ಪುಟ:ಬತ್ತೀಸಪುತ್ತಳಿ ಕಥೆ.djvu/೧೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೨ ಕರ್ಣಾಟಕ ಕಾವ್ಯಕಲಾನಿಧಿ. ಕರ್ಣಾಟ ಪಟ್ಟಣಕ್ಕೆ ಬಂದು ಸುಖವಾಗಿ ರಾಜ್ಯಗೆಯ್ಯುತ್ತಿದ್ದನು-ಎಂದು ಇಂದ್ರಜಿತೆ ಯೆಂಬ ಪುತ್ರ ಹೇಳಲು, ರಾಜನು ದುಃಖಿತನಾಗಿ ತನ್ನ ಅರಮನೆಗೆ 'ಪೋದನು. ಇ೦ತು ಕರ್ಣಾಟಕ ಭಾಷಾವಿರಚಿತಮಪ್ಪ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ಇಂದ್ರಜಿತೆಯೆಂಬ ಪುತ್ತಳಿ ಪೇಳಿದ ಇಪ್ಪತ್ತೈದನೆಯ ಕಥೆ , ಕ ೨೬ ನೆಯ ಕಥೆ. (7) G ಇಸ್ಪತ್ರಾ ಆನೆಯ ದಿವಸದಲ್ಲಿ ಭೋಜರಾಯನು ಸ್ನಾನದೇವತಾರ್ಚನೆ ಭೋಜನ ತಾಂಬೂಲವ ತೀರಿಸಿಕೊಂಡು, ಎಂದಿನಂತೆ ನಿಂಹಾಸನದ ಬಳಿಗೆ ಒಂದು ಬಲಗಾಲ ನೀಡುವ ಸಮಯದಲ್ಲಿ, ಆ ಸೋಪಾನದ ತ್ರೈಲೋಕ್ಯ ಮೋಹಿನಿಯೆಂಬ ಪುತ್ತಳಿಯು ಧಿಕ್ಕರಿಸಲಾಗಿ ; ಭೋಜರಾಯನು ಖಿನ್ನ ನಾಗಿ ಬೇಯಿ ನಿಂಹಾಸನದಲ್ಲಿ ಕುಳಿತು ಚಿತ್ರಕರ್ಮನಿಂದ ಹೇಳಿಸಿದ ಕಥೆ ಎಲೆ ಪುತ್ತಳಿಯೇ ! ಕೆಳು. ಧಾರಾಪುರದಲ್ಲಿ ನಮ್ಮ ರಾಯನು ಸುಖ ರಾಜ್ಯವ ಗೆಯ್ಯುವಲ್ಲಿ ಒಂದು ದಿನ ಒಬ್ಬ ಮುದುಕಿ ಬಂದು-ಎಲೈ ರಾ ಯನೇ ! ನನ್ನ ವಿದ್ಯೆಯ ನೋಡಬೇಕು ಎಂದಾಗ ; ರಾಯ-ಅದೆಂಥ ವಿದ್ಯೆ ತೋಜು ? ಎನ್ನಲಾಗಿ ; ಆ ಮಾತಿಗವಳು-ನಾನು ಬೆರಣಿಮಾಡುವ ವಿ ದೈಯ ಬಲ್ಲೆ ಎನ್ನಲಾಗಿ ; ಅವಳ ಮಾತ ಕೇಳಿ, ರಾಯನು ಹುಸಿನಗೆಯ ನಗುತ್ತ-ಎಲಾ ಮುದುಕಿ : ಇದೊಂದು ವಿದ್ಯೆಯೆಂದು ಬಂದು ಏನೆಂತ ಹೇಳಿದೆಯೆಂದು ಹಾಸ್ಯವ ಮಾಡಲಾಗಿ, ಅವಳಿಂತೆಂದಳು:-ನಾನು ನಿನ್ನ ಸಭೆಗೆ ಬಂದು ಹೇಳಿದರೆ ಆ ಕುಶಲವ ನೋಡಬೇಕಲ್ಲದೆ ಪರಿಹಾಸ್ಯವ ಮಾಡು ವರೆ ? ನೀನು ಧರ್ಮಪ್ರಭು-ಎಂದು ನಾನು ಬಂದೆನೆನ್ನಲಾಗಿ ; ಅವಳ ಮಾತ ಕೇಳಿ ರಾಯ ಸೆಗಣಿಯ ತರಿಸಿ ಗುಡ್ಡೆಯ ಹಾಕಿಸಿ ಬೆರಣಿಮಾಡು, ಎನ್ನಲಾಗಿ ; ಆ ಮುದುಕಿ ಆ ಸೆಗಣಿಯೆಲ್ಲವ ಕಲೆಸಿ ಬೆರಣಿಯ ತಟ್ಟಿ ಒಣಗಿಸಿ ರಾಯನ ಸಭೆಗೆ ತಂದು ತಕ್ಕಡಿಯಲ್ಲಿ ತೂಗಲು ಯಾವತ್ತು ಬೆರ ಳೆಯ ಒಂದೇ ತೂಕವಿರಲಾಗಿ ; ರಾಯ ಮೆಚ್ಚಿ ಆ ಮುದುಕಿಗೆ ಸವಾ