ಪುಟ:ಬತ್ತೀಸಪುತ್ತಳಿ ಕಥೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yo ಕರ್ಣಾಟಕ ಕಾವ್ಯಕಲಾನಿಧಿ. ಶರ್ಮನ ಬಳಿಗೆ ಹೋಗಿ, ಆತನ ನಾನಾಪ್ರಕಾರದಿಂದ ಒಡಂಬಡಿಸಿ, ಅವನ ಕರೆತಂದು, ರೋಮಜಂಭೆಯಲ್ಲಿ ಕೂಡಿಸಿ, ಇನ್ನು ನೀನು ನಿನ್ನ ಮನವು ಚನೆಯಿಲ್ಲದೆ ಪತಿಸೇವೆಯಂ ಮಾಡಿಕೊಂಡು ಇರು ಎಂದು ಅವಳಿಗೆ ಬುದ್ದಿ ಗಲಿಸಿ-ಇಂಥ ದುರ್ನಡತೆಯನ್ನು ಮನಸ್ಸಿನಲ್ಲಿ ಇರಿಸಲಾಗದು ಎಂದು ಆತ ನಿಗೂ ಹೇಳಿ, ಇರ್ವರನ್ನೂ ಒಂದುಮಾಡಲಾಗಿ ; ಆಕೃಷ್ಣಶರ್ಮರಾಯ ಇವನಿಗೆ ಹದಿನೆಂಟು ಪೆಟ್ಟಿಗೆಯ ದ್ರವ್ಯನಂ ಕೊಡಲು, ಆಹಣವನ್ನು ಸಂಗಡ ಇದ್ದ ಬ್ರಾಹ್ಮಣನಿಗೆ ಕೊಟ್ಟು ಕಳುಹಿಸಿ, ಅಲ್ಲಿಂದ ಇಲ್ಲಿಗೆ ಬಂದು ಸುಖವಾಗಿಇದ್ದನು ಕಣಾ ! ಇ೦ತು ಕರ್ಣಾಟಭಾಷಾವಿರಚಿತವಾದ ವಿಕ್ರಮಾದಿತ್ಯ ರಾಯನ ಚರಿತ್ರೆಯಲ್ಲಿ ಪ್ರಭಾವತಿಯೆಂಬ ಪುತ್ತಳಿ ಪೇಳಿದ ಒಂಬತ್ತನೆಯ ಕಥೆ. 25 ಹತ್ತನೆಯ ಕಧ. ಹತ್ತನೆಯ ದಿವಸದಲ್ಲಿ ಭೋಜರಾಜನು ಸಾನ ದೇವತಾರ್ಚನೆ ಭೋ ಜನ ತಾಂಬೂಲ ತೀರಿಸಿಕೊಂಡು ಎಂದಿನಂತೆ ಚಿತ್ರಕರ್ತನ ಕೈಲಾಗಿನಲ್ಲಿ ಸಿಂಹಾಸನದ ಬಳಿಗೆ ಬಂದು ಬಲರ ಕಾಲಂ ನೀಡುವ ಸಮಯದಲ್ಲಿ ಆ ಸೋಪಾನದ ವಿಷ್ಣು ವಂದಿಸಿಯೆಂಬ ಪ್ರತಳಿಯು ಧಿಕ್ಕರಿಸಲಾಗಿ, ಭೋಜರಾ ಜನು ಬೇಕು ನಿಂಹಾಸನದಲ್ಲಿ ಕುಳಿತು, ಚಿತ್ರಶರ್ಮನಿಂದ ಹೇಳಿಸಿದ ಕಥೆ.- ಎಲೆ ಸುಳಯೆ, ಕೇಳು. ನನ್ನ ಭೋಜರಾಯನು ಧಾರಾಪುರ ದಲ್ಲಿ ಸುಖರಾಜ್ಯಗೆಯ್ಯುವಲ್ಲಿ ಬಂದುದಿನ ಜಲಕ್ರೀಡೆಗಾಗಿ ರಾಯನು ಹೋಲಿ ಟು, ತನ್ನ ಸಂಗಡ ಪಟ್ಟದರಸಿಯರು ಬಂಗಾರದ ೩ ಮರು ಪರಿಚಾರಕ ವನಿತೆಯರು ಸಹಿತ ಶೃಂಗಾರತೋಟದ ಸರೋವರದಲ್ಲಿ ತರತರದಿಂದ ಜಂತ್ರಿ)ಡೆಯಾಡಿ, ಮೇಲೆ ಬರುವ; ಅಲ್ಲೊಂದು ತಾವರೆಯ ಮೊಗ್ಗ ಕಂಡು, ಇದಕೊಂದು ಶ್ಲೋಕ ಹೇಳಿಸಬೇಕೆಂದು ಮನಸ್ಸಿನಲ್ಲಿ ಯೋಚಿಸಿ ಅರಮನೆಗೆ ಬಂದು, ಆ ಮೂಾನೆಯ ದಿವಸ ವರರುಚಿ ಮುಂತಾದ ಕವಿಗಳು ಮಂತ್ರಿಗಳು ಸಹಿತವಾಗಿ ಓಲಗಸಾಲೆಯಲ್ಲಿ ಕುಳಿತಿರುವ-ರಾಯನು ಇಂತಂದನು:-