ಪುಟ:ಬತ್ತೀಸಪುತ್ತಳಿ ಕಥೆ.djvu/೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೩ ಬ ಬತ್ತೀಸಪುತ್ತಳಿ ಕಥೆ ಕೇಳ್ಳಯ್ಯಾ ಚಿತ್ರಶರ್ಮನೇ : ನಮ್ಮ ವಿಕ್ರಮಾದಿತ್ಯರಾಯನು ಈ ರಾಜ್ಯ ಪರಿಪಾಲಿಸುವಲ್ಲಿ ಒಂದುದಿನ ತನ್ನ ಸೇವಕಜನದಲ್ಲಿ ಒಬ್ಬನ ಕರೆದು ಅವನ ಪಥತ್ಸವ ನೋಡಬೇಕೆಂದು-ಈಶಾರಿನಲ್ಲಿ ಹೇಸಿಗೆಯಾದ ಗೀಜ ವಾಯನ ನೋಡಿ ಕರೆದುಕೊಂಡು ಬಾ, ಎಂದು ಕಟ್ಟಳೆ ಮಾಡಿ ಕಳುಹಲಾಗಿ; ಅಸೇವಕ ಪಟ್ಟಣದ ಬೀದಿಗಳಲ್ಲಿ ಹುಡುಕುತ್ತ ಬರುವಲ್ಲಿ ಒಬ್ಬನು ಬಾಯೊಳಗೆ ಅಡಕೆಯ ಹಾಕಿಕೊಂಡು, ಕೈಯಲ್ಲಿ ಎಲೆಯ ಹಿಡಿದು, ಹಾಗೆ ಯೆ ಹೊಟ್ಟೆಯುಬ್ಬರಿಸಿ ಬಹಿಶ್ಯಂಕೆಗೆ ಹೋಗಿ ಬಿಡುಗಚ್ಛೆ ಸಹಿತ ಕಂಡ ಕಂಡವರಿಗೆ ಸುಣ್ಣಕ್ಕೆ ಹಲ್ಲು ಕಿರಿಯುತ್ತಿರುವುದ ಕಂಡು, ಇವನೇ ಗೀಜ ವಾಯನೆಂದು, ಅವನ ರಾಯನ ಬಳಿಗೆ ಕರೆತಂದು ನಿಲ್ಲಿಸಿ, ಅವನ ವಿಚಾರವೆ ಆವ ರಾಯನಿಗೆ ಅಜಕೆಯಂ ಮಾಡಲಾಗಿ ; ರಾಯ ಸೇವಕನ ಚಾತು ರಕ್ಕೆ ಮೆಜಿ , ಆಸೇವಕನಿಗೆ ಬಹುಮಾನವಂ ಮಾಡಿ ಕಳುಹಿಸಿ, ಬಳಿಕ ಆಗಿಜಿವಾಯನ-ನಿನು ಆವ ದೇಶ ? ನಿನ್ನ ಕುಲವಾವುದು? ಹೀಗೆ ಎಲ್ಲ - ಬ ೧ ಕಿ. ") • : ... - ಮತ್ತೆ ತಲೆದೂಗುತ್ತಿರಲು, ನೀರನೆರೆದುದಕ್ಕೆ ಮಣ್ಣುದಕ್ಕೆ ರಾಯ೦ ಮೆಚ್ಚೆ, ಹಡ ಪಿಗಂಗೆ ಮತ್ತೂ ಕೈನೀಡಲು ಆ ಸವಾಲಕ್ಷ ಹೊನ್ನಿನ ಗಿಂಡಿಯಂ ಕೊಡಲದ ಪಾತ್ರವಾಡುವೆ ವೇತಿಗೆ ಕೊಟ್ಟು, ಮತ್ತೂ ಕೈ ನೀಡಲು, ಐವತ್ತು ಸಾವಿರ ಹೊನ್ನಿನ ಗಿಂಡಿಯ ನೀಯಲದಂ ನಾಟಕಗಿತ್ತು ಹಡಪಿಗಂ ಮತ್ತೂ ಕೈ ನೀಡಲು, ಹನ್ನೆರಡು ಸಾವಿರ ಹೊನ್ನ ಗಿಂಡಿಯನೀಯಲು, ಅದಂ ಹಡಪಿಗನ ಕೈಗೆ ಕೊಡಲು; ಸಮೀಪ ದಲ್ಲಿ ಕುಳಿತಿರುವ ಸಾಮಾಜಿಕರು ಕಂಡು -ಇಂತಪ್ಪ ತ್ಯಾಗವೇನು? ಎಂದು ಕೇಳಲಾ ರಾಯನಿಂತೆಂದನು: --ನಾನು ನೀರ ಕುಡಿಯುತ್ತಿರವಾಗ ತಲೆದೂಗಲದಂ ಹಡಸಿಗಂ ಕಂಡು, ಪಾತ್ರಕೆ ಮೆಚ್ಚಿ ತಲೆದೂಗಿದನೆ೦ದಖಿತು ಮತ್ತೂ ನೀರನೆರೆಯುತ್ತಿರಲು, ಮತ್ತೆ ತಲೆದೂಗುತ್ತಿರಲು, ನಾಟಕ೦ಗೆ ಉಚಿತವಂ ಕೊಡುವುದಕ್ಕೆ ಈ ಗಿಂಡಿಯಂ ಕೊಡು ಎಂದು ತಲೆದೂಗಿದನೆಂದು ಗಿಂಡಿ ಕೊಡಲು, ಅದಂ ನಾಟಕ೦ಗಿತ್ತು, ಮತ್ತು ತಲೆದೂಗಲು ಕಂಡು ಐವತ್ತು ಸಾವಿರ ಹೊನ್ನಿನ ಗಿಂಡಿಯಂ ಕೊಡಹೆ. ಟಿದನೆಂದ ತು ಆದಂ ಕೊಟ್ಟೆನು. ಆ ಗಿಂಡಿಯಂ ನಾಟಕಂಗೆ ಕೊಟ್ಟು ಮತ್ತೂ ತಲೆದೂಗಲು, ತನಗೆ ಉಚಿತವಂ ಕೊಡುವುದಕ್ಕೆ ತಲೆದೂಗಿದನೆಂಧು ಹನ್ನೆರಡು ಸಾವಿರ ಹೊನ್ನಿನ ಗಿಂಡಿಯಂ ಕೊಡಲದಂ ಹಡಪಿಗನ ಕೈಯಲ್ಲಿ ಕೊಟ್ಟೆನೆಂದು ಹೇಳ ರಾಯನ ನುಡಿಯಂ ಕೇಳು ಸಭೆಯೆಲ್ಲವೂ ಮೆಚ್ಚಿ ಕೊಂಡಾಡಿದರು. ಇಂತಪ್ಪ ತ್ಯಾಗಿ ಕಣಾ : ನಮ್ಮ ಭೋಜರಾಜನೆಂದು ನುಡಿದ ಚಿತ್ರಶರ್ಮನ ವಾಕ್ಯಮ ಕೇಳ ಪುತ್ತಳಿ. ಹೇಳಿದ ಉಪಕಥೆ--ಎಂದು ಬೇರೊಂದು ಪ್ರತಿಯಲ್ಲಿದೆ. 10