ಪುಟ:ಬತ್ತೀಸಪುತ್ತಳಿ ಕಥೆ.djvu/೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕರ್ಣಾಟಕ ಕಾವ್ಯಕಲಾನಿಧಿ. ರಾಯನೂ ಸಿದ್ಧನೂ ರಾಜಬೀದಿಯಲ್ಲಿ ಬರುವಾಗ ಒಬ್ಬ ಕುಷ್ಠ ರೋಗಿ ರಾಯನಂ ಕಂಡು-ಎಲೈ ಮಹಾರಾಯನೇ ? ನಾನು ಗರುಡನ ಧ್ವನಿಗೆ ಶೇಷನು ಬಳಲಿದಂತೆ ಈರೋಗದಿಂದ ಕಷ್ಟಪಡುತ್ತ ಇದ್ದೇನೆ. ಈ ದಿನ ನನ್ನ ಶ್ರಮ ನಿನ್ನ ಸಂದರ್ಶನದಿಂದ ರಸ ಮುಟ್ಟಿದ ಲೋಹದಂತೆ ಇರಬೇಕು, ಎನ್ನಲಾಗಿ ; ಅವನ ಮಾತಿಗೆ ರಾಯನು ಹೋಮಕೂಂಡದಲ್ಲಿ ಹುಟ್ಟಿದ ಮಾವಿನ ಹಣ್ಣು ಕೊಡಲು; ಆಗ ಅವನ ರೋಗವು ಹೋಗಿ ಶರೀರ ಸುವ ಆrವಾಗಲಾಗಿ; ಆಬಳಿಕ ಅರಮನೆಗೆ ಬಂದು ಆ ಸಿದ್ದನಿಗೆ ಹತ್ತು ಸಾವಿರ ವರಹವು ಕೊಟ್ಟು ಕಳುಹಿಸಿ, ತಾನು ಸುಖವಾಗಿ ಇದ್ದನು, ಕಣಾ : ಇಂಥ ವೀರ ವಿತರಣವುಳ್ಳಡೆ ನಿಂಹಾಸನವನೆಂಟಲು, ಇಲ್ಲವೆ ಕೆಲಸಾರು. ಇ೦ತು ಕರ್ಣಾಟಭಾಷಾವಿರಚಿತವಾದ ವಿಕ್ರಮಾದಿತ್ಯರಾಯನ ಚರಿತ್ರೆಯಲ್ಲಿ ವಿಷ್ಣು ವಂದಿನಿಯೆಂಬ ಪುತ್ತಳಿ ಪೇಳಿದ ಹತ್ತನೆಯ ಕಥೆ. ಹನ್ನೊಂದನೆಯ ಕಥೆ. ಹನ್ನೊಂದನೆಯ ದಿವಸದಲ್ಲಿ ಭೋಜರಾಯನು ಸ್ನಾನ ದೇವತಾರ್ಚ ನ ಭೋಜನ ತಾಂಬೂಲವನ್ನು ತೀರಿಸಿಕೊಂಡು ಎಂದಿನಂತೆ ನಿಂಹಾಸನದ ಬಳಿಗೆ ಬಂದು ಬಂಗಾಲ ನೀಡುವ ಸಮಯದಲ್ಲಿ, ಆ ಸೋಪಾನದ ಅನಂ ಗಜೆಯೆಂಬ ಪುತ್ತಳಿಯು ಧಿಕ್ಕರಿಸಲಾಗಿ, ಭೋಜರಾಯನು ಬೇಯಿಸಿ ಸಿಂಹಾಸ ನದಲ್ಲಿ ಕುಳಿತು ಚಿತ್ರಕರ್ಮನಿಂದ ಹೇಳಿಸಿದ ಕಥೆ :- 1ಎಲೆ ಪುತ್ತಳಿಯ, ಕೇಳು. ನನ್ನ ಭೋಜರಾಯನು ಧಾರಾಪುರ ದಲ್ಲಿ ಸುಖಾಜ್ಯಂಗೆಯ್ಯುವಲ್ಲಿ ಒಂದು ದಿನ ಒಬ್ಬ ಮುನೀಶ್ವರನು ಪುಲಿಯ ತೋವಲಂ ಪೊದೆದು, ಹಾವುಗೆಯಂ ಮಟ್ಟಿ, ಜಡೆಗಳಂ ಬಿಟ್ಟು, ದಂಡಕೋಲು ಕಮಂಡುವಂ ಪಿಡಿದು, ರಾಯನ ಎದುರಿಗೆ ಬಂದು, ಆಶೀರ್ವಾದವ ಮಾಡ ಪಾ-1, ಎಲೆ ಪುತ್ತಳಿಯ ! ಕೇಳು. ಧಾರಾವುರದಲ್ಲಿ ನಮ್ಮ ಭೋಜಿ ರಾಯನು ದೊರೆತನವಂ ಮಾಡುತ್ತ ಒಂದುದಿನ ಒಡೋಲಗಂಗೊಟ್ಟು ಕುಳಿತಿರುವ ಸಮಯದಲ್ಲಿ ಕಾಳಿದಾಸ ವರರುಚಿ ಮೊದಲಾದ ವಿದ್ವಾಂಸರು ಕುಳಿತಿರಲು ; ರಾಯ ಕವೀಶ್ವರರೊಳು • ಕಿ೦ಭುಕ್ತಭುಕ್ಷಂ ?' ಎಂಬ ಎರಡು ಸಮಸ್ಯೆ ಹೇಳಿ, ಇದಕ್ಕೆ