್ಲಿ ಒಬ್ಬ ಅರಸು ರಾಜ್ಯ ಹೋಗಿ ಅಹನ್ಯಹನಿ ಮೆಯ್ಕೆಲ್ಲಾ ಕುಷ್ಟವಾಗಿರುವನ ಕಂಡು ಅವನ ವರ್ತಮಾ ನವ ಕೇಳಿ, ಆಗ ಅವನಿಗೆ ಆ ವಿಗ್ರಮುನಿ ಕೊಟ್ಟ ವಿಭೂತಿಯ ಕೊಟ್ಟು, ಅವನ ದೇಹ ಶುದ್ದಿಯಾದ ಬಳಿಕ, ಅವನಿಗೆ ಅರ್ಧರಾಜ್ಯವ ಕೊಟ್ಟು, ಅವನ ಕಳುಹಿಸಿ, ತಾನಿಲ್ಲಿಗೆ ಬಂದು ಸುಖವಾಗಿದ್ದನು-ಎಂದು ರತಿರೂಪಿಣಿ ಹೇಳಲು ; ರಾಯನು ಲಜ್ಜಿತನಾಗಿ ತನ್ನ ಅರಮನೆಗೆ ಪೋದನು. ಇ೦ತು ಕರ್ಣಾಟಕ ಭಾಷಾವಿರಚಿತವಾದ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ರತಿರೂಪಿಣಿಯೆಂಬ ಪುತ್ರಿ ಹೇಳಿದ ಇಪ್ಪತ್ತು ಮೂರನೆಯ ಕಥೆ. , ಇಪ್ಪತ್ತು ನಾಲ್ಕನೆಯ ಕಧೆ. ಇಪ್ಪತ್ತುನಾಲ್ಕನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವ ತಾರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು, ಎಂದಿನಂತೆ ನಿಂಹಾಸ ನದ ಬಳಿಗೆ ಬಂದು, ಬಲಗಾಲ ನೀಡುವ ಸಮಯದಲ್ಲಿ ಆ ಸೋಪಾನದ ಹಂಸಗಮನೆಯೆಂಬ ಪುತ್ತಳಿಯು-ಹೋಹೋ ! ನಿಲ್ಲು ನಿಲ್ಲು. ನನ್ನ ವಿಕ್ರಮಾದಿತ್ಯರಾಯನಂತೆ ಸಾಹಸ ವೀರವಿತರಣಗುಣಗಳುಳ್ಳಡೆ ಈ ನಿಂ ಹಾಸನವೇಜು, ಇಲ್ಲವಾದರೆ ಕೆಲಸಾರು ಎಂದು ಧಿಕ್ಕರಿಸಲಾಗಿ ; ಭೋಜರಾ ده ಸ 14