ಪುಟ:ಬತ್ತೀಸಪುತ್ತಳಿ ಕಥೆ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ m ) ಬತ್ತೀಸಪ್ಪತ್ತಳಿಕಥೆ . ೧ರ್೨ ಯೆಂಬ ಸೂಳೆ ಅತಿದಪ್ಪವಾದ ಮುತ್ತಿನ ಮಗುತಿಯಿಟ್ಟಿರುವುದ ಒರ್ವ ನೆರೆಜಾಣನು ಕಂಡು-ಇಂಥ ಮುತ್ತು ನಿನಗೆಲ್ಲಿ ಬಂದಿತು ? ಎಂದು ಕೇಳ ಲು ; ಅವಳು-ಖ ದೀವಿಯೆಂಬ ಶೂರನು ಅರಣ್ಯದಲ್ಲಿ ಆನೆಯ ಬೇಟೆ ಮಾಡಿ ಆನೆಯ ಕುಂಭಸ್ಥಳವ ಕಡಿದು ಅದಕಲ್ಲಿದ್ದ ಈ ಮುತ್ತ ಆನೆಯ ಕೊಂಬಿನ ದಂತ ಸಹ ನನಗೆ ತಂದುಕೊಟ್ಟು ನನ್ನಲ್ಲಿ ಕೂಡಿಟ್ಟು ಹೋದನೆಂದ ವಾತ ನೆರೆಜಾಣ ಕೇಳಿ, ಅವನೇ ಶೂರನೆಂದು ತಿಳಿದು ಕರೆಸಿ, ಕರೆದುಕೊ೦ ಡು, ವೀರನ ಹುಡುಕುತ್ತ ಬರಲಾಗಿ-ಒಬ್ಬ ಮನಿಕುಮಾರ ಭಿಕ್ಷಾಟನ ನಿಮಿತ್ತ ಊರೊಳಗೆ ಕೇರಿಕೇರಿಯಲ್ಲಿ ತಿರುಗುತ್ತ ತಿಳಿಯದೆ ಭಿಕ್ಷಕ್ಕೆ ಆ ಸೂಳೆಯ ಬಳಿಗೆ ಹೋಗಲಾಗಿ, ಆಸಳೆ ಅವನ ಕೆಂಡು ಭವಿನಿ ಮೇಲೆ ಬಿದ್ದರೂ ಅವನು ಉಪಾಯದಿಂದ ಅವಳಿಗೆ ಸಿಕ್ಕದೆ ತಪ್ಪಿಸಿಕೊಂಡು ಬಂದುದ ನೆರೆಜಾಣ ಕಂಡು, ಇವರೆ ವೀರನೆಂದು ತಿಳಿದು, ಅವನ ಕಿರೆದುಕೊಂಡು, ಧೀರನ ಹುಡುಕುತ್ತ ಬರುವ ಒಬ್ಬ ಹಿತಕಾಏರ ನಾಯಕನೂ ಮತೊ ಬನೂ ಹೊಡೆದಾಡುತ್ತಿರುವ ಅವನ ಕಡೆ ಓಲೆಕಾಯಿ ಆನಾಯಕನ ಹಿಂ ದಿಕ್ಕಿಕೊಂಡು, ತಾನು ಮುಂದುವರಿದು ಹೊಡೆದಾಡುವನ ನೆರೆಜಾಇ ಕಂಡು, ಇವನೇ ಧಿರನೆಂದು ತಿಳಿದು, ಅವನ ಸಹ ಕರೆದುಕೊಂಡು ಬಂದು ರಾಯನ ಎದುರಾಗಿ ನಿಲ್ಲಿಸಿ, ಕೈಮುಗಿದು, ತನ್ನ ಅಪ್ಪಣೆಮೇರೆಗೆ ಈಮೂವರ ಕರೆತಂದು ಇದ್ದೇನೆ ಎನ್ನಲಾಗಿ ; ರಾಮ-ಇವರ ಗುಣಗಳ ನೀನು ತಿಳಿದ ಬಗೆ ಹೇಗೆ ? ಎಂದು ಕೇಳಲಾಗಿ ; ನೆರೆಜಾಣ ಈ ಮಹಮಂದಿ ಮಾಡಿದ ವಿವರ ಶ್ರುತಪಡಿಸಲಾಗಿ ; ರಾಯನು ಮೆಚ್ಚಿ ಆನೆರೆಜಾಣನಿಗೆ ಸವಾಲಕ್ಷ ದ್ರವ್ಯವ ಕೊಟ್ಟು ಕಳುಹಿಸಿದನು ಎಂದ ನುಡಿಗೆ ಕರ್ಣಾವತಿಯೆಂಬ ಪುತ ನಗುತ್ತ ಹಾಸ್ಯಗೆಯು ಹೇಳಿದ ಉಪಕಥೆ - ಕೇಳ್ಳೆಯ ಚಿತ್ರವರ್ಮನೇ ? ನಮ್ಮ ವಿಕ್ರಮಾದಿತ್ಯರಾಯನು ಸುಖ ರಾಜ್ಯ ಪಾಲಿಸುವ ವೇಳ ದಲ್ಲಿ ಬಂದುದಿನ ಕೊಂಕಣದೇಶದ ಶೂರನೆಂ ಬವನು ತನ್ನ ಪತ್ನಿ ಸಹಿತ ಬಂದು ರಾಯಸಿಗೆ ಕೈಮುಗಿದು-ಎಲೈ ಮಹಾ ರಾಯನೇ ? ನಿನ್ನ ಕೀರ್ತಿಯ ಕೆಳಿ ನಿನ್ನ ಬಳಿಯಲ್ಲಿ ಊಳಿಗವ ಮಾಡಿಕೊಂ ಡು ಇರಬೇಕೆಂದು ಬಂದೆನು ಎನ್ನಲಾಗಿ, ರಾಯ-ನಿನಗೆ ಸಂಬಳವೆ'ನು ಎಂದು ಕೇಳಲಾಗಿ ; ಅವನು ತಿಂಗಳೆಂದಕ್ಕೆ ಸಾವಿರವರಹ ಸಂಬಳ ಕೊಟ್ಟರೆ ಬ ಬ 7