ಪುಟ:ಬತ್ತೀಸಪುತ್ತಳಿ ಕಥೆ.djvu/೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬತ್ತೀಸಪyಳ ಕಥೆ. ಗಡ-ನೀವು ಸಕಲ ವಿದ್ಯವ ಬರ: ಚೋರವಿದ್ಯ ಬರುವುದೆ ? ಎನ್ನಲಾಗಿ;-ಇನ್ನು ಮೇಲೆ ಅಭ್ಯಾಸ ಮಾಡುವೆನೆಂದು ರಾಯನೊಡನೆ ಹೇಳಿ ಅಪ್ಪಣೆ ತೆಗೆದುಕೊಂಡುಹೋಗಿ, ಬಹು ಚೋರನಾದಂಥ ಸಹುದಾತನೆಂಬ ಮಾದಿಗನ ಮನೆಗೆ ನೀರು ತರುವುದು, ಹುಲ್ಲು ಹೊಲತೆಯಂ ತಂದು ಹಾಕು ವುದು-ಈಪಕಾರ ಮಾಡುತ್ತಿರುವ; ಒಂದು ದಿನ ಅಮಾದಿಗ ಕಂಡುಎಲೈ ಮಹಾಪುರುಷನೇ! ನನ್ನ ಮನೆಯ ಬಳಿ ಸಂಚಾರ ಯೋಗ್ಯವಿದು ನೀವು ತಿಳಿದು ಹುಲ್ಲಹಳೆಯಂ ತಂದು ಹಾಕುವ ಕಾರಣವೇನೆಂದು ಕೇಳ ಲಾಗಿ ; ವರರುಚಿ-ನಿನ್ನ ಚೋರವಿದ್ಯೆಯಂ ಕಲಿಯುವುದಕ್ಕಾಗಿ ಬಂದೆನು ಎನ್ನಲಾಗಿ; ಆ ಮಾತಿಗವನು-ನನ್ನ ಚೋರವಿದ್ಯೆ ಕಲಿಯುವುದಕ್ಕೆ ಠಕ್ಕು ೪ ಜಾಲಗಳಿರಬೇಕು. ನೀವು ವಿಪ್ರರು. ನಿಮಗಿದು ಬರಲಯದು ಎನ್ನಲಾಗಿ : ಸೀ ಹೇಳಿದಂತೆ ನಡೆಯುತ್ತೇನೆ ಎಂದು ಹೇಳಿ,ನಿನ್ನ ವಿದ್ಯೆ ಯ ಕಲಿಸು ಎನ್ನಲಾಗಿ, ಅವನು ತನ್ನ ಚೋರವಿದ್ಯೆಯನ್ನೆಲ್ಲಾ ಕಲಿಸಲಾಗಿ; ಅದನ್ನು ಕಲಿತು ರಾಯನ ಬಳಿಗೆ ಬಂದು ಕುಳ್ಳಿರಲಾಗಿ ; ರಾಯ ನವ ರತ್ನಖಚಿತವಾದ ತಟ್ಟೆಯಲ್ಲಿ ಕರ್ಪೂರವೀಳೆಯವ ತರಿಸಿಕೊಡಲಾಗಿ; ವರ ರುಜಿ ಆತಟ್ಟೆಯನ್ನು ಯಾರೂ ಕಾಣದೆ ಅಪಹರಿಸಿಕೊಂಡು ಇರುವುದನ್ನು ಆ ಹಡಪಿಗಂ ಕಂಡು ರಾಯನಿಗೆ ಹೇಳದೆ ಸುಮ್ಮನಿರಲಾಗಿ ; ರಾಯ ಓಲಗ ತೀರಿದಮೇಲೆ ಅರಮನೆಗೆ ಎದ್ದು ಹೋದನು. ಆ ಬಳಿಕ ವರರುಚಿ ತನ್ನ ಮನೆಗೆ ಹೋಗಿ ಇದನು. ಮರುದಿನ ರಾಯನು ಸದರಿನಲ್ಲಿ ಕುಳಿತಿರಲಾಗಿ ವೀಳೆಯ ತರಹೇಳಲು ; ವೀಳೆಯದ ತಟ್ಟೆಯಿಲ್ಲವೆಂದು ಗುಲ್ಲು ಹೇಳಲಾಗಿ, ಆ ಸುದ್ದಿಯ ರಾಯ ಕೇಳಿ ಹಡಗನ ಕರೆಸಿ-ತಟ್ಟೆ ಎಲ್ಲಿ ? ಎನ್ನಲಾಗಿ ; ಹಡಪಿಗೆ ವರರುಚಿ ತೆಗೆದುಕೊಂಡು ಹೋದರೆಂದು ಹೇಳುತ್ತಿರುವವರ ರುಚಿ ವೀರಾವೇಶವಂ ತಾಳಿ-ನಾ ಕಳ್ಳನೇ ಎಂದು ಹಡಪಿಗನ ಕೂಡ ಕೂಗಾಡುವುದು ಕಂಡು, ರಾಯನು ನೀವೇಕೆ ಕೂಗಾಡುತಿ ರಿ ? ಎನ್ನಲಾಗಿ; ತಟ್ಟೆಯ-ನಾನು ತೆಗೆದುಕೊಂಡೆನೆಂದು ನಿಮಗೆ ಆಕೆ ಮಾಡಿ ದುದಕಂದ ಕೂಗಾಡುವೆ ಎಂದು ಹೇಳಿದ ಮಾತಿಗೆ, ರಾಯ-ವರರುಜಿ ಕಳ್ಳರೇ ? ಎಂದು ಹಡಗನ ಮೇಲೆ ಕೋಪಿಸಲಾಗಿ ;-ಇವರ ಮೇಲೆ ನಾನು ಕಳವನುಂಟು ಮಾಡದೆ ಇದ್ದರೆ, ಆಗ ನಾನೇ ಕೊಡುವೆನು, ಎಂದ ವ