ಪುಟ:ಬತ್ತೀಸಪುತ್ತಳಿ ಕಥೆ.djvu/೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦ ಕರ್ಣಾಟಕ ಕಾವ್ಯಕಲಾನಿಧಿ. ಭರಣ ದುಕಲಂಗಳ ಕೊಟ್ಟು, ಸರ್ವರ ಸಂತೋಷಪಡಿಸಿ, ತಾನು ಶುಚಿರ್ಭೂತನಾಗಿ, ಗಂಧಕುಸುಮ ವಸಾಭರಣ ಭೂಸಿತನಾಗಿ, ತನ್ನ ಪ್ರಧಾನ ಚಿತ್ರಶರ್ಮನ ಕೈವಿಡಿದು ನಾನಾವಾದ್ಯ ಮುಂತಾಗಿ ಓ೦ಗಸಾಲೆಗೆ ಬಂದು, ನವರತ್ನಖಚಿತವಾದ ಮೂವತ್ತೆರಡು ಪುತ್ತಳಿಯುಳ್ಳ ಆ ಸಿಂಹಾಸ ನದ ಬಳಿಯಲ್ಲಿ ನಿಂತು, ಅದನೆ'ಯುವುದಕ್ಕೆ ತನ್ನ ಬಲಗಾಲ ನೀಡುವ ಸಮ ಯದಲ್ಲಿ ಸಕಲ ಜನ ಜಯಜಯ ಎನ್ನಲು ; ಆಗ ಆ ಸಿಂಹಾಸನದ ಮನ ತೆರಡು ಬೊಂಬೆಗಳಿಗೆ ಜೀವವುಂಟಾಗಿ ಅವು ಅತಿ ಅರ್ಭಟಿಸಿ--ಎಲೈ ಭೋಜರಾಯನೆ : ಈ ಸಿಂಹಾಸನ ಹತ್ತಬೇಡ ಹತ್ತಬೇಡ ಎಂದು ಒದ ಹುತ್ತಿರಲಾಗಿ ; ರಾಯನು ವಿಸ್ಮಿತನಾಗಿ ಇಂತೆಂದನು-ಎಲೆ ಪುತ್ತಳಿಗಳ ರಾ ? ನೀವು ಯಾರು ? ಈ ಅಟ್ಟಹಾಸಂಗೆಯ್ಯುವದೇನು ? ಈ ನಿಂಹಾಸನ ವಾರದು ? ನಿನ್ನ ಹೆಸರೇನು? ಎಂದು ಕೇಳಲಾಗಿ, ಪುತ್ತಳಿಗಳಿಂತೆಂದವು – ಎಲೈ ರಾಯನೆ' ! ಕೇಳು. ಇದು ದೇವದತ್ತ ನಿಂಹಾಸ -, ನಾವು ದೇವ ಕನ್ನಿಕೆಯರು; ನನ್ನ ಹೆಸರೇನೆಂದರೆ : --೧, ಜಯವತಿ, ೨ ವಿಜಯವತಿ, ೩. ಇಳೆಯವತಿ, 3. ಸುರತಯೆ, ೫ ಆನಂದಸಂಜೀವಿನಿ, ೬. ರತಿವಿ, ಯ, ೭, ನವಮೋಹಿನಿ, V. ಪದ್ಮಾವತಿ, ೯ ಪ್ರಭಾವತಿ, ೦. ವಿಷ್ಣು ನಂದಿನಿ, ೧೧, ಅನಂಗಕೆ, ೧೦, ಇಂದ್ರಾವತಿ, ೧೩. ಕುರಂಗಸನೆ, ೧೪. ಲಾವಣ್ಯವತಿ, ೧೫, ಮೋಹಿನಿ, ೧೬, 1ಕುರಂಗಲೋಚನೆ,1 ೧೭. ಕಾಮ ಕಳೆ, ೧v, ರಚಂಡಿಕೆ, ೧೯. ವಿದ್ಯಾಧರಿ, ೨೦. ರತ್ನಾ ವತಿ, ೨೧ ಮದ ನಮೋಹಿನಿ ೦೩, ರತಿರವಿ, ೨3 ಹಂಸಗಮನೆ, ೨೫, ಇಂದ್ರಜಿತೆ, ೦೬. ತಿಲೋಕವಹಿಸಿ, ೦೭, ಕನಕಾವತಿ, V. ಅನಂಗಶಯನೆ, ೨೯. ಸಂಧ್ಯಾವಳಿ, ೩೦. ಕಾಮಕರ್ಣಿಕೆ, ೩೧, ಕರ್ಣಾವತಿ, ೩. ನಾನು ಲೋಚನೆ, ಈ ಹೆಸರುಗಳು ನಮಗೆ ನಾವು ವಿಕ್ರಮಾದಿತ್ಯನ ಸೇವಕರಲ್ಲ. ಮತ್ತೊಬ್ಬರ ಸೇವೆ ಮಾಡಿದವರಲ್ಲಿ ನಾವು ಪರಶಿವನ ಸೇವಕರು. ಅಬ ಆಕೆ ದೇವೇಂದ್ರನ ಊಳಿಗಮಾಡಿದರು. ಈ ಸಿಂಹಾಸನವನ್ನು ವಿಕ್ರಮಾ ದಿತ್ಯರಾಯನಿಗೆ ದೇವೇಂದ್ರನು ಕೊಟ್ಟು ದwಂದ ಅಒಳಿಕ ವಿಕ್ರಮಾದಿತ್ಯನ ಸೇವೆ ಮಾಡಿದವರು. ಇದನೇಯುವುದಕ್ಕೆ ನನ್ನ ವಿಕ್ರಮಾದಿತ್ಯರಾಯನ ಪಾ-1, ತುರಂಗವದನೆ, 3 ) S